ಬಿ.ಎನ್.ಖೋತ ವಿದ್ಯಾ ಸಂಸ್ಥೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ
ಬೀಳಗಿ 26: ತಾಲೂಕಿನ ಬನಶಂಕರಿದೇವಿ ವಿದ್ಯಾ ಸಂಸ್ಥೆಯ ಪ್ರತಿಷ್ಠಾನದ ಬಿ.ಎನ್.ಖೋತ ಅಂತರಾಷ್ಟ್ರೀಯ ಪಬ್ಲಿಕ್ ಶಾಲೆ ಮತ್ತು ಬಿ.ಎನ್.ಖೋತ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ ಅನಗವಾಡಿಯ ಸಂಯುಕ್ತಾಶ್ರಯದಲ್ಲಿ 76ನೆಯ ಗಣರಾಜ್ಯೋತ್ಸವದ ಸಂಭ್ರಮದಿಂದ ಆಚರಿಸಲಾಯಿತು.
ಸಂಸ್ಥೆಯ ನಿರ್ದೇಶಕಿ ಶೋಭಾ ಖೋತ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾದ ವಿಕ್ರಮಕುಮಾರ ಖೋತರವರು ರಾಷ್ಟ್ರಮಾತೆ ಭಾರತಾಂಬೆಗೆ ಮತ್ತು ಮಹಾನ್ ನಾಯಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿದರು.
ಪ್ರಾಂಶುಪಾಲರು ಸುರೇಶ ಹವಾಲ್ದಾರವರು ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯದ ಸಂತಸ ಮತ್ತು ನಮ್ಮ ಹೆಮ್ಮೆಯ ಲಿಖಿತ ಸಂವಿಧಾನದ ಶ್ರೇಷ್ಠತೆಯನ್ನು ಮಕ್ಕಳಿಗೆ ಮನ ಮುಟ್ಟುವಂತೆ ತಿಳಿಸಿದರು.
ಕನ್ನಡ ಉಪನ್ಯಾಸಕ ಬಸವರಾಜ ಬಡಿಗೇರ, ಗೀತಾ ಭಂಡಾರಿ ವಿದ್ಯಾರ್ಥಿ ಸುಮಂತ ಡಾಣಿ ಮಾತನಾಡಿದರು. ಶಾಲೆಯ ವಿದ್ಯಾರ್ಥಿಗಳಿಂದ ದೇಶಭಕ್ತಿಯನ್ನು ಮೂಡಿಸುವ ಹಾಡು ಮತ್ತು ಸಂವಿಧಾನದ ಪ್ರಸ್ತಾವನೆಯ ಪರಿಕಲ್ಪನೆಯನ್ನು ಮೂಡಿಸುವ ಚಟುವಟಿಕೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಶಾಲೆಯ ನಾಲ್ಕು ತಂಡಗಳಾದ ಕದಂಬ, ಚಾಲುಕ್ಯ, ಮೌರ್ಯ ಮತ್ತು ಗುಪ್ತ ತಂಡಗಳಿಗೆ ಪಥಸಂಚಲನ ಸ್ಪರ್ಧೆಯನ್ನು ಏರಿ್ಡಸಿಲಾಯಿತು. ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮೌರ್ಯ ತಂಡ, ದ್ವಿತೀಯ ಸ್ಥಾನ ಅನುಕ್ರಮವಾಗಿ ಕದಂಬ ಮತ್ತು ಗುಪ್ತಾ ತೃತೀಯ ಸ್ಥಾನ ಚಾಲುಕ್ಯ ತಂಡಗಳು ತಮ್ಮ ಮುಡಿಗೇರಿಸಿಕೊಂಡವು.
ರಿಹಾನ್ ಮುಲ್ಲಾ, ಸುಮಂಗಲಾ ಬೆನಕಟ್ಟಿ, ಐಶ್ವರ್ಯ ಕಂದಗಲ್, ಮಾನಸಾ ನಾಗರಾಳ ಶಾಲೆ ಮತ್ತು ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.