ಜಿ ಸಿ ಬಯ್ಯಾರೆಡ್ಡಿ ನಿಧನ ಭಾವಪೂರ್ಣ ಶ್ರದ್ಧಾಂಜಲಿ
ಇಂಡಿ 05 : ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಹಾಗೂ ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕಾಮ್ರೇಡ್ ಜಿ.ಸಿ ಬಯ್ಯಾರೆಡ್ಡಿ ನಿಧನರಾದ ಸುದ್ದಿ ತಿಳಿದು ಇಂಡಿ ತಾಲ್ಲೂಕಿನ ಬಸನಾಳ ಗ್ರಾಮದ ಕನಕದಾಸರ ವೃತ ಬಳಿ ವಿಜಯಪೂರ ಜಿಲ್ಲೆಯ ಭಾರತ ಕಮ್ಯೂನಿಸ್ಟ್ ಪಕ್ಷದ (ಮಾರ್ಕ್ಸವಾದಿ) ಕಾರ್ಯದರ್ಶಿಗಳು ಹಾಗೂ ರಾಜ್ಯ ಸಮಿತಿ ಸದಸ್ಯರಾದ ಭೀಮರಾಯ ಪೂಜಾರಿ ಅವರ ನೇತೃತ್ವದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹಲವು ವರ್ಷಗಳಿಂದ ಅವರಿಗೆ ಉಸಿರಾಟ ಸಮಸ್ಯೆ ಬಳಲುತ್ತಿದ್ದರು, ಇತ್ತೀಚೆಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು ಎಂದು ಇಲ್ಲಿ ಸ್ಮರಿಸಬಹುದಾಗಿದೆ.ಈ ಸಂದರ್ಭದಲ್ಲಿ ರೈತರಾದ ಮಲ್ಲು ಸಾಹುಕಾರ, ಲಕ್ಷ್ಮಣ ಬಡಿಗೇರ,ಸೋಮನಿಂಗ ಕಾಳಗಿ, ಪರಸ್ಪರ ಮೇಟ್ಟಗಾರ, ಮಲ್ಲಿಕಾರ್ಜುನ ಬಗಲಿ ಸೋಮನಿಂಗ ಖಜನಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.