ಹೋರಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ರೈತ

ಲೋಕದರ್ಶನ ವರದಿ

ಮುದ್ದೇಬಿಹಾಳ 22:ಮಗಡಾ ಕೊರೆದು ಮುಖದಲ್ಲಿ ಭಾರೀ ಗಾಯವಾಗಿ ಹುಳ ಬಿದ್ದು ಸಂಕಟಪಡುತ್ತಿದ್ದ ಬಿಡಾಡಿ ಹೋರಿಯೊಂದನ್ನು ಹಿಡಿದು ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಘಟನೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ. ಇಲ್ಲಿನ ಕಾಂಗ್ರೆಸ್ ಕಾಮರ್ಿಕ ಘಟಕದ ಅಧ್ಯಕ್ಷ ಇಬ್ರಾಹಿಂ ಮುಲ್ಲಾ ಅವರು ಹೊಲವೊಂದರಲ್ಲಿ ನೋವಿನಿಂದ ಒದ್ದಾಡುತ್ತ ಮಲಗಿದ್ದ ಈ ಹೋರಿಯನ್ನು ನೋಡಿದ್ದರು. ಪುರಸಭೆ ಮಾಜಿ ಅಧ್ಯಕ್ಷ ಶ್ರಿಂಗಾರಗೌಡ ಪಾಟೀಲ, ಮುತ್ತು ವಡವಡಗಿ ಮತ್ತು ತಮ್ಮ ಮಕ್ಕಳೊಂದಿಗೆ ಹೋರಿಗಾಗಿ ಹುಡುಕಾಟ ನಡೆಸಿದರೂ ಹೋರಿ ಸಿಕ್ಕಿರಲಿಲ್ಲ. ಕೊನೆಗೆ ಮಂಗಳವಾರ ಮದ್ಯಾಹ್ನ ಹೋರಿ ಹಿಡಿದು ಬಿಇಓ ಕಚೇರಿ ಹತ್ತಿರ ಕಟ್ಟಿ ಹಾಕಲಾಗಿತ್ತು. ರೈತರೂ ಆಗಿರುವ ಪುರಸಭೆ ಸದಸ್ಯ ಬಸಪ್ಪ ತಟ್ಟಿ, ಗುಂಡಪ್ಪ ತಟ್ಟಿ, ಈರಪ್ಪ ಸಣಗೇರಿ, ಲಾಲಸಾ ಗುರಿಕಾರ ಮತ್ತಿತರರು ಹೋರಿಯನ್ನು ನೆಲಕ್ಕೆ ಕೆಡವಿ ಅದರ ಮುಖಕ್ಕೆ ಹಾಕಿದ್ದ ಮಗಡಾ ತುಂಡರಿಸಿ ಗಾಯಕ್ಕೆ ಔಷಧೋಪಚಾರ ಮಾಡಿ ಅದರ ನೋವು ನಿವಾರಣೆಗೆ ಹರಸಾಹಸ ಪಟ್ಟರು. ಈ ವೇಳೆ ಹೋರಿಗೆ ಚಿಕಿತ್ಸೆ ನೀಡಿದ ರೈತರನ್ನು ಇಬ್ರಾಹಿಂ ಮುಲ್ಲಾ ಅವರು ಹೂಮಾಲೆ ಹಾಕಿ ಸನ್ಮಾನಿಸಿ ಗೌರವಿಸಿ ಅವರ ಮಾನವೀಯತೆಯನ್ನು ಕೊಂಡಾಡಿದರು. ಈ ಸಂದರ್ಭ ಮಾತನಾಡಿದ ಇಬ್ರಾಹಿಂ ಅವರು ಹೋರಿ ಸಣ್ಣದಿದ್ದಾಗಲೇ ಮಗಡಾ ಹಾಕಲಾಗಿದೆ. ಹೋರಿ ಬೆಳೆದಂತೆ ಮಗಡಾ ಸಣ್ಣದಾಗಿ ಮುಖದ ಚರ್ಮ ಸೀಳಿಕೊಂಡು ದೊಡ್ಡ ಗಾಯ ಮಾಡಿದೆ. ಗಾಯಕ್ಕೆ ಸೂಕ್ತ ಚಿಕಿತೆ ಇಲದ್ದರಿಂದ ಹುಳ ಬಿದ್ದು ಸಂಕಟಪಡುತ್ತಿತ್ತು. ಇನ್ನೂ ಕೆಲ ದಿನ ಹಾಗೇ ಬಿಟ್ಟಿದ್ದರೆ ಅದು ಅನಾಥವಾಗಿ ಸಾವನ್ನಪ್ಪುವ ಸಂಭವ ಇತ್ತು. ತಟ್ಟಿ ಮತ್ತು ಸಣಗೇರಿ ಅವರು ಪ್ರಯತ್ನಪಟ್ಟು ಹೋರಿಯ ಮಗಡಾ ಕತ್ತರಿಸಿ ಔಷಧಿ ಹಾಕಿ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಸಧ್ಯ ಈ ಹೋರಿಯನ್ನು ಪುರಸಭೆ ಸದಸ್ಯ ಬಸಪ್ಪ ಅವರ ಮನೆಯಲ್ಲಿ ಕಟ್ಟಿ ಹಾಕಿ ಮೇಯಿಸಿ, ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ವಾರಸುದಾರರು ಬಂದಲ್ಲಿ ಮಾಲಿಕತ್ವ ಖಚಿತಪಡಿಸಿಕೊಂಡು ಹೋರಿ ಹಸ್ತಾಂತರಿಸಲಾಗುತ್ತದೆ. ಇಲ್ಲವಾದಲ್ಲಿ ತಟ್ಟಿ ಅವರೇ ಅದನ್ನು ಸಾಕಲು ತೀಮರ್ಾನಿಸಿದ್ದಾರೆ ಎಂದು ತಿಳಿಸಿದರು. ಈ ವೇಳೆ ಹೋರಿ ಹಿಡಿದು ಚಿಕಿತ್ಸೆ ನೀಡಲು ಕೆಲ ಯುವಕರು ಶ್ರಮಪಟ್ಟರು.