ಹಿಂದುಳಿದ ವರ್ಗದವರಿಗೆ ಅಲ್ಪಸಂಖ್ಯಾತರಿಗೆ ಬಹುದೊಡ್ಡ ಕೊಡುಗೆ
ಸಿಂದಗಿ 08: ಹಣಕಾಸು ಸಚಿವ ಸಿಎಂ ಸಿದ್ದರಾಮಯ್ಯನವರು ಮಂಡಿಸಿದ ಈ ಬಾರಿಯ ಬಜೆಟ್ ಕರುನಾಡಿನ ಏಳು ಕೋಟಿ ಜನತೆಯ ಉಸಿರಾಗಿದೆ. ಹಿಂದುಳಿದ ವರ್ಗದವರಿಗೆ ಅಲ್ಪಸಂಖ್ಯಾತರಿಗೆ ಬಹುದೊಡ್ಡ ಕೊಡುಗೆ ನೀಡುವ ಮೂಲಕ ಅವರ ಬದುಕನ್ನು ಹಸನು ಮಾಡಿದ್ದಾರೆ. ರೈತರಿಗೆ ಯಾವ ಸರ್ಕಾರಗಳು ನೀಡದಂತ ಮಹತ್ವವಾದ ಯೋಜನೆಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಘೋಷಣೆಯಾಗಿದೆ. ಮೂಲಭೂತ ಸೌಕರ್ಯಗಳು ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಹೆಚ್ಚು ಹೆಚ್ಚು ಅನುದಾನವನ್ನು ನೀಡಿದ್ದಾರೆ. ಶೈಕ್ಷಣಿಕ ಕ್ಷೇತ್ರ ಅಭಿವೃದ್ಧಿಯಾಗುವಲ್ಲಿ ಶಾಲೆಗಳ ಪಾತ್ರ ದೊಡ್ಡದು. ಹೀಗಾಗಿ ರಾಜ್ಯದಲ್ಲಿ ಹೊಸದಾಗಿ ಶಾಲೆಗಳನ್ನು ಪ್ರಾರಂಭಿಸಲು ಈ ಬಜೆಟ್ ಅನುಕೂಲ ಮಾಡಿಕೊಟ್ಟಿದೆ. ನನ್ನ ಮತ ಕ್ಷೇತ್ರದ ನೂತನ ತಾಲೂಕ ಕೇಂದ್ರವಾದ ಆಲಮೇಲ ಪಟ್ಟಣದಲ್ಲಿ ಪ್ರಜಾಸೌಧವನ್ನು ನಿರ್ಮಾಣ ಮಾಡಲು ಹಾಗೂ ಚಡಚಣದಿಂದ ಗಾಣಗಾಪುರದವರೆಗೆ ರಸ್ತೆ ನಿರ್ಮಾಣದ ಯೋಜನೆಗೆ ಅನುಮೋದನೆ ನೀಡಿರುವುದು ಅತ್ಯಂತ ಸಂತಸ ತಂದಿದೆ. ರಾಜ್ಯದ ಹಲವು ಜಿಲ್ಲೆಗಳು ವಿಭಾಗಗಳಿಗೆ ವಿಶೇಷ ಅನುದಾನ ಬಂಪರ್ ಕೊಡುಗೆ ಹಾಗೂ ಪ್ರಮುಖ ಯೋಜನೆಗಳನ್ನು ಈ ಬಾರಿಯ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಮೀನುಗಾರಿಕೆ, ಚಿತ್ರೋದ್ಯಮ, ಶಿಕ್ಷಣ, ಸಣ್ಣ ಕೈಗಾರಿಕೆ, ಇಂಧನ ಇಲಾಖೆ, ಕಂದಾಯ ಇಲಾಖೆ, ನೀರಾವರಿ ಇಲಾಖೆ, ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳಿಗೆ ನೂರಾರು ಯೋಜನೆಗಳನ್ನು ನೀಡಿದ್ದು ನೋಡಿದರೆ ರಾಜ್ಯ ಅತ್ಯಂತ ವೇಗವಾಗಿ ಅಭಿವೃದ್ಧಿ ಪಥದ ಕಡೆ ಸಾಗುತ್ತಿದೆ. ರಾಜ್ಯ ಸರ್ಕಾರ ಕೇವಲ ಗ್ಯಾರಂಟಿ ಯೋಜನೆಗಳ ಸರ್ಕಾರ ಅಲ್ಲ ಗ್ಯಾರಂಟಿ ಸಾರ್ವಜನಿಕರ ಸೇವೆಯ ಸರ್ಕಾರವಾಗಿದೆ ಎಂದು ಸಿಂದಗಿ ಶಾಸಕ ಅಶೋಕ ಮನಗೂಳಿ ಅಭಿಪ್ರಾಯ ಪಟ್ಟಿದ್ದಾರೆ.