ಅರಿವು ಕೇಂದ್ರವು ಅಭಿವೃದ್ಧಿ ಮುನ್ನುಡಿ ಬರೆಯುವಂತೆ ಆಗಬೇಕು- ಇ ಒ. ಬಿರಾದಾರ ಪಾಟೀಲ
ಯಲಬುರ್ಗಾ 22: ಗ್ರಾಮ ಪಂಚಾಯತ್ ಅರಿವು ಕೇಂದ್ರದ ಮೇಲ್ವಿಚಾರಕರು ಅರಿವು ಕೇಂದ್ರವನ್ನು ಮಕ್ಕಳ ಸ್ನೇಹಿಯನ್ನಾಗಿಸಲು ಅಗತ್ಯವಿರುವ ವಿವಿಧ ಚಟುವಟಿಕೆಗಳನ್ನು ಪರಿಚಯ ಮಾಡಿಕೊಳ್ಳುಬೇಕು ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸಲು ಪಕ್ಷಿಗಳ ಪರಿಚಯ ಮತ್ತು ಪಕ್ಷಿ ವೀಕ್ಷಣೆಯು ಹೇಗೆ ಪರಿಣಾಮಕಾರಿಯಾಗಿದೆ ಎಂಬುದನ್ನು ಚರ್ಚಿಸಿ ವಿಷಯವನ್ನು ಮಕ್ಕಳಿಗೆ ಅಗತ್ಯವಾಗಿ ಬೇಕಾದ ಪ್ರಮುಖ ನಾಲ್ಕು ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಕುರಿತು ಅರಿತುಕೊಂಡ ಮಾರ್ಗದರ್ಶನ ನೀಡುವ ಕೌಶಲಗಳನ್ನು ರೂಡಿಸಿ ಕೊಳ್ಳಬೇಕು.
ಈ ತರಬೇತಿಯಲ್ಲಿ ಅನೇಕ ವಿಷಯ ಹೇಳಲಾಗುತ್ತದೆ.ಶಿಭಿರಾರ್ಥಿಗಳು ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುಬೇಕು ಮುಂದುವರೆದು ಗ್ರಾಮಗಳ ಅಭಿವೃದ್ಧಿಯಲ್ಲಿ ಮಕ್ಕಳು ಪ್ರಜ್ಞಾವಂತ ನಾಗರೀಕರಾಗಿ ತಮ್ಮ ಕಿರಿದಾದ ಕೊಡುಗೆಗಳನ್ನು ನೀಡುವಂತೆ ಪ್ರೇರಿಪಿಸಲು ಅರಿವು ಕೇಂದ್ರವು ಮುನ್ನುಡಿ ಬರೆಯುವಂತೆ ಆಗಬೇಕೆಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ ಬಿರಾದಾರ ಪಾಟೀಲ ಅವರು ಮಾತನಾಡಿದರು.
ಪಟ್ಟಣದ ತಾಲ್ಲೂಕು ಪಂಚಾಯತ ತರಬೇತಿ ಸಾರ್ಮರ್ಥ್ಯ ಸೌಧದಲ್ಲಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ಯ ಸಂಸ್ಥೆ ಮೈಸೂರು ಹಾಗೂ ಅಧ್ಯಯನ ಕ್ವಾಲಿಟಿ ಪೌಂಡೇಷನ್ ಬೆಂಗಳೂರು.ಚಿಲ್ರನ್ಸ್ ಮೂಮೆಂಟ್ಸ್ ಫಾರ್ ಸಿವಿಕ್ ಅವೇರ್ಸೆಸ್ (ಸಿಎಂಸಿಎ) ಬೆಂಗಳೂರು.ಅರ್ಲಿ ಬರ್ಡ್ ನೇಚರ್ ಕನ್ವರ್ಜೆನ್ಸ್, ನೇಚರ್ ಕನ್ಸರ್ವೇಟೀವ್ ಪೌಂಡೇಷನ್ ಬೆಂಗಳೂರು. ಇವರ ಸಹಯೋಗ ದಲ್ಲಿ ನಡೆದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂತೋಷ ಬಿರಾದಾರ ಪಾಟೀಲ ಅವರು ಮಕ್ಕಳ ಸ್ನೇಹಿ ಗ್ರಾಮೀಣ ಅರಿವು ಕೇಂದ್ರ ತರಬೇತಿ ಕಾರ್ಯಕ್ರಮದ ಮುಂದುವರೆದ ಭಾಗವಾಗಿ 2024-25 ನೇ ಆರ್ಥಿಕ ವರ್ಷದಲ್ಲಿ ಮಕ್ಕಳ ಸ್ನೇಹಿ ಅರಿವು ಕೇಂದ್ರಗಳನ್ನು ಮತ್ತಷ್ಟು ಸದೃಢಗೊಳಿಸಲು ಅಪರ ಮುಖ್ಯ ಕಾರ್ಯದರ್ಶಿಗಳಾದ ಉಮಾ ಮಹಾದೇವನ್ ಕ್ಷೇತ್ರ ಮಟ್ಟದಲ್ಲಿ ಮಕ್ಕಳೊಂದಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳನ್ನು ಗುರುತಿಸಿ ಅವರ ಜ್ಞಾನ ಮತ್ತು ಕೌಶಲ್ಯವನ್ನು ಅರಿವು ಕೇಂದ್ರದ ಮೇಲ್ವಿಚಾರಕರಿಗೆ ಒದಗಿಸಲು ಬಯಸಿದ್ದಾರೆ.
ಈ ಪ್ರಯತ್ನದಲ್ಲಿ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಯವು ಹಲವಾರು ಸಂಸ್ಥೆಗಳನ್ನು ಗುರುತಿಸಿ ತರಬೇತಿಯನ್ನು ನೀಡಲಾಗುತ್ತದೆ ಇದರ ಪ್ರಯೋಜನ ಪಡೆದು ಕೊಳ್ಳುವಂತೆ ಹೇಳಿದರುತರಬೇತಿ ಸಂಪನ್ಮೂಲ ವ್ಯಕ್ತಿ ಹಾಗೂ ವಿಕೇಂದ್ರೀಕೃತ ತರಬೇತಿ ಸಂಯೋಜಕರಾದ ಭೀಮಪ್ಪ ಹವಳಿ ಅವರು ತರಬೇತಿಯಲ್ಲಿ ಸಕ್ರಿಯ ನಾಗರೀಕತ್ವ.ವಿಮರ್ಶಾತ್ಮಕ ಚಿಂತನೆ. ಲಿಂಗ ಸಮಾನತೆ. ಅನುಭೂತಿ.ನಮ್ಮ ಸುತ್ತಲಿನ ಪಕ್ಷಿಗಳು ಮತ್ತು ಪರಿಸರ ಇನ್ನಿತರ ವಿಷಯಗಳ ಕುರಿತು ತರಬೇತಿ ನೀಡಿದರುಕಾರ್ಯಕ್ರಮದಲ್ಲಿ ಯಲಬುರ್ಗಾ ಮತ್ತು ಕುಕನೂರು ತಾಲೂಕಿನ ಅರಿವು ಕೇಂದ್ರದ ಮೇಲ್ವಿಚಾರಕರು ಹಾಜರಿದ್ದರು ಬಸವರಾಜ್ ಮ್ಯಾಗೇರಿ.ಪ್ರವೀಣ್ ಕುಮಾರ ಸನಗಿನ.ಗವಿಸಿದ್ದಮ್ಮ ಗುಳಗುಳಿ. ಮೌಲಾಬಿ ಕರಮುಡಿ. ವೀರನಗೌಡ ಪಾಟೀಲ. ಈಶಪ್ಪ ಸಿದ್ದಾಪುರ. ರಂಗಪ್ಪ ಲಮಾಣಿ.ಜಗನ್ನಾಥ ಅಕ್ಕಸಾಲಿಗ. ಜಗದೇಶ ಚಲವಾದಿ.ವಿಷಯ ನಿರ್ವಾಹಕರಾದ ಬಸವರಾಜ್ ಪಾಟೀಲ. ಶೇಖಪ್ಪ ಭಾನಾಪೂರ ಇನ್ನಿತರರು ಇದ್ದರು.