ಕನ್ನಡದ ಒಬ್ಬ ಶ್ರೇಷ್ಠ ಹಾಸ್ಯಕವಿ ಎಂ.ಡಿ. ಗೋಗೇರಿ : ಮಹಾದೇವ ಸತ್ತಿಗೇರಿ

ಕನ್ನಡದ ಒಬ್ಬ ಶ್ರೇಷ್ಠ ಹಾಸ್ಯಕವಿ ಎಂ.ಡಿ. ಗೋಗೇರಿ : ಮಹಾದೇವ ಸತ್ತಿಗೇರಿ A great Kannada humorist, M.D. Gogeri: Mahadeva Sattigeri


       ಧಾರವಾಡ 22:   ದಿ. ಎಂ.ಡಿ. ಗೋಗೇರಿ ತಮ್ಮ ಹಾಸ್ಯದ ಮೂಲಕವೇ ಸಾಮಾಜಿಕ ಪ್ರಜ್ಞೆ ಹಾಗೂ ಹಾಸ್ಯ ಪ್ರಜ್ಞೆ ಬೆಳೆಸಿದ ಕನ್ನಡದ ಒಬ್ಬ ಶ್ರೇಷ್ಠ ಹಾಸ್ಯಕವಿಯಾಗಿದ್ದರು ಎಂದು ಅಂತಾರಾಷ್ಟ್ರೀಯ ಹಾಸ್ಯ ಕಲಾವಿದರಾದ ಶಿಕ್ಷಕ ಮಹಾದೇವ ಸತ್ತಿಗೇರಿ ಅಭಿಪ್ರಾಯಪಟ್ಟರು. 

ಕರ್ನಾಟಕ ವಿದ್ಯಾವರ್ಧಕ ಸಂಘವು, ಎಂ.ಡಿ.ಗೋಗೇರಿ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಎಂ.ಡಿ.ಗೋಗೇರಿ ಕಾವ್ಯದಲ್ಲಿ ಹಾಸ್ಯ’ ವಿಷಯ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡತ್ತಿದ್ದರು. 

ಮುಂದುವರಿದು ಮಾನತಾಡಿದ ಅವರು, ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಾಸಬದ್ಧ ಪದಗಳುಳ್ಳ ಹಾಡುಗಳನ್ನು ರಚಿಸಿ, ಹಾಡಬಲ್ಲ ಓರ್ವ ಶಿಕ್ಷಕರಲ್ಲಿ  ಎಂ.ಡಿ. ಗೋಗೇರಿ ಸಹ ಒಬ್ಬರು. ವಿದ್ಯಾರ್ಥಿಗಳಿಗೆ ನಾಟಕ ಹಾಗೂ ಪ್ರಹಸನದ ತರಬೇತಿಯನ್ನು ನೀಡುತ್ತಾ ಮಕ್ಕಳಲ್ಲೂ ಭಾವೈಕ್ಯತೆಯ ಪ್ರಜ್ಞೆ ಮೂಡುವಂತೆ ಮಾಡಿದವರು.ಅವರರೆಡಿಯೋ ನಾಟಕಗಳೂ ಬಹಳ ಜನಮನ್ನಣೆ ಪಡೆದಿದ್ದವು. ಸಮಾಜದ ಅಂಕು-ಡೊಂಕುಗಳನ್ನು ಎತ್ತಿ ತೋರಿಸಿ ಹಾಡಿನ ಮೂಲಕವೇ ಸಾಮರಸ್ಯ ಉಂಟು ಮಾಡಿದವರಾಗಿದ್ದರು. ಸುಶ್ರಾವ್ಯವಾಗಿ ಹಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದ ಅವರು ಪಾಠ ಬೋಧನೆಯ ಸಂದರ್ಭದಲ್ಲಿಯೂ ನಾಟಕೀಯ ಪದ್ಧತಿಯ ಮೂಲಕ ಹಾವಭಾವದಿಂದ ಬೋಧನೆ ಮಾಡುತ್ತಿದ್ದರು. 

‘ಚುನಾವಣೆಗೆ ನಿಂತ ನಮ್ಮ ಕಡೇಮನಿ ಹನುಮಂತ’ ಮತ್ತು ‘ಹಚ್ಚೇವು ಕೂದಲಿಗೆಕಪ್ಪ’ ಗೋಡ್ರೇಜಕಪ್ಪ...’ ಎಂಬ ಎರಡೂ ಹಾಡಗಳು ಜನಮಾನಸದಲ್ಲಿ ಇನ್ನೂ ಜೀವಂತವಾಗಿವೆ. ಈ ಹಾಡುಗಳಲ್ಲಿ ರಾಜಕೀಯ ವಿಡಂಬನೆ ಇದೆ.ನಮ್ಮ ಬದುಕಿನಆಧುನಿಕತೆಇದೆ.ಒಟ್ಟು 35 ಕ್ಕೂ ಹೆಚ್ಚು ಸಾಹಿತ್ಯ ಕೃತಿ ರಚಿಸಿದ ಅವರುಕನ್ನಡ ಸಾರಸ್ವತ ಲೋಕ ಶ್ರೀಮಂತಗೊಳಿಸಿ ಹಾಸ್ಯಕವಿಯಾಗಿದ್ದಾರೆ ಎಂದು ಹೇಳಿದರು. 

ಕ.ವಿ.ವ. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ದಿ.ಎಂ.ಡಿ. ಗೋಗೇರಿಒಬ್ಬಅಪರೂಪದ ಶಿಕ್ಷಕರಾಗಿದ್ದವರು. ಅವರು ಯಾವುದೇ ಜಾತಿ-ಮತಕ್ಕೆ ಸೀಮಿತವಾಗದೇ ಸರ್ವಧರ್ಮಗಳನ್ನು ಸಮಭಾವದಿಂದ ಕಂಡ ಕವಿಗಳು, ನಾವೆಲ್ಲಾಒಂದೇ ಎಂಬ ಭಾವನೆಯ ಭಾವೈಕ್ಯತೆಯ ಕವಿಗಳಾಗಿದ್ದರು. ಹಾಸ್ಯದ ಮೂಲಕವೇ ಸಾಮರಸ್ಯದ ಕೊಂಡಿಯಾಗಿ ಕೆಲಸ ಮಾಡಿದವರು. ಅವರ ಹಾಸ್ಯ ಪ್ರಜ್ಞೆ ಇಂದಿನ ಶಿಕ್ಷಕರಿಗಿಲ್ಲದಿರುವುದು ವಿಪರ್ಯಾಸ ಎಂದರು. 

ಅಧ್ಯಕ್ಷತೆ ವಹಿಸಿ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಮಾತನಾಡಿದರು. ದತ್ತಿದಾನಿಗಳ ಪರವಾಗಿ ಉಪಸ್ಥಿತರಿದ್ದ ಎಸ್‌.ಆರ್‌. ಗೋಗೇರಿ ತಮ್ಮ ಮಾವನವರ ಸರಳ ಬದುಕು ಕೌಟುಂಬಿಕ ಹಾಸ್ಯ ಪ್ರಸಂಗ ಕುರಿತು ಮಾತನಾಡಿದರು. 

ತುಂಗಭದ್ರಾ ಮಹಿಳಾ ಮಂಡಳದ ಸದಸ್ಯರು ಆರಂಭದಲ್ಲಿ ಪ್ರಾರ್ಥನೆ ನಡೆಸಿಕೊಟ್ಟರು. ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ಶಿವಾನಂದ ಭಾವಿಕಟ್ಟಿ ನಿರ್ವಹಿಸಿದರು. ವೀರಣ್ಣ ಒಡ್ಡೀನ ವಂದಿಸಿದರು. 

ಕಾರ್ಯಕ್ರಮದಲ್ಲಿ ಸತೀಶ ತುರಮರಿ, ಶಂಕರ ಕುಂಬಿ, ಎಂ.ಎಂ.ಚಿಕ್ಕಮಠ, ಶಂಭಯ್ಯ ಹಿರೇಮಠ, ಎಸ್‌.ಎಸ್‌. ಕಟ್ನೂರ, ಬಿ.ಕೆ. ಹೊಂಗಲ, ಎಫ್‌. ಬಿ. ಕಣವಿ, ಸುಮಂಗಲಾ ಕುಲಕರ್ಣಿ, ಸದಾಶಿವ ಜನಗೌಡರ, ನಾಗರಾಜ ಹಂಗಳಕಿ, ಪ್ರೇಮಾ ಹಿರೇಮಠ, ಕಲಾವತಿ ಹೂಗಾರ, ವಿದ್ಯಾದೇಸಾಯಿ, ಜಯಶ್ರೀ ಹುಲಬತ್ತಿ, ಕೆ.ಎಂ.ಅಂಗಡಿ ಸೇರಿದಂತೆ ಗೋಗೇರಿ ಪರಿವಾರದವರು ಕಾರ್ಯಕ್ರಮದಲ್ಲಿದ್ದರು.