ಹುಕ್ಕೇರಿ 29: ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರವಾಗಿದೆ. ಆ ನಿಟ್ಟಿನಲ್ಲಿ ತಾಲೂಕಿನ ಯರನಾಳ ಗ್ರಾಮದ ಮಹಾಮಾತಾ ಕಾಳಿಕಾದೇವಿ ದೇವಸ್ಥಾನದ ಶಿಕ್ಷಣ ಸಂಸ್ಥೆ ಹೆಸರು ಮಾಡಿದೆಯೆಂದು ಶಾಸಕ ಉಮೇಶ ಕತ್ತಿ ಶಿಕ್ಷಣ ಸಂಸ್ಥೆಯ ನೂತನ ಕೊಠಡಿಗಳನ್ನು ವೀಕ್ಷಿಸಿ ಮಾತನಾಡಿದರು.
ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕರು ಸುಕ್ಷೇತ್ರದಿಂದ ನಡೆಯುತ್ತಿರುವ ಶಾಲೆಯ ವಿಜ್ಞಾನ, ಗೃಂಥಾಲಯ, ಕಂಪ್ಯೂಟರ್, ಕ್ರೀಡಾ ಕೊಠಡಿಗಳನ್ನು ವೀಕ್ಷಿಸಿದರು .ಇತ್ತೀಚೆಗೆ ನಡೆದ ಸುಕ್ಷೇತ್ರದ ಜಾತ್ರಾ ಮಹೋತ್ಸವಕ್ಕೆ ಆಗಮಿಸಲು ಆಗದ ಕಾರಣ ಇಂದು ಭೇಟಿ ನೀಡಿ ಶ್ರೀಗಳ ಆಶೀವರ್ಾದ ಪಡೆದಿರುವುದಾಗಿ ತಿಳಿಸಿದರು. ಸುಂದರ ಪರಿಸರದಲ್ಲಿರುವ ಶಾಲೆಯಲ್ಲಿ ಕಲಿಯುವ ಮಕ್ಕಳು ಧನ್ಯರು. ಮಕ್ಕಳಿಗೆ ಆಧುನಿಕ ಸೌಲಭ್ಯಗಳನ್ನು ಕಲ್ಪ್ಪಿಸಿರುವುದು ನಿಜಕ್ಕೂ ಶ್ಲಾಘನೀಯವೆಂದರು. ಆಧ್ಯಾತ್ಮಿಕ ಪರಿಸರದಲ್ಲಿ ಅಧ್ಯಯನ ಮಾಡುವುದು ಮಕ್ಕಳಲ್ಲಿ ಸಂಸ್ಕಾರ ಮೂಡಿಸುತ್ತದೆ ಎಂದರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ ಸುಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಸಲ್ಲಿಸಿದ ಕಾಣಿಕೆಯಲ್ಲಿ ಗ್ರಾಮೀಣ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಶ್ರಮಿಸುತ್ತಿರುವ ಶ್ರೀಗಳ ಕಾರ್ಯ ಮೆಚ್ಚುವಂತದ್ದು ಎಂದರು. ಸುಕ್ಷೇತ್ರದ ಅಧ್ಯಕ್ಷ ಮುಕುಂದ ಮಠದ ಅತಿಥಿಗಳನ್ನು ಸತ್ಕರಿಸಿದರು.
ಬೃಹ್ಮಾನಂದ ಶ್ರೀಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಬ್ಲಾಕ್ ಅಧ್ಯಕ್ಷ ಪರಗೌಡ ಪಾಟೀಲ, ಕಾಂಗ್ರೆಸ್ ಎಸ್.ಸಿ/ಎಸ್.ಟಿ ಘಟಕದ ಜಿಲ್ಲಾಧ್ಯಕ್ಷ ಸುರೇಶ ತಳವಾರ, ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಮರಡಿ, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಈರಣ್ಣಾ ಹಾಲದೇವರಮಠ, ಪಿಕಾಡರ್್ ಬ್ಯಾಂಕ್ ಅಧ್ಯಕ್ಷ ರಾಚಯ್ಯಾ ಹಿರೇಮಠ, ನಿದರ್ೇಶಕ ಅಪ್ಪಾಸಾಹೇಬ ಸಂಕನ್ನವರ, ಸಹಕಾರ ಮಹಾಮಂಡಳ ರಾಜ್ಯ ನಿದರ್ೇಶಕ ಬಿ.ಎಸ್.ಸುಲ್ತಾನಪೂರಿ, ಹುಕ್ಕೇರಿ ಪುರಸಭೆ ಮಾಜಿ ಉಪಾಧ್ಯಕ್ಷ ಗುರುರಾಜ ಕುಲಕಣರ್ಿ, ಸಿದ್ದಣ್ಣಾ ನೊಗನಿಹಾಳ, ಕೆಂಪಣ್ಣ ದೇಸಾಯಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.