ಕೊಪ್ಪಳ 13: ನಾಲ್ಕು ಎಕರೆ ಜಮೀನಿನಲ್ಲಿ ಕಬ್ಬು ಬೆಳೆಯುತ್ತಿದ್ದ ರೈತ ನಾಗರಾಜ, ಇದರಿಂದ ಹೆಚ್ಚಿನ ಲಾಭವಿಲ್ಲ ಎಂಬ ಕಾರಣದಿಂದ ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ ಇಲಾಖೆಯಿಂದ ಸೌಲಭ್ಯ ಪಡೆದು ಬರಗಾಲದಲ್ಲೂ ಬಾಳೆ ಬೆಳೆದು ಮಾದರಿ ರೈತರಾಗಿದ್ದಾರೆ.
ಕೊಪ್ಪಳ ತಾಲ್ಲೂಕಿನ ಹ್ಯಾಟಿ ಗ್ರಾಮದ ನಾಗರಾಜ ಹೊನ್ನಪ್ಪ ಸೊಟ್ಟಕ್ಕನವರ ತಮ್ಮ ನಾಲ್ಕು ಎಕರೆ ಜಮೀನಿನ ನೀರಾವರಿ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳುತ್ತಿದ್ದರು. ಮೊದಲು ಕಬ್ಬು ಬೆಳೆದು ಒಳ್ಳೆಯ ಇಳುವರಿ ಪಡೆದುಕೊಳ್ಳುತ್ತಿದ್ದರು. ಕಬ್ಬಿನ ಬೆಳೆಯಲ್ಲಿ ಹೆಚ್ಚಿನ ಲಾಭಾಂಶವಿಲ್ಲ ಎಂಬ ಅಂಶವನ್ನರಿತು ರೈತರು ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ ಇಲಾಖಾ ಸಹಾಯಕ ತೋಟಗಾರಿಕೆ ಅಧಿಕಾರಿ ಕೃಷ್ಣಮೂತರ್ಿರವರ ಮಾರ್ಗದರ್ಶನದಲ್ಲಿ ಮಹಾತ್ಮಾ ಗಾಂಧಿ ಉದ್ಯೋಗಖಾತ್ರಿ ಯೋಜನೆಯಡಿ ಆಯ್ಕೆಯಾಗಿ ಸೂಕ್ತ ಬಾಳೆ ಬೆಳೆಯಲು ನಿರ್ಧರಿಸಿದರು. 2018-19ನೇ ಸಾಲಿನಲ್ಲಿ ಆಗಸ್ಟ್.06 ರಂದು ಖಾಸಗಿ ಕಂಪನಿ ಯಿಂದ ರೂ. 1200 ಕ್ಕೆ ಒಂದರಂತೆ ಗ್ರ್ಯಾಂಡ್ ಗ್ರೀನ್ ಎಂಬ ಅಂಗಾಂಶ (ತಳಿ) ಕೃಷಿ ಬಾಳೆಯ 3000 ಸಸಿಗಳನ್ನು ನಾಟಿ ಮಾಡಿದ್ದು, 6/6 ಅಡಿ ಅಂತರದಲ್ಲಿ ಸಸಿ ಬೆಳೆಸಿರುತ್ತಾರೆ. ರೈತರು ಕಾಲಕಾಲಕ್ಕೆ ಇಲಾಖೆಗೆ ಬಂದು ಪೋಷಕಾಂಶ, ನೀರಿನ ಸದ್ಬಳಕೆ ಕುರಿತು ತಿಳಿದುಕೊಂಡು ಉತ್ತಮ ಪೋಷಣೆ ಮಾಡುವುದರ ಮೂಲಕ ಬಾಳೆ ಬೆಳೆದಿದ್ದಾರೆ. ಹಾಟರ್ಿ ಕ್ಲಿನಿಕ್ ವಿಷಯ ತಜ್ಞ ವಾಮನಮೂತರ್ಿರವರ ಸಲಹೆಯಂತೆ ಸಸ್ಯ ಸಂರಕ್ಷಣೆ ಕ್ರಮ ಕೈಗೊಂಡಿರುತ್ತಾರೆ. ಹನಿ ನೀರಾವರಿ ಮೂಲಕ (ರಸಾವರಿ) ನೀರಿನಲ್ಲಿ ಕರಗುವ ಗೊಬ್ಬರಗಳನ್ನು ಕೊಟ್ಟು ಚೆನ್ನಾಗಿ ಪೋಷಣೆ ಮಾಡಿರುತ್ತಾರೆ.
ಏಪ್ರೀಲ್ ಮೇ ತಿಂಗಳಲ್ಲಿ ನೀರಿನ ತೀವ್ರ ಕೊರತೆ ಉಂಟಾಗಿತ್ತು, ಆಗ ಪಕ್ಕದ ಜಮೀನಿನ ರೈತರಿಂದ ನೀರು ಪಡೆದಿದ್ದಾರಲ್ಲದೇ ಟ್ಯಾಂಕರ್ ಮೂಲಕವೂ ಸಹ ನೀರನ್ನು ಒದಗಿಸಿ ಬಾಳೆ ಬೆಳೆಯನ್ನು ಕಾಪಾಡಿದ್ದಾರೆ. ಇನ್ನೂ ಹಲವಾರು ಗ್ರಾಮದಲ್ಲಿರುವ ರೈತರ ಬಾಳೆ ಬೆಳೆ ನೀರಿಲ್ಲದೇ ನಾಶವಾಗಿದೆ. ನೀರಿನ ವ್ಯವಸ್ಥೆ ಇಲ್ಲದಿದ್ದರೂ ನಾಗರಾಜರವರ ಕ್ರಮಾಧಾರಿತ ಪರಿಶ್ರಮದಿಂದ ಬಾಳೆ ಬೆಳೆ ಅವರ ಕೈಸೇರಿದ್ದಲ್ಲದೇ ಪ್ರತಿ ಗೊನೆಯೂ 28-30 ಕಿ.ಗ್ರಾಂ. ತೂಕವನ್ನು ಹೊಂದಿದ್ದು, ಭಾರಕ್ಕೆ ಗಿಡಗಳು ಬಾಗುತ್ತಿರುವ ಕಾರಣ ತಜ್ಞರ ಸಲಹೆಯಂತೆ ಪ್ಲಾಸ್ಟಿಕ್ ಬೆಲ್ಟ ಕಟ್ಟಿ ಕೋಲಿನ ಆಸರೆಯನ್ನು ಕಟ್ಟಿದ್ದಾರೆ. ಕುಟುಂಬದವರ ಸಹಕಾರದಿಂದ ಒಟ್ಟಾಗಿ ಕೆಲಸ ಮಾಡಿದ್ದರ ಫಲವಾಗಿ ಇಂದು ಫಸಲು ಒಂದಕ್ಕೆ ಎರಡರಂತೆ ಉತ್ತಮ ಬೆಲೆಗೆ ಖರೀದಿದಾರರು ಮುಂದೆ ಬರುತ್ತಿದ್ದಾರೆ. ಪ್ರತಿ ಕೆಜಿಗೆ ರೂ. 15.25 ರಂತೆ 3 ಟನ್ ಮೊದಲನೇ ಕಟಾವಿಗೆ ಮಾರಾಟ ಮಾಡಿ ಉತ್ತಮ ಆದಾಯ ಪಡೆದಿರುತ್ತಾರೆ.
``ಬಾಳೆ ಬೆಳೆದು ನನ್ನ ಬಾಳು ಬೆಳಗಿದೆ. ಈಗ ಖರೀದಿದಾರರೇ ನನ್ನ ತೋಟಕ್ಕೆ ಬಂದು ಕಣ್ಣೆದುರೇ ತೂಕ ಮಾಡಿ ನಿಗದಿಯಾದ ದರವನ್ನು ನೀಡಿ ಖರೀದಿಸುತ್ತಿದ್ದಾರೆ. ನಾನು ಕಂಪ್ಲಿ ಮಾರುಕಟ್ಟೆಗೆ ನನ್ನ ಉತ್ಪನ್ನವನ್ನು ಮಾರಾಟ ಮಾಡಿರುವೆ. ಈ ಯಶಸ್ಸಿಗೆ ಕಾರಣರಾದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ನಾನು ಋಣಿ'' ಎನ್ನುತ್ತಾರೆ ರೈತ ನಾಗರಾಜರವರು.
``ಉದ್ಯೋಗ ಖಾತ್ರಿ ಯೋಜನೆ ಕೊಪ್ಪಳ ರೈತರ ಪಾಲಿಗೆ ವರದಾನವಾಗಿದ್ದು, ಆಥರ್ಿಕ ಅಭಿವೃದ್ಧಿಗೆ ದಾರಿ ಮಾಡಿ ಕೊಟ್ಟಿದೆ. ಬರದಲ್ಲೂ ನೀರಿನ ನಿರ್ವಹಣೆ ಮಾಡಿ ಬಾಳೆ ಬೆಳೆದಿದ್ದಾರೆ ರೈತ ನಾಗರಾಜ. ಇವರ ಪರಿಶ್ರಮಕ್ಕೆ ಇಂದು ಫಲ ದೊರೆತು ಖರೀದಿದಾರರೇ ಇವರಲ್ಲಿಗೆ ಬಂದು ಖರೀದಿಸುತ್ತಿದ್ದಾರೆ. ಹೀಗೆ ರೈತರಿಗೆ ಯೋಗ್ಯ ಬೆಲೆ ದೊರೆತಲ್ಲಿ ಆಥರ್ಿಕ ಪ್ರಗತಿ ಹೊಂದಲು ಸಾಧ್ಯ. ಉದ್ಯೋಗ ಖಾತ್ರಿಯಡಿ ರೈತ ನಾಗರಾಜರವರಿಗೆ ಎಕರೆಗೆ ರೂ. 132500 ಅನುದಾನವನ್ನು ನೀಡಲಾಗಿದ್ದು, ಈ ಅನುದಾನದ ಸದ್ಬಳಕೆ ಮಾಡಿಕೊಂಡು ನಾಗರಾಜ ರವರು ಒಬ್ಬ ಮಾದರಿ ಬಾಳೆ ಬೆಳೆಗಾರರಾಗಿದ್ದಾರೆ'' ಎನ್ನುತ್ತಾರೆ ಹಿರಿಯ ಸಹಾಯಕ ತೋಟಗಾರಿಕೆ ನಿದರ್ೇಶಕ ನಜೀರ ಅಹ್ಮದ್ ಸೋಂಪೂರ.
ಕಬ್ಬು ಬೆಳೆದು ಕಾಖರ್ಾನೆ ಅಧಿಕಾರಿಗಳ ಮಾತು ಕೇಳಬೇಕಾದ ಪರಿಸ್ಥಿತಿಯಲ್ಲಿ ಬಾಳೆ ಬೆಳೆದು ಉತ್ತಮ ಲಾಭಗಳಿಸಿದ ನಾಗರಾಜ ಇತರೆ ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದಾರಲ್ಲದೇ ಈ ಬಾರಿಯೂ 3 ಎಕರೆ ಜಮೀನಿನಲ್ಲಿ ವಿವಿಧ ತಳಿಗಳ ಬಾಳೆ ಬೆಳೆಯಲು ಯೋಜನೆ ಹಾಕಿಕೊಂಡಿದ್ದಾರೆ'' ಎನ್ನುತ್ತಾರೆ ಸಹಾಯಕ ತೋಟಗಾರಿಕೆ ಅಧಿಕಾರಿ ಕೃಷ್ಣ ಮೂತರ್ಿ ಪಾಟೀಲ.
ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದಲ್ಲಿರುವ ನಾಗರಾಜ ಸೊಟ್ಟಕ್ಕನವರನ್ನು ಅಥವಾ ಕೊಪ್ಪಳ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಸಹಾಯಕ ತೋಟಗಾರಿಕೆ ಅಧಿಕಾರಿ ಹಾಗೂ ವಿಷಯ ತಜ್ಞರು ಹಾಟರ್ಿಕ್ಲಿನಿಕ್ ಇವರನ್ನು ಸಂಪಕರ್ಿಸಬಹುದು.