ಹಗಲು ಹೊತ್ತಿನಲ್ಲಿಯೇ ಇಲ್ಲಿ ಜೆಸಿಬಿ ಮೂಲಕ ಮಣ್ಣು ಅಗೆದು ಟಿಪ್ಪರ್
A JCB digs up soil here in broad daylight and dumps it into a tipper truck
ಸವದತ್ತಿ 11: ಸಮೀಪದ ಯಡ್ರಾಂವಿ ರಸ್ತೆಯ ಆದರ್ಶ ಶಾಲೆ ಹತ್ತಿರ ಗುಡ್ಡದ ವಾರಿಯಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ಎಗ್ಗಿಲ್ಲದೆ ನಡೆದಿದೆ. ತಾಲುಕು ಆಡಳಿತ ಇದನ್ನು ತಡೆಯುವಲ್ಲಿ ಸಂಪೂರ್ಣ ವಿಫಲ ವಾಗಿದ್ದು ಇದು ಸಾರ್ವಜನಿಕ ವಲಯದಲ್ಲಿ ಅನುಮಾನಕ್ಕೆ ಎಡೆಮಾಡಿ ಕೊಟ್ಟಂತಾಗಿದೆ.
ಹಗಲು-ರಾತ್ರಿ ಇಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಹಿಟಾಚಿ ಮತ್ತು ಜೆಸಿಬಿ, ಟಿಪ್ಪರ್ ಗಳದ್ದೇ ದರ್ಬಾರ್ ಹೆಚ್ಚಾಗಿದೆ. ನಿರಂತರವಾಗಿ ಗರಸು ಮಣ್ಣು, ಬಗೆಯಲಾಗುತ್ತಿದ್ದು, ರಸ್ತೆ ಮೂಲಕ ವಿವಿಧೆಡೆ ಸಾಗಿಸಲಾಗುತ್ತಿದೆ.
ಪಕ್ಕದಲ್ಲಿ ಆದರ್ಶ ವಿದ್ಯಾಲಯ ವಿದೆ. ಹಗಲು ಹೊತ್ತಿನಲ್ಲಿಯೇ ಇಲ್ಲಿ ಜೆಸಿಬಿ ಮೂಲಕ ಮಣ್ಣು ಅಗೆದು ಟಿಪ್ಪರ್ ಗಳ ಮೂಲಕ ಸಾಗಿಸಲಾಗುತ್ತಿದೆ. ಆದರ್ಶ ಶಾಲೆಗೆ ವಿದ್ಯಾರ್ಥಿಗಳು ತೆರಳಲು ಈ ಚಿಕ್ಕ ರಸ್ತೆ ಒಂದೇ ಮಾರ್ಗವಾಗಿದೆ. ಇದೀಗ ಇಲ್ಲಿ ಟಿಪ್ಪರ್ ಗಳ ಹಾವಳಿ ಹೆಚ್ಚಾಗಿದ್ದು, ಶಾಲಾ ಸಮಯದಲ್ಲಿ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತಿದೆ.
ಪ್ರಭಾವಿಗಳ ಹೆಸರು ಹೇಳಿ ಇಲ್ಲಿ ಅಕ್ರಮವಾಗಿ ಮಣ್ಣು ಅಗೆಯಲಾಗುತ್ತಿದೆ ಎನ್ನಲಾಗುತ್ತಿದೆ. ಅತ್ಯಧಿಕ ಪ್ರಮಾಣದಲ್ಲಿ ಅಕ್ರಮ ಮಣ್ಣು ಸಾಗಿಸಲಾಗುತ್ತಿದ್ದರೂ ಅಧಿಕಾರಿಗಳು ಕಂಡು ಕಾಣದಂತೆ ಜಾಣಮೌನ ವಹಿಸಿದ್ದಾರೆ.ಇನ್ನೂ ಅಧಿಕ ಭಾರ ವಾಹನಗಳು ಸಾಗುತ್ತಿರುವುದರಿಂದ ರಸ್ತೆಗಳು ನಲುಗಿ ಹೋಗಿವೆ. ಅನೇಕ ಕಡೆ ಗುಂಡಿಗಳು ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ ಎಂದು ವಾಹನ ಸವಾರರೂ ಆಕ್ರೋಶ ಹೊರಹಾಕುತ್ತಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 