ಬಣ್ಣದೋಕುಳಿಯಲ್ಲಿ ಮಿಂದೆದ್ದ ಯುವ ಸಮೂಹ
ಹೂವಿನಹಡಗಲಿ 16: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಹೋಳಿ ಹಬ್ಬದ ಪ್ರಯುಕ್ತಮಹಿಳೆಯರು, ಯುವಕರು, ಮಕ್ಕಳು ಪರಸ್ಪರ ಬಣ್ಣ ಹಚ್ಚುವ ಮೂಲಕ ಸಂಭ್ರಮದಿಂದ ಶನಿವಾರ ಹೋಳಿಯನ್ನು ಆಚರಿಸಿದರು. ಹಿಂದೂ ಮಹಾಗಣಪತಿ ಸಮಿತಿಯಿಂದ ತೇರು ಹನುಮಪ್ಪ ದೇಗುಲದ ಆವರಣದಲ್ಲಿ ಹೋಳಿ ಉತ್ಸವದಲ್ಲಿ ಕೃತಕಾಮಳೆಯಲ್ಲಿ ಶಾಸಕ ಕೃಷ್ಣನಾಯಕ ಸೇರಿದಂತೆ ಚಿಕ್ಕ ಮಕ್ಕಳಿಂದ ಹಿಡಿದು ಯುವಕರು ಮಹಿಳೆಯರು ಡಿಜೆಗೆ ಹೆಜ್ಜೆಹಾಕಿ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಿದರು.ಯಾವುದೇ ಆಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಆರಕ್ಷಕ ಸಿಬ್ಬಂದಿ ಕಟ್ಟೆಚ್ಚರವಹಿಸಿದ್ದರು. ಪೊಲಿಸ್ ಸಿಬ್ಬಂದಿಗೂ ಬಣ್ಣಹಚ್ಚುವ ಮೂಲಕ ಜನಸ್ನೇಹಿ ಪೊಲೀಸರಾಗಿ ಸಾರ್ವಜನಿಕರ ಜೊತೆ ಸಹಕರಿಸಿದ್ದು ವಿಶೇಷವೆನಿಸಿತು.