ತಾಯಿಯ ಸಂಸ್ಕಾರ, ಗುರುವಿನ ಸಾಕ್ಷಾತ್ಕಾರ ದಿಂದ ತಶಿವಾಜಿಯಂಥ ವೀರ ಹುಟ್ಟುತ್ತಾನೆ : ಶಿವಲಿಂಗ ಸಿದ್ನಾಳ
ಮಹಾಲಿಂಗಪುರ 19 : ದೇಶ ಮತ್ತು ಧರ್ಮಕ್ಕಾಗಿ ಮಿಡಿಯುವ ಹೃದಯ, ಶತ್ರುವಿಗಾಗಿ ಸಿಡಿಯುವ ಕ್ರೋಧ ಇರುವ ರಾಷ್ಟ್ರೀಯ ಯೋಧ ಛತ್ರಪತಿ ಶಿವಾಜಿಯ ಶೌರ್ಯ ಆದರ್ಶನೀಯ ಎಂದು ಕೆಎಲ್‌ಇ ಕಾಲೇಜ್ ಉಪನ್ಯಾಸಕ ಶಿವಲಿಂಗ ಸಿದ್ನಾಳ ಹೇಳಿದರು. ಸ್ಥಳೀಯ ವಡಗೇರಿ ಪ್ಲಾಟ್‌ನ ಛತ್ರಪತಿ ಶಿವಾಜಿ ಮರಾಠ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ 395ನೇ ಶಿವಾಜಿ ಜಯಂತೋತ್ಸವದಲ್ಲಿ ಅವರು ಮಾತನಾಡಿ, ಎಲ್ಲ ತಾಯಂದಿರು ಜೀಜಾಬಾಯಿಯಂತಾದರೆ ಮನೆಗೊಬ್ಬ ರಾಷ್ಟ್ರೇ್ರಮಿ ಮಗ ಹುಟ್ಟುತ್ತಾನೆ. ದೇಶಕ್ಕಾಗಿ ಮಡಿದ ಯೋಧರಿಗೆ ಮತ್ತೆ ಹುಟ್ಟಿ ಬಾ ಎಂದು ಪೋಸ್ಟ್ ಹಾಕುವ ಬದಲು ಅವರ ದಾರಿಯಲ್ಲಿ ನಡೆದು ಅವರ ಸ್ಥಾನ ತುಂಬುವ ಆದರ್ಶವಂತರಾಗಬೇಕು ಎಂದರು. ಬಸವಾನಂದ ಶಾಲೆಯ ಮುಖ್ಯ ಶಿಕ್ಷಕ ಸಿದ್ದಾರೂಢ ಮುಗಳಖೋಡ ಮಾತನಾಡಿ, ಸಂಸ್ಕಾರದ ಶಿಕ್ಷಣ ಮತ್ತು ರಾಷ್ಟ್ರಾಭಿಮಾನ, ಯುದ್ಧ ಕಲೆ ಮತ್ತು ಕೌಶಲ್ಯಗಳ ಶಕ್ತಿಯಿಂದ ಮೊಘಲರನ್ನು ಬಗ್ಗು ಬಡಿದು, ಸಾಮ್ರಾಜ್ಯ ವಿಸ್ತರಿಸಿ ಹಿಂದೂ ಧರ್ಮ ಪ್ರತಿಷ್ಟಾಪಿಸಿ, ನ್ಯಾಯ, ಸಮಾನತೆಗಳಿಗಾಗಿ ತಮ್ಮನ್ನೇ ಸಮರ್ಿಸಿಕೊಂಡ ಚಕ್ರವರ್ತಿ ಶಿವಾಜಿ ಮಹಾರಾಜರ ರಾಷ್ಟ್ರೇ್ರಮ ಯುವಕರಿಗೆ ಆದರ್ಶವಾಗಿರಬೇಕು ಎಂದರು. ಕಾರ್ಯಕ್ರಮದಲ್ಲಿ ಶಿವಾಜಿ ಕಂಚಿನ ಮೂರ್ತಿಗೆ ಪೂಜೆ ಸಲ್ಲಿಸಿ ಪುಷ್ಪವೃಷ್ಟಿ ಮಾಡಲಾಯಿತು. ಇಬ್ಬರು ಪುಟಾಣಿಗಳು ಛತ್ರಪತಿ ಶಿವಾಜಿ ಬಗ್ಗೆ ಭಾಷಣ ಮಾಡಿದರು. ವೇದಿಕೆ ಮೇಲಿನ ಗಣ್ಯರನ್ನು ಸನ್ಮಾನಿಸಲಾಯಿತು. ಮಹಿಳೆಯರು ತೊಟ್ಟಿಲು ತೂಗಿ ಶಿವಾಜಿಯ ನಾಮಕರಣ ಮಹೋತ್ಸವ ನೇರವೇರಿಸಿದರು. ಮರಾಠಾ ಸಮಾಜದ ಹಿರಿಯರು, ಯುವಕರು ರಬಕವಿ-ಜಾಂಬೋಟಿ ರಾಜ್ಯಹೆದ್ದಾರಿಯ ಢವಳೇಶ್ವರ ರಸ್ತೆಯಲ್ಲಿನ ಶಿವಾಜಿ ವೃತ್ತದಲ್ಲಿನ ಶಿವಾಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಭವ್ಯ ಮೂರ್ತಿ ಮೆರವಣಿಗೆ :
ನಾಗಪ್ಪ ಜ್ಯೋತೆಪ್ಪ ಪವಾರ ಅವರು ದೇಣಿಗೆಯಾಗಿ ಸಮಾಜಕ್ಕೆ ನೀಡಿದ ಶಿವಾಜಿಯ ಭವ್ಯಮೂರ್ತಿಯನ್ನು ಬುದ್ನಿಪಿಡಿ ಮಹಾಲಿಂಗೇಶ್ವರ ದೇವಸ್ಥಾನದಿಂದ ಚನ್ನಮ್ಮ ವೃತ್ತ, ಗಾಂಧಿ ವೃತ್ತ, ಜವಳಿಬಜಾರ, ನಡಚೌಕಿ, ಬಸವ ವೃತ್ತ ಮಾರ್ಗವಾಗಿ ಸಮುದಾಯ ಭವನದ ವರೆಗೆ ತೆರೆದ ವಾಹನದಲ್ಲಿ ಬೈಕ್ ರಾ್ಯಲಿ ಮತ್ತು ಕರಡಿ ವಾದ್ಯಮೇಳದೊಂದಿಗೆ ಭವ್ಯ ಮೆರವಣೆಗೆ ನಡೆಸಲಾಯಿತು. ಮರಾಠ ಸಮಾಜದ ಅಧ್ಯಕ್ಷ ಮಹೇಶ ಜಾಧವ, ರಾಮಚಂದ್ರ ಪವಾರ, ಅರ್ಜುನ ಮೋಪಗಾರ, ಮಲ್ಲಪ್ಪ ಅಂಬಣ್ಣಗೋಳ, ಮಹಾದೇವ ಸಾವಂತ, ಆನಂದ ಪವಾರ, ಸುರೇಶ ಶಿಂಧೆ, ನೇತಾಜಿ ಶಿಂಧೆ, ಸುರೇಶ ಜಾಧವ, ಮಹೇಶ ಜಾಧವ, ಜ್ಯೋತೆಪ್ಪ ಪವಾರ, ಸೇರಿದಂತೆ ಹಲವರು ಮರಾಠ ಸಮಾಜದ ಹಿರಿಯರು, ಯುವಕರು, ಮಹಿಳೆಯರು ಇದ್ದರು.