ಪ್ರತಿಭಾವಂತರಿಗೆ ಸತ್ಕಾರ ಸಮಾರಂಭ

ಲೋಕದರ್ಶನ ವರದಿ

ಬೆಳಗಾವಿ 10: ಬಸವ ಅಂಬೇಡ್ಕರರ ಸಮೀಕರಣದ ವಿನೂತನ ಸಾಮಾಜಿಕ ಚಳುವಳಿಯು ಹೊಸ ಮನ್ವಂತರಕ್ಕೆ ನಾಂದಿ ಹಾಡುವದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಸಾಜೀದ ಸಯ್ಯದ ಹೇಳಿದ್ದಾರೆ.

ಡಾ. ಬಾಬಾಸಾಹೇಬ ಅಂಬೇಡ್ಕರರ ಮಹಾ ಪರಿನಿವರ್ಾಣದ ಅಂಗವಾಗಿ ಬಸವ ಭೀಮ ಸೇನೆಯ ವತಿಯಿಂದ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ವಿಶ್ವ ಜ್ಞಾನ ಚೇತನಕ್ಕೆ ಗೌರವ ನಮನ ಮತ್ತು ಪ್ರತಿಭಾವಂತರಿಗೆ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಬಸವವಾದಿ ಶರಣರ ನಿಜವಾದ ತತ್ವ ಸಿದ್ದಾಂತಗಳು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಬೇಕಾದ ಅಗತ್ಯ ಇದೆ ಎಂದರು.

ಜನಸಾಮಾನ್ಯರಿಗೆ ಬಸವಾದಿ ಶರಣರ ನಿಜವಾದ ಸಂದೇಶಗಳು ತಲುಪದರಿಂದ ಅನೇಕ ತಪ್ಪು ಭಾವನೆಗಳು ಮನೆ ಮಾಡಿವೆ. ಬಸವ ಅಂಬೇಡ್ಕರರ ವಿಚಾರ ಧಾರೆಗಳಲ್ಲಿ ಸಾಮ್ಯತೆ ಇರುವದರಿಂದ ಬಸವ ಭೀಮ ಸೇನೆಯ ಮೂಲಕ ಆರ್.ಎಸ್.ದಗರ್ೆ ಅವರು ಆರಂಭಿಸಿರುವ ಬಸವ ಅಂಬೇಡ್ಕರರ ಸಮಾನತೆ ಸಂದೇಶಗಳ ಸಾಮಾಜಿಕ ಹೋರಾಟವು ಅತ್ಯಂತ ಅರ್ಥಪೂರ್ಣವಾಗಿದೆ. ಈ ಹೋರಾಟ ದೇಶದಲ್ಲಿ ಹೊಸ ಮನ್ವಂತರ ಸೃಷ್ಟಿಸಲಿದೆ. ಈ ಹೋರಾಟಕ್ಕೆ ನಾವೆಲ್ಲರು ಬೆಂಬಲಿಸಬೇಕು ಎಂದರು.

ದಲಿತ ಮುಖಂಡ ಹೆಣ್ಣೂರು ಶ್ರೀನಿವಾಸ ಮಾತನಾಡಿ, 12 ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಆರಂಭಿಸಿದ್ದ ಸಾಮಾಜಿಕ ಅಸಮಾನತೆಯ ವಿರುದ್ಧದ ಹೋರಾಟವು ನಮ್ಮೆಲ್ಲರಿಗೆ ಪ್ರೇರಣೆಯಾಗಿದೆ. ಡಾ. ಬಾಬಾಸಾಹೇಬ ಅಂಬೇಡ್ಕರರ ಹೋರಾಟವು ಆ ಹೋರಾಟದ ಮುಂದುವರೆದ ಭಾಗವಾಗಿದೆ. ಅಸಮಾನತೆಯ ವಿರುದ್ಧದ ಹೋರಾಟ ಮುಂದುವರೆಯಲಿದೆ ಎಂದರು.

ಉತ್ತರ ಕನರ್ಾಟಕ ವಿಕಾಸ ವೇದಿಕೆಯ ಮುಖಂಡ ಪ್ರವೀಣ ಪಾಟೀಲ ಮಾತನಾಡಿ, ಬಸವ ಮತ್ತು ಅಂಬೇಡ್ಕರರೆ ಈ ದೇಶದ ಆದರ್ಶ. ಆ ಆದರ್ಶ ಪುರುಷರೆ ನಮಗೆ ಪ್ರೇರಣೆ. ಬಸವ ಅಂಬೇಡ್ಕರರ ಆದರ್ಶದ ಅಡಿಯಲ್ಲಿ ನಡೆಯುವ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದರು.

ಬಸವ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ರೊಟ್ಟಿ ಅವರು ಮಾತನಾಡಿ, ಬಸವ ಅಂಬೇಡ್ಕರರು ಈ ದೇಶದ ಎರಡು ಕಣ್ಣುಗಳು. 12 ನೇ ಶತಮಾನದಲ್ಲಿ ಬಸವಾದಿ ಶರಣರು ಆರಂಭಿಸಿದ ಸಾಮಾಜಿಕ ಸಮಾನತೆಯ ಹೋರಾಟದ ಮತ್ತು ಬಸವಾದಿ ಶರಣರ ವಚನ ಸಾಹಿತ್ಯದ ಆಶಯಗಳನ್ನು ಡಾ. ಬಾಬಾಸಾಹೇಬ ಅಂಬೇಡ್ಕರರು ಸಂವಿಧಾನದಲ್ಲಿ ಅಳವಡಿಸುವ ಮೂಲಕ ಬಸವಾದಿ ಶರಣರ ಮಾನವೀಯ ಆಶಯಗಳನ್ನು ಕಾಯ್ದೆಗಳನ್ನಾಗಿಸಿದ್ದಾರೆ. ಬಸವ ಅಂಬೇಡ್ಕರರ ಈ ಸಮನ್ವಯತೆಯ ಹೋರಾಟ ಅರ್ಥಪೂರ್ಣವಾಗಿದೆ ಎಂದರು. ಸೇನೆಯ ಅಧ್ಯಕ್ಷ ಆರ್.ಎಸ್.ದಗರ್ೆ ಅವರು ಅಧ್ಯಕ್ಷತೆ ವಹಿಸಿದ್ದರು. ಕಲ್ಯಾಣಮ್ಮ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಸುಧಾಕರ ಡೊಂಕಣ್ಣವರ ವಂದಿಸಿದರು.

ರಾಜ್ಯ ಮಟ್ಟದ ವಚನ ಕಂಠಪಾಠ ಸ್ಪಧರ್ೆಯಲ್ಲಿ ಪ್ರಥಮ ಸ್ಥಾನ ಪಡೆದ ನಿರ್ಮಲಾ ಕುಂದಗೋಳ ಮತ್ತು ದ್ವಿತೀಯ ಸ್ಥಾನ ಪಡೆದಿರುವ ದೀಪಾ ತೊಲಗಿ ಅವರನ್ನು ಹಾಗೂ ಕಲ್ಯಾಣಮ್ಮ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಅಮರದಾಸ ಮ್ಯಾಗೇರಿ, ದ್ಯಾಮೇಶ ವನ್ನೂರ, ಪ್ರವೀಣ ಹಿತ್ತಲಮನಿ, ಚಿದಾನಂದ ಮ್ಯಾಗೇರಿ, ವಿನಯ ಹೆಗಡೆ ಲಕ್ಷ್ಮೀ ಅಲಬಣ್ಣವರ, ರೇಖಾ ಸುಣಗಾರ, ಸುವರ್ಿಣಾ ಕೋಲಕಾ, ಬೇಭಿ ಸಂಜೀಮನಿ ಅವರುಗಳನ್ನು ಸತ್ಕರಿಸಲಾಯಿತು.