ಜಮಖಂಡಿ ನಗರದ ನಸುಕಿ ಜಾವದಲ್ಲಿ ಲಕ್ಕನ ಕೆರೆಯಲ್ಲಿ ವ್ಯಕ್ತಿಯ ಶವ ಪತ್ತೆ
ಜಮಖಂಡಿ 25 : 25-1ನಗರದ ಲಕ್ಕನ ಕೆರೆಯಲ್ಲಿ ವ್ಯಕ್ತಿಯೋರ್ವನು ಬಿದ್ದು ಸಾವನ್ನಪ್ಪಿದ ಘಟನೆ ಜರುಗಿದೆ.ತಾಲೂಕಿನ ಕುಂಬಾರಹಳ್ಳ ಗ್ರಾಮದ ಲಕ್ಷ್ಮಣ ಮಾಳಿ (47) ಸಾವನ್ನಪ್ಪಿದ ದುರ್ದೈವಿ.ನಗರದ ಚೌಡಯ್ಯ ನಗರದಲ್ಲಿ ವಾಸವಾಗಿದ್ದು. ಕಳೆದ ಮೂರು ದಿನಗಳಿಂದ ಮನೆಗೆ ಬಾರದೆ ಇದ್ದ ಕಾರಣ ಮನೆಯವರು ಹುಡುಕಾಟ ನಡೆಸಿದರು ಎನ್ನಲಾಗಿದೆ.ಕುಡಿದ ಅಮಲಿನಲ್ಲಿ ಲಕ್ಕನ ಕೆರೆಯ ತಡೆಗೋಡೆ ಮೇಲೆ ಕುಳಿತು ಆಯಾತಪ್ಪಿ ಬಿದ್ದಿರಬಹುದು ಎಂದು ಸಾರ್ವಜನಿಕರು ಶಂಕಿಸಲಾಗಿದೆ.ಕೆರೆಗೆ ತಂತಿ ಬೇಲಿ ಇಲ್ಲದ ಕಾರಣ ಇಂತಹ ಘಟನೆಗಳು ಜರುಗುತ್ತವೆ. ಸಂಬಂಧಪಟ್ಟ ಅಧಿಕಾರಿಗಳು ತಂತಿ ಬೇಲಿಯನ್ನು ಅಳವಡಿಸಿಕೊಳ್ಳಬೇಕೆಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಸುಕಿನ ಜಾವದಲ್ಲಿ ಬಟ್ಟೆ ತೊಳೆಯಲು ಹೋದ ಸಾರ್ವಜನಿಕರು ಶವ ಕೆರೆಯಲ್ಲಿ ಇರುವುದನ್ನು ಕಂಡು ಪೋಲಿಸರಿಗೆ ಮಾಹಿತಿಯನ್ನು ನೀಡಿದ್ದು. ಸ್ಥಳಕ್ಕೆ ಶಹರ ಠಾಣೆಯ ಪೋಲಿಸರು ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ.