ಮುಗಳಖೋಡ 20: ಪಟ್ಟಣದ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದಿಂದ ಸಾಯಿಬಾಬಾ ಮೂತರ್ಿ ಪ್ರತಿಷ್ಠಾಪನದ 6ನೇ ವಾಷರ್ಿಕೋತ್ಸವ ಹಾಗೂ ಶಾಲಾ-ಕಾಲೇಜುಗಳ ಉದ್ಘಾಟಣೆ ಸಮಾರಂಭವು ನಡೆಯಿತು.
ಬ.ನೀ.ಕುಲಿಗೋಡ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಸ್ಥಾಪಿಸಲಾದ ಸಾಯಿಬಾಬಾರ ಮೂತರ್ಿಗೆ 6ನೇ ವಾಷರ್ಿಕೋತ್ಸವ ಅಂಗವಾಗಿ ಬೆಳಿಗ್ಗೆ ಸಾಯಿಬಾಬಾರ ಮೂತರ್ಿಗೆ ರುದ್ರಾಭಿಷೇಕ ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿದವು.
ನಂತರ ಸಂಸ್ಥೆಯ ಕಾರ್ಯದಶರ್ಿ ಪಿ.ಬಿ.ಖೇತಗೌಡರ ಅವರ ಮನೆಯಿಂದ ಬ.ನೀ.ಕುಲಿಗೋಡ ಸಂ.ಪ.ಪೂರ್ವ ಕಾಲೇಜುವರೆಗೆ ಬೆಳ್ಳಿ ರಥೋತ್ಸವದಲ್ಲಿ ಸಾಯಿಬಾಬಾರ ಭಾವಚಿತ್ರದ ಭವ್ಯ ಮೆರವಣಿಗೆಯು ಸಡಗರ ಸಂಭ್ರಮದಿಂದ ನಡೆಯಿತು,
ಸಮಾರಂಭದಲ್ಲಿ ಶಾಲಾ ವಿದ್ಯಾಥರ್ಿಗಳಿಂದ ಕುಂಭ, ಆರತಿ, ಹಾಗೂ ಚೌಡಕಿ ಮಜಲು, ಕರಡಿ ಮಜಲು, ಮೊದಲಾದ ಸಕಲ ವಾದ್ಯ ಮೇಳದೊಂದಿಗೆ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಅಪಾರ ಜನಸ್ತೋಮದೊಂದಿಗೆ ಸಾಗಿತ್ತಾ, ಶಾಲಾ ಮಕ್ಕಳಿಂದ ಸಾಯಿಬಾಬಾ, ಸ್ವಾಮಿ ವಿವೇಕಾನಂದರ, ಮಹಾತ್ಮಾ ಗಾಂಧಿ, ಕಿತ್ತೂರ ಚನ್ನಮ್ಮಾ, ಹಾಗೂ ಹಲವಾರು ವೇಷಧಾರಿಗಳು ಮೆರವಣಿಗೆಯಲ್ಲಿ ಜನರಿಗೆ ಆಕರ್ಷಕವಾಯಿತು. ಸುಮಾರು 12 ಗಂಟೆಗೆ ಮೆರವಣಿಗೆಯು ಶಾಲಾ ಆವರಣ ಬಂದು ತಲುಪಿತು.
ನಂತರ ಶಾಲಾ ಕಾಲೇಜುಗಳ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಉದ್ಘಾಟನೆ ಮಾಡಿದ ಪ್ರತಾಪರಾವ ಪಾಟೀಲ ಅವರು ಸಾಯಿಬಾಬಾರ ಪವಾಡ ಅಪಾರವಾದದ್ದು. ಅವರ ಸ್ಮರಣೆ ಮಾಡುತ್ತಾ ಆಟ-ಪಾಠಗಳಲ್ಲಿ ಭಾಗವಹಿಸಿ ಒಳ್ಳೆಯ ವಿದ್ಯಾಥರ್ಿಗಳಾಗಲೆಂದು ಹೇಳಿದರು.
ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಡಾ. ಸಿ.ಬಿ.ಕುಲಿಗೋಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಬಂದಂತ ಜನರಿಗೆ ಮಾಧವಾನಂದ ಭವನದ ಹತ್ತಿರ ಮಹಾದಾಸೋಹ ಮನೆಯಲ್ಲಿ ಅನ್ನಪ್ರಸಾದ ನೆರವೇರಿತು.
ಸಂಸ್ಥೆಯ ಅಧ್ಯಕ್ಷ ಸಂಜಯ ಕುಲಿಗೋಡ, ಹಿರಿಯರಾದ ಎಮ್.ಎಸ್.ಗೋಕಾಕ. ವಸಂತ ಹೋಳಕರ(ವಕೀಲರು). ರಮೇಶ ಖೇತಗೌಡರ, ಪ್ರಕಾಶ ಆದಪ್ಪಗೋಳ, ಪಿ.ಬಿ.ಖೇತಗೌಡರ, ಯಮನಪ್ಪ ಬಾಬಣ್ಣವರ, ಎಲ್.ಆರ್.ಗೋಕಾಕ, ಮಾರುತಿ ಹಿಪ್ಪರಗಿ, ಅಶೋಕ ಭಾಗಿ, ರಾಮಣ್ಣಾ ಕಾಲತಿಪ್ಪಿ, ಶಿವಬಸು ಕಾಪಸಿ, ರಮೇಶ ಕಾಪಸಿ, ಶಿವಪುತ್ರ ಯಡವನ್ನವರ, ಪಿ.ಎಮ್.ಕುಲಿಗೋಡ, ಆಡಳಿತ ಮಂಡಳಿಯ ಸರ್ವಸದಸ್ಯರು, ಶಾಲಾ ಕಾಲೇಜಿನ ಪ್ರಾಚಾರ್ಯರು ಹಾಗೂ ಸಿಬ್ಬಂದಿಯವರು, ವಿದ್ಯಾಥರ್ಿ ವೃಂದದವರು ಮುಂತಾದವರು ಪಾಲ್ಗೊಂಡಿದ್ದರು.