9700 ಮೆ.ಟನ್ ಕಬ್ಬು ನುರಿಸಿ ಶಿರಗುಪ್ಪಿ ಶುಗರ್ಸ ದಾಖಲೆ: ಅರುಣ ಫರಾಂಡೆ
ಕಾಗವಾಡ 21: ಶಿರಗುಪ್ಪಿ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಕಬ್ಬು ನುರಿಸುವ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರ ಸಹಕಾರದೊಂದಿಗೆ ಕಾರ್ಖಾನೆಯ ಸಿಬ್ಬಂದಿ ವರ್ಗದವರು ದಾಖಲೆಯ 9741 ಮೆ.ಟನ್ ಕಬ್ಬು ನುರಿಸಿ, ದಾಖಲೆ ನಿರ್ಮಿಸಿದೆ ಎಂದು ಕಾರ್ಖಾನೆಯ ಉಪಾಧ್ಯಕ್ಷ ಅರುಣ ಫರಾಂಡೆ ಹೇಳಿದ್ದಾರೆ. ಅವರು, ಶನಿವಾರ ದಿ.21 ರಂದು ಕಾಗವಾಡ ಪಟ್ಟಣದ ಶಿರಗುಪ್ಪಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಕಾರ್ಖಾನೆಯ ಸಿಬ್ಬಂದಿ ವರ್ಗದವರು, ಹಿತೈಷಿಗಳು ಹಮ್ಮಿಕೊಂಡಿದ್ದ ತಮ್ಮ ಹುಟ್ಟು ಹಬ್ಬದಲ್ಲಿ ಸನ್ಮಾನ ಸ್ವೀಕರಿಸಿ, ಮಾತನಾಡುತ್ತಿದ್ದರು. ಕಳೆದ ಅನೇಕ ವರ್ಷಗಳಿಂದ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರಕಿದ್ದು, ಕಾರ್ಖಾನೆಯ ಪ್ರಗತಿಗಾಗಿ ಹಗಲಿರುಳು ಶ್ರಮಿಸುತ್ತಿದ್ದೇನೆ. ಅದಕ್ಕೆ ಸಿಬ್ಬಂದಿ ವರ್ಗದವರ ಮತ್ತು ಕಾರ್ಖಾನೆಯ ಅಧ್ಯಕ್ಷ ಕಲ್ಲಪ್ಪಣ್ಣಾ ಮಗ್ಗೆನ್ನವರ, ದೊಡ್ಡನ್ನವರ ಕುಟುಂಬ ಮತ್ತು ಸುಗನ್ನವರ ಕುಟುಂಬದ ಸಹಕಾರವೇ ಕಾರಣವಾಗಿದೆ ಎಂದರು. ಕೌತುಕ ಮಗ್ಗೆನ್ನವರ, ವಿರೇಂದ್ರ ಜಾಡರ, ಜ್ಯೋತಿಕುಮಾರ ಪಾಟೀಲ, ಎಸ್.ಎ. ನಾಯಿಕ, ಸಂಜಯ ಬಡಿಗೇರ, ಉಲ್ಲಾಸ ಪಾಟೀಲ, ಜಗದೀಶ ಎಚ್.ಎನ್., ಪ್ರವೀಣ ಚೌಗುಲೆ, ವಿದ್ಯಾಧರ ಧೊಂಡಾರೆ, ಅರುಣ ಜೋಶಿ, ಲಕ್ಷ್ಮಣ ಸೂರ್ಯವಂಶಿ, ಪ್ರಕಾಶ ಧೊಂಡಾರೆ, ಎ.ಜೆ. ಪಾಟೀಲ ಮುಂತಾದವರು ಮಾತನಾಡಿ, ಅರುಣ ಫರಾಂಡೆ ಅವರಿಗೆ ಶುಭಾಶಯ ಕೋರಿ, ಅವರ ಮಾರ್ಗದರ್ಶನದಲ್ಲಿ ಕಾರ್ಖಾನೆಯು ಇನ್ನಷ್ಟು ಪ್ರಗತಿ ಸಾಧಿಸಲಿ ಎಂದು ಹಾರೈಸಿದರು. ಮುಖಂಡರಾದ ರಮೇಶ ಚೌಗುಲಾ, ಕಾಕಾ ಪಾಟೀಲ, ಜ್ಯೋತಿಕುಮಾರ ಪಾಟೀಲ, ಚಿನಾದಂದ ಅವಟಿ, ಎ.ಜೆ. ಪಾಟೀಲ, ಪ್ರಕಾಶ ಧೊಂಡಾರೆ, ಬಾಳಕೃಷ್ಣ ಬಜಂತ್ರಿ, ಟಿ.ಕೆ. ಧೊತ್ರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.