ಶಿವಯೋಗಿ ಸಿದ್ಧರಾಮೇಶ್ವರರ 852 ನೇ ಜಯಂತಿ ಆಚರಣೆ
ಲಕ್ಷ್ಮೇಶ್ವರ 15: ಲಕ್ಷ್ಮೇಶ್ವರ ನಗರದ ಹಿರೇಬಣ ವಡ್ಡರ ಓಣಿ ಹಾಗೂ ಬಸ್ತಿಬಣ ವಡ್ಡರ(ಭೋವಿ) ಸಮಾಜದ ಗುರು ಹಿರಿಯರು ಹಾಗೂ ಯುವಕರು ಸೇರಿಕೊಂಡು ತಾಲೂಕ ದಂಡಾಧಿಕಾರಿಗಳ ಕಛೇರಿಯಲ್ಲಿ ಶಿವಯೋಗಿ ಸಿದ್ಧರಾಮೇಶ್ವರರ 852 ನೇ ಜಯಂತಿಯನ್ನ ಆಚರಣೆ ಮಾಡಿದರು.
ಈ ವೇಳೆ ತಾಲೂಕ ಗ್ರೇಡ್-2 ದಂಡಾಧಿಕಾರಿಗಳಾದ ಮಂಜುನಾಥ ಅಮಾಸಿ ರವರು ಕಾಯಕಯೋಗಿ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪ ನಮನ ಸಲ್ಲಿಸಿದರು. ದೈಹಿಕ ಶಿಕ್ಷಕರಾದ ಆರ್.ಎಚ್.ನರೇಗಲ್ಲ ಶಿವಯೋಗಿ ಸಿದ್ಧರಾಮೇಶ್ವರ ಜೀವನ ಚರಿತ್ರೆಯ ಬಗ್ಗೆ ಸಂಕ್ಷಿಪ್ತವಾಗಿ ಉಪನ್ಯಾಸವನ್ನ ಮಾಡಿ 12 ನೇ ಶತಮಾನದ ಸಂತ ಕವಿ ಅವರ ತಂದೆ ಮುದ್ದೇಗೌಡ ತಾಯಿ ಸುಗ್ಗೆವ್ವ ದಂಪತಿಗಳಿಗೆ ಜನ್ಮ ತಾಳಿದ "ಧೂಳಿಮಾಕಾಳ" ಎಂಬ ನಾಮದಿಂದ ಸಿದ್ಧರಾಮೇಶ್ವರರನ್ನ ಕರೆಯುತ್ತಿದ್ದರು ಎಂದರು.
ಈ ವೇಳೆ ಭೋವಿ ಸಮಾಜದ ಲಕ್ಷ್ಮೇಶ್ವರ ತಾಲೂಕ ಅಧ್ಯಕ್ಷರಾದ ರಾಜು ಕಳ್ಳಿ, ಲಕ್ಷ್ಮೇಶ್ವರ ಪುರಸಭೆ ಸದಸ್ಯೆ ಜಯಕ್ಕ ಕಳ್ಳಿ, ಮುಖಂಡರುಗಳಾದ ಯಲ್ಲಪ್ಪ ಬಿಂಜಡಗಿ, ಯಲ್ಲಪ್ಪ ಕೋರದಾಳ, ಮಲ್ಲೇಶಪ್ಪ ಕಟ್ಟಿಮನಿ, ಹನಮಂತ ದೊಡ್ಡಮನಿ,ಮಂಜುನಾಥ ದೊಡ್ಡಮನಿ,ಆನಂದ ಕುರ್ತಕೋಟಿ, ಬಸವರಾಜ ಜಂಬಣ್ಣವರ, ಹನಮಂತಪ್ಪ ಗುತ್ತಲ, ಮಂಜುನಾಥ ಕೋರದಾಳ, ಸತ್ಯಪ್ಪ ಅರಳಿಕಟ್ಟಿ, ಹನಮಂತಪ್ಪ ಕರ್ಜಗಿ, ಮಂಜುನಾಥ ಬೂದಿಹಾಳ,ಪ್ರಕಾಶ ಮುಶೇಪ್ಪನವರ,ಕೃಷ್ಣಾ ಹುಲಗೂರ, ಪ್ರಕಾಶ ಮತ್ತೂರ, ಪ್ರಕಾಶ ಕಳ್ಳಿ, ವಿಜಯ ದೊಡ್ಡಮನಿ, ಸೇರಿದಂತೆ ಲಕ್ಷ್ಮೇಶ್ವರ ನಗರದ ಭೋವಿ ವಡ್ಡರ ಸಮಾಜ ಹಿರಿಯರು,ಯುವಕರು ಸೇರಿ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು.