ಲೋಕದರ್ಶನ ವರದಿ
ಬೆಳಗಾವಿ 20: ಕನರ್ಾಟಕ ಕಾನೂನು ಸಂಸ್ಥೆಯ ವ್ಯವಸ್ಥಾಪನಾ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯ ನೈತಿಕ ಹಾಗೂ ಸಾಮಾಜಿಕ ಜವಾಬ್ದಾರಿ ಕೇಂದ್ರವು ಎಂಬಿಎ ಮೊದಲ ವರ್ಷದ ವಿದ್ಯಾಥರ್ಿಗಳಿಗಾಗಿ ಹಳೆಯ ದಿನಪತ್ರಿಕೆಗಳು ಹಾಗೂ ನಿಯತಕಾಲಿಕೆಗಳ ಸಂಗ್ರಹ ಹಾಗೂ ದೇಣಿಗೆ ಕಾರ್ಯ ಹಮ್ಮಿಕೊಂಡಿತ್ತು.
ಸಂಗ್ರಹಿಸಲಾದ 1000 ಕೆ.ಜಿ ಗಿಂತಲೂ ಹೆಚ್ಚಿನ ದಿನಪತ್ರಿಕೆಗಳನ್ನು ಬೆಳಗಾವಿಯ ಶಾಂತಾಯಿ ವಿದ್ಯಾಧಾರ ಪ್ರಾಜೆಕ್ಟಗೆ ದೇಣಿಗೆಯಾಗಿ ನೀಡಲಾಯಿತು. ಈ ಪ್ರಾಜೆಕ್ಟ ವಿದ್ಯಾಭ್ಯಾಸದ ಖಚರ್ುವೆಚ್ಚ ಭರಿಸಲಾಗದ ಬಡ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಸಹಾಯ ಮಾಡುತ್ತದೆ. ಈ ಪ್ರಾಜೆಕ್ಟ ಸಹಕಾರದಿಂದ ಇಂಜಿನಿಯರಿಂಗ್, ಮೆಡಿಕಲ್, ಮೊದಲಾದ ಪದವಿ ಶಿಕ್ಷಣ ಪೂರೈಸಿದ ವಿದ್ಯಾಥರ್ಿಗಳಿದ್ದಾರೆ.
ಮಾಜಿ ಮೇಯರ್ ಹಾಗೂ ಸಮಾಜ ಸೇವಕ ವಿಜಯ ಮೋರೆದೇಣಿಗೆ ಸ್ವೀಕರಿಸಿ ಮಾತನಾಡಿ, ಸಮಾಜದ ನಿರ್ಲಕ್ಷಿತ ವರ್ಗವನ್ನು ಮುಖ್ಯವಾಹಿನಿಗೆ ತರಲು ಎಲ್ಲರೂ ಸಹಕರಿಸಬೇಕೆಂದು ಕೋರಿದರು. ಕಾಲೇಜು ನಿದರ್ೇಶಕ ಡಾ. ಅತುಲ್ ದೇಶಪಾಂಡೆ ಮಾತನಾಡಿ, ವಿದ್ಯಾಥರ್ಿಗಳು ಹಾಗೂ ಕಾಲೇಜು ಗ್ರಂಥಾಲಯ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದರು. ಪ್ರೊ. ಶೈಲಜಾ ಹಿರೇಮಠ, ಪ್ರೊ. ಶ್ರೀಕಾಂತ ನಾಯಕ, ಸುನೀಲ ಕುಲಕಣರ್ಿ ಕಾರ್ಯಕ್ರಮ ನಿರ್ವಹಿಸಿದರು.