ಕೆ ಎಸ್ ಆಸ್ಪತ್ರೆಯಲ್ಲಿ 62 ವರ್ಷದ ರೋಗಿಗೆ ಶಾಶ್ವತ ಫೇಸ್ ಮೇಕರ್ ಶಸ್ತ್ರಚಿಕಿತ್ಸೆ ಯಶಸ್ವಿ

A 62-year-old patient underwent permanent face maker surgery at KS Hospital

ಕೆ ಎಸ್  ಆಸ್ಪತ್ರೆಯಲ್ಲಿ 62 ವರ್ಷದ ರೋಗಿಗೆ ಶಾಶ್ವತ ಫೇಸ್ ಮೇಕರ್ ಶಸ್ತ್ರಚಿಕಿತ್ಸೆ ಯಶಸ್ವಿ 

ಕೊಪಳ 17: ಕೆ ಎಸ್ ಆಸ್ಪತ್ರೆ ಕೊಪ್ಪಳದಲ್ಲಿ ಹೃದಯಕ್ಕೆ ಯಶಸ್ವಿ ಶಾಶ್ವತ ಫೇಸ್ ಮೇಕರ್ ಅಳವಡಿಕೆ.ಸಾಮಾನ್ಯ ಹೃದಯದ ಕಾರ್ಯಚಟುವಟಿಕೆಯನ್ನು ಪುನಃಸ್ಥಾಪಿಸಲು ಮತ್ತು ಅನಿಯಮಿತ ಹೃದಯ ಬಡಿತಗಳು (ಸಾಮಾನ್ಯವಾಗಿ ನಿಮಿಷಕ್ಕೆ 60 ಬಡಿತಗಳಿಗಿಂತ ಕಡಿಮೆ) ಅಥವಾ ವಿದ್ಯುತ್ ವಹನ ಸಮಸ್ಯೆಗಳಿಂದ ಉಂಟಾಗುವ ತೊಂದರೆಗಳನ್ನು ತಡೆಯಲು ಫೇಸ್ ಮೇಕರನ್ನು ಬಳಸಲಾಗುತ್ತದೆ. 

 ರೋಗಿಯ ಜೀವನದ ಗುಣಮಟ್ಟವನ್ನು ಸುಧಾರಿಸಲು ಇದು ಸಾಮಾನ್ಯವಾಗಿ ಸುರಕ್ಷಿತ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ, ವಿಶೇಷವಾಗಿ ಅಸಹಜ ಹೃದಯದ ಲಯವನ್ನು ಉಂಟುಮಾಡುವ ಪರಿಸ್ಥಿತಿಗಳಿರುವ ಜನರಿಗೆ. ಡಿಸೆಂಬರ್ 6, 2024 ರಂದು  ಕೆ ಎಸ್  ಆಸ್ಪತ್ರೆಯಲ್ಲಿ 62 ವರ್ಷದ ರೋಗಿಗೆ ಶಾಶ್ವತ ಫೇಸ್ ಮೇಕರ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಹೃದಯದ ಬಡಿತದಲ್ಲಿ ತೊಂದರೆ ಕಂಡ ಕಾರಣ ಹನುಮಂತಪ್ಪರವರಿಗೆ  ಹೃದ್ರೋಗ ತಜ್ಞರಾದ ಡಾ. ರುದ್ರೇಶ್ ಅವರು ಅವರಿಗೆ ತಕ್ಷಣ ಟೆಂಪರರಿ ಪೇಸ್ ಮೇಕರ್ ಅಳವಡಿಸಿ ಹೃದಯದ ಬಡಿತವನ್ನು ನಿಯಂತ್ರಣಕ್ಕೆ ತಂದಿದ್ದರು. ನಂತರ ಡಿಸೆಂಬರ್ 6 ರಂದು ಬೆಳಿಗ್ಗೆ ಪರ್ಮನೆಂಟ್ ಪೇಸ್ ಮೇಕರ್ ಅಳವಡಿಕೆ ಶಸ್ತ್ರಚಿಕಿತ್ಸೆಯನ್ನು ಆಸ್ಪತ್ರೆಯ ಕ್ಯಾತ್ ಲ್ಯಾಬ್ ವಿಭಾಗದಲ್ಲಿ ಯಶಸ್ವಿಗಾಗಿ ಪೂರ್ಣಗೊಳಿಸಿದರು.ಇಂತಹ ಅತ್ಯಾಧುನಿಕ ಹಾಗೂ ಜೀವರಕ್ಷಕ ಚಿಕಿತ್ಸೆಗೆ ಜಿಲ್ಲೆಯ ಜನಸಾಮಾನ್ಯರು ಹೊರ ಜಿಲ್ಲೆಗಳನ್ನ ಅವಲಂಬಿತರಾಗಿದ್ದರು ಹಾಗೂ  ಕೆಲವೊಂದು ಸಂಧರ್ಭಗಳಲ್ಲಿ ಸರಿಯಾದ ಸಮಯಕ್ಕೆ ತಲುಪದೆ, ಚಿಕಿತ್ಸೆ ಸಿಗದೆ ಜೀವಕ್ಕೆ ಅಪಾಯವಾಗುತಿತ್ತು. ಈಗ ಇಂತಹ ಹಲವು ಸೌಲಭ್ಯ ಕೊಪ್ಪಳದಲ್ಲಿಯೇ ಲಭ್ಯವಿರುದರಿಂದ ಕ್ಲಿಷ್ಟಕರ ಮತ್ತು ಜೀವಕ್ಕೆ ಅಪಾಯವಾಗುವ ಪರಿಸ್ಥಿತಿಯನ್ನು ಎದುರಿಸಿ ಉನ್ನತ ಮಟ್ಟದ ಚಿಕಿತ್ಸೆ ಸ್ಥಳೀಯವಾಗಿ ಪಡೆಯುವಂತಾಗಿದೆ.ಕೈಗೆಟಕುವ ಬೆಲೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಗುಣಮಟ್ಟದ ಪರಿಣಾಮಕಾರಿ  ಚಿಕಿತ್ಸೆ ಕೊಪ್ಪಳದ  ಕೆ ಎಸ್  ಆಸ್ಪತ್ರೆ ಒದಗಿಸುತ್ತಿದೆ ಸರಕಾರದ ಎಲ್ಲಾಆರೋಗ್ಯ ವಿಮಾ ಸೌಲಭ್ಯಗಳು ಇಲ್ಲಿ ಲಭ್ಯವಿದೆ.