ರೈತಪರ ಪ್ರಾಮಾಣಿಕತೆ ಮರೆದ ಸುದ್ದಿವಾಹಿನಿ : ಖಾದ್ರಿ
ಶಿಗ್ಗಾವಿ 23 : ರೈತಪರ ನಿರಂತರವಾಗಿ 7 ವರ್ಷಗಳ ಕಾಲ ಪ್ರಾಮಾಣಿಕತೆ ನಿಷ್ಠೆಯಿಂದ ರೈತದ್ವನಿ ಸುದ್ದಿವಾಹಿನಿ ಸಾಗುತ್ತಾ ಬಂದಿದೆ ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ಸಾಗಲಿ ಹಾಗೂ ರೈತರ ದ್ವನಿಯಾಗಲಿ ಎಂದು ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ ಶುಭ ಹಾರೈಸಿದರು. ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರೈತದ್ವನಿ ಕ್ರಿಕೆಟ ಪಂದ್ಯಾವಳಿ ಉದ್ದೇಶಿಸಿ ಮಾತನಾಡಿದ ಅವರು ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯವಾಗಿದೆ ಎಂದರು. ರೈತ ದ್ವನಿ ವಾಹಿನಿಯ 7ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಹಾವೇರಿ ಜಿಲ್ಲಾ ಮಟ್ಟದ ಮುಕ್ತ ಹಾಪ ಪಿಚ್ ಕ್ರಿಕೆಟ್ ಟೂರ್ನಮೆಂಟ್ ಅನ್ನು ರೈತದ್ವನಿ ಸಂಪಾದಕ ಬಸವರಾಜ ಕುರಗೋಡಿ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ತಾಲೂಕಾ ದಂಡಾಧಿಕಾರಿ ರವಿ ಕೊರವರ, ಪುರಸಭೆ ಸದಸ್ಯೆ ವಸಂತಾ ಬಾಗೂರ, ರೈತ ಮುಖಂಡ ಬಸಲಿಂಗಪ್ಪ ನರಗುಂದ, ಯುವ ಮುಖಂಡ ಅರುಣ್ ಮೆಕ್ಕಿ, ವಿಠಲ್ ಭಜಂತ್ರಿ ಮಂಜುನಾಥ್ ಹೆಚ್, ಪ್ರದೀಪ ನಿಮಣ್ಣವರ, ವಿನಾಯಕ ನಾರಾಯಣಪುರ, ಆರ್ಯನ್ ಕುರಗೋಡಿ, ವಿಕಾಸ್ ಸಾಲಿಮಠ ಇತರರು ಉಪಸ್ಥಿತರಿದ್ದರು.