ರನ್ನ ವೈಭವ ರಥಯಾತ್ರೆಗೆ ಭವ್ಯ ಸ್ವಾಗತ
ಮಹಾಲಿಂಗಪುರ, 17; ರನ್ನ ಬೆಳಗಲಿಯಿಂದ ಮಹಾಲಿಂಗಪುರಕ್ಕೆ ಆಗಮಿಸಿದ ರನ್ನ ವೈಭವ ರಥಯಾತ್ರೆಗೆ ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ಸ್ವಾಗತಿಸಿ ಪೂಜೆ ಸಲ್ಲಿಸಲಾಯಿತು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕರಡಿ ಮಜಲು, ಡೊಳ್ಳು ಕುಣಿತ ಸಹಿತ ಮಂಗಲವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಶಾಸಕ ಸಿದ್ದು ಸವದಿ, ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ, ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ರಬಕವಿ-ಬನಹಟ್ಟಿ ತಹಶಿಲ್ದಾರ ಗೀರೀಶ ಸ್ವಾದಿ, ಉಪಾಧ್ಯಕ್ಷೆ ಶೀಲಾ ಭಾವಿಕಟ್ಟಿ, ಚೇರಮನ್ ಅಬ್ದುಲ್ ರಜಾಕ ಬಾಗವಾನ, ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಬಿಜೆಪಿ ಮುಖಂಡ ಸುರೇಶ ಅಕ್ಕಿವಾಟ, ಪುರಸಭೆ ಸದಸ್ಯರಾದ ಶೇಖರ ಅಂಗಡಿ, ಬಲವಂತಗೌಡ ಪಾಟೀಲ, ಚನಬಸು ಯರಗಟ್ಟಿ, ಬಸವರಾಜ ಕರೆಹೊನ್ನ, ಶಿವಾನಂದ ಅಂಗಡಿ, ಗಣ್ಯರಾದ ಮಹಾಲಿಂಗ ಮಾಳಿ, ಚನ್ನಪ್ಪ ಪಟ್ಟಣಶೆಟ್ಟಿ, ಲಕ್ಷ್ಮಣ ಮಾಂಗ, ನಜೀರ ಝಾರೆ, ಜಿ.ಎಸ್. ಗೊಂಬಿ, ಸಂಜು ಚನ್ನಾಳ, ಅರ್ಜುನ ದೊಡಮನಿ, ಆನಂದ ಬಂಡಿ, ಈರ್ಪ ಸೊನ್ನದ, ಬಿ.ಎನ್. ಅರಕೇರಿ, ವಿಜಯಕುಮಾರ ಕುಳಲಿ, ಪಿಎಸ್‌ಐ ಕಿರಣಕುಮಾರ ಸತ್ತಿಗೇರಿ, ಮನೋಹರ ಕಲಾಲ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.