ಸಂಸ್ಕಾರಯುತ ಸಂಸಾರ ಇನ್ನೊಬ್ಬರಿಗೆ ದಾರಿದೀಪ

ಲೋಕದರ್ಶನ ವರದಿ

ಮುಗಳಖೋಡ 16: ಇಂದು ಆಧುನಿಕ ಜಗತ್ತು ಸಂಸ್ಕಾರವಿಲ್ಲದ ಕುಟುಂಬಗಳು ದಾರಿ ತಪ್ಪಿ ನಡೆಯುತ್ತಿವೆ ಆದರೆ ಸಂಸ್ಕಾರಯುತ ಸಂಸಾರ ಇನ್ನೊಬ್ಬರಿಗೆ ದಾರಿದೀಪವಾಗುತ್ತವೆ ಎಂದು ಅಥಣಿ ಮೋಟಗಿಮಠದ ಪ್ರಭುಚನ್ನಬಸವ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

 ಅವರು ಪಟ್ಟಣದ ಚ.ವಿ.ವ.ಸಂಘದ ಮಾಧವಾನಂದ ವೇದಿಕೆಯಲ್ಲಿ ಬುಧವಾರ ದಿ.15 ರಂದು ಮುಂಜಾನೆ 11 ಗಂಟೆಗೆ ಡಾ.ಸಿ.ಬಿ.ಕುಲಿಗೋಡ ಅವರ ಅಮೃತ ಮಹೋತ್ಸವದ ದಿವ್ಯ ಸಾನಿಧ್ಯವಹಿಸಿ ಮಾತನಾಡುತ್ತಾ ಬಡತನ ಕಷ್ಟದಿಂದ ಬಂದ ಕುಲಿಗೋಡ ಅವರ ಕುಟುಂಬ ಸಮಾಜ ಸೇವೆ ರಾಜಕೀಯ ರಂಗದಲ್ಲಿ ಸೇರಿ ಹಲವಾರು ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಸಾವಿರಾರು ಕುಟುಂಬಗಳಿಗೆ ದಾರಿದೀಪವಾಗಿ ತಮ್ಮ 75ನೇ ಸಂವತ್ಸರ ಆಚರಿಸಿಕೊಳ್ಳುತ್ತಿರುವುದು ಶ್ಲಾಘನೀಯ. ಅವರ ಪುತ್ರರಿಗೂ ಸಹೋದರರಿಗೂ ಒಳ್ಳೆಯ ಶಿಕ್ಷಣ ನೀಡಿ ಸಮಾಜ ಸೇವೆ ಮಾಡಲು ಪ್ರೇರಣಾ ಶಕ್ತಿಯಾಗಿರುವರು ಎಂದು ಪ್ರಭು ಚನ್ನಬಸವ ಶ್ರೀಗಳು ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಾಯಬಾಗ ಪಿ.ಎಲ್.ಡಿ.ಬ್ಯಾಂಕಿನ ಅಧ್ಯಕ್ಷ ಪ್ರತಾಪರಾವ್ ಪಾಟೀಲ ಶಿರಡಿ ಸಾಯಿಬಾಬಾರವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಹುಟ್ಟು ಹಬ್ಬದ ಪ್ರಯುಕ್ತ ಬಂದ ಜನರಿಗೆ ಸಸಿ ವಿತರಿಸಿದರು.

ಶೇಗುಣಸಿ ವಿರಕ್ತಮಠದ ಮಹಾಂತದೇವರು ನೇತೃತ್ವವಹಿಸಿ ಸುಂದರವಾದ ಜೀವನಕ್ಕೆ ಬಸವಾದಿ ಶರಣರ ಮಾರ್ಗದರ್ಶನ ಮುಖ್ಯ ಅಂತಹ ಮಹಾತ್ಮರು ತೋರಿಸಿದ ಬಧುಕಿನಲಿ ಸಾಗುತ್ತಿರುವ ಡಾ. ಕುಲಿಗೋಡರವರು ನೂರುಕಾಲ ಬಾಳಿ ಬದುಕಲಿ ಎಂದು ಹೇಳಿದರು. ಹಾರೂಗೇರಿಯ ಸಾಹಿತಿ ಡಾ ವ್ಹಿ.ಎಸ್.ಮಾಳಿ ಅವರು ಮಾತನಾಡಿ ಡಾ ಕುಲಿಗೋಡ ಅವರ ಜೀವನ ಮತ್ತು ಸಾದನೆಯ ಪರಿಚಯ ನುಡಿನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಡಾ. ಸಿ.ಬಿ ಕುಲಿಗೋಡ ಅವರಿಗೆ ರಮೇಶ ಯಡವಣ್ಣವರ, ಗೋಪಾಲ ಯಡವಣ್ಣವರ, ವಿಠ್ಠಲ ಯಡವಣ್ಣವರ ಹಾಗೂ ಮಹಾದೇವ ತೇರದಾಳ ಅವರು ಸೇರಿಕೊಂಡು ಒಂದು ಕೆ.ಜಿ ಬೆಳ್ಳಿಯ  ಕೀರಿಟ ಮತ್ತು ಸುಪುತ್ರ ಡಾ. ಸಂತೋಷ ಕುಲಿಗೋಡ ಮತ್ತು ಸಂಸ್ಥೆಯ ಅಧ್ಯಕ್ಷ ಸಂಜಯ ಕುಲಿಗೋಡ ಅವರು ಟೋಯೋಟಾ ಕಂಪನಿಯ ಪಾರ್ಚ್ಯೂನರ್ ಕಾರನ್ನು ಕಾಣಿಕೆಯಾಗಿ ನೀಡಿದರು. ಇದೆ ವೇಳೆ "ಮೈ ಸ್ಟಾಂಪ"  5 ರೂ. ಅಂಚೆಚೀಟಿಯನ್ನು ಡಿ.ಆರ್ ಪಾಟೀಲ, ಶ್ರೀಧರ ಪತ್ತಾರ ಅವರು ಬಿಡುಗಡೆ ಮಾಡಿದರು. ಮತ್ತು ಊರಿನ ಪ್ರಗತಿಪರ ರೈತರಾದ ಚನ್ನಪ್ಪ ಯಡವಣ್ಣವರ, ಸಿದ್ರಾಯಿ ಬೆನಚಿನಮರಡಿ, ಶ್ರೀಮಂತ ಕುರಾಡೆ, ಸೈನಿಕ ಶಿವಲಿಂಗ ಕರಭೀಮಗೋಳ, ಶಿಕ್ಷಕ ಬಿ.ಆಯ್. ಹುಣಸಿಕಟ್ಟಿ, ಚನ್ನಪ್ಪ ಕೋಣ್ಣುರ ಅವರನ್ನು ಸನ್ಮಾನಿಸಲಾಯಿತು.

ಹಣಮಂತ ಮಹಾರಾಜರು, ಕನರ್ಾಟಕ ಸಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಡಾ. ಎಲ್.ಎಸ.ಜಂಬಗಿ, ಮಹಾವೀರ ದಾನಿಗೊಂಡ, ಬಂಡು ಬಾಬಣ್ಣವರ, ರಾಜಶೇಖರ ಪಾಟೀಲ, ಬಿ.ಆರ್ ಆಜೂರ, ಹಾಲಪ್ಪ ನಾಯಿಕ. ಡಿಎಸ್ ನಾಯಿಕ, ರಾಜೇಂದ್ರ ಸಣ್ಣಕ್ಕಿ, ಗೀರಿಗೌಡ ಪಾಟೀಲ, ಎಂ.ಪಿ.ಹಿಪ್ಪರಗಿ, ಪರಗೌಡ ಖೇತಗೌಡರ, ವಿಜಯಾ ಸಿ. ಕುಲಿಗೋಡ, ಪ್ರಕಾಶ ಆದಪ್ಪಗೋಳ, ನ್ಯಾಯವಾದಿ ಶ್ರೀಮಂತ ಹೋಳ್ಕರ ಕುಮಾರಿ ಸಾಕ್ಷಿ ಕುಲಿಗೋಡ, ಮತ್ತಿತರು ಇದ್ದರು.