ಅ.ಭಾ.84 ನೇ ಕನ್ನಡ ಸಾಹಿತ್ಯ ಸಮ್ಮೇಳನ ಮೆರವಣಿಗೆ ಮಾರ್ಗದ ದುರಸ್ತಿ, ಸ್ವಚ್ಛತೆಗೆ ಜಿಲ್ಲಾಧಿಕಾರಿ ಸೂಚನೆ

ಧಾರವಾಡ 30: ಬರುವ ಜನವರಿ 4, 5 ಹಾಗೂ 6 ರಂದು ನಡೆಯಲಿರುವ ಅಖಿಲಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಮಾರ್ಗದ ಎಲ್ಲ ರಸ್ತೆ, ಚರಂಡಿ ದುರಸ್ತಿ ಹಾಗೂ ಗೋಡೆಗಳನ್ನು ಅಲಂಕರಿಸುವ ಕಾರ್ಯ ಇನ್ನಷ್ಟು ಚುರುಕುಗೊಳಿಸಬೇಕು. ಕಾಲಾವಕಾಶ ಕಡಿಮೆ ಇರುವುದರಿಂದ ಹೆಚ್ಚು ಜನರನ್ನು ಬಳಸಿಕೊಂಡು ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದರು. ಇಂದು ಬೆಳಿಗ್ಗೆ ಕನರ್ಾಟಕ ಕಲಾ ಮಹಾವಿದ್ಯಾಲಯದ ಅವರಣದಲ್ಲಿ ಮೆರವಣಿಗೆ ಆರಂಭವಾಗುವ ಸ್ಥಳದಿಂದ ಪರಿಶೀಲನೆ ಆರಂಭಿಸಿದ ಜಿಲ್ಲಾಧಿಕಾರಿಯವರು ಕಾಲೇಜು ರಸ್ತೆ, ಜ್ಯುಬಿಲಿ ವೃತ್ತ, ಹಳೇ ಬಸ್ನಿಲ್ದಾಣ, ವಿವೇಕಾನಂದ ವೃತ್ತ, ಸಿಬಿಟಿ, ಮಹಾನಗರ ಪಾಲಿಕೆ ಕಚೇರಿ, ಗ್ರಾಮೀಣ ಬಿಇಓ ಕಚೇರಿ, ಹಳೇ ಡಿಎಸ್ಪಿ ವೃತ್ತ, ಉಪನಗರ ಪೊಲೀಸ್  ಠಾಣೆ, ಹೊಸ ಬಸ್ ನಿಲ್ದಾಣ ಮಾರ್ಗವಾಗಿ ಕೃಷಿ ವಿಶ್ವವಿದ್ಯಾಲಯ ಆವರಣಕ್ಕೆ ತೆರಳಿ ಸಿದ್ಧತೆಗಳನ್ನು ವೀಕ್ಷಿಸಿದರು. 

ಸಮ್ಮೇಳನ ಮೆರವಣಿಗೆ ಆರಂಭವಾಗುವ ಕನರ್ಾಟಕ ಕಲಾ ಕಾಲೇಜಿನ ಮೈದಾನದಲ್ಲಿ  ಕಲಾವಿದರು ಸಿದ್ಧಗೊಳ್ಳುವರು. ವಿಜ್ಞಾನ ಕಾಲೇಜಿನ ಮೈದಾನದಲ್ಲಿ ಉಪಾಹಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಕಾಲೇಜಿನ ಮುಖ್ಯ ರಸ್ತೆಯಲ್ಲಿ ಮಹಿಳೆಯರ ಕುಂಭಮೇಳಕ್ಕೆ ಮಾರ್ಗ ಸೂಚಿಸಿದರು. ಕಾಲೇಜು ಆವರಣದಲ್ಲಿರುವ ಸಂಸ್ಥಾಪಕರ ಮೂತರ್ಿಗಳಿಗೆ ಮಾಲಾರ್ಪಣೆ ನೆರವೇರಿಸಿ ಅಲ್ಲಿಂದ ಸಾರೋಟಿನಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭಿಸಲಾಗುವುದು ಎಂದರು. ಜ್ಯುಬಿಲಿ ವೃತ್ತದಿಂದ ಕೃಷಿ ವಿಶ್ವವಿದ್ಯಾಲಯ ಆವರಣದವರೆಗಿನ ರಸ್ತೆ ನಿಮರ್ಾಣ ಕಾಮಗಾರಿ ಬಹಳ ಚುರುಕುಗೊಳ್ಳಬೇಕು. ಪಾದಚಾರಿಗಳಿಗೆ ಮತ್ತು ಸಮ್ಮೇಳನಕ್ಕೆ ಆಗಮಿಸುವ ಜನರಿಗೆ ಯಾವುದೇ ತೊಂದರೆಗಳಾಗದಂತೆ ರಸ್ತೆ ಅಕ್ಕಪಕ್ಕದ ಚರಂಡಿ ಸ್ವಚ್ಛಗೊಳಿಸಬೇಕು. ಧೂಳು ನಿಯಂತ್ರಣಕ್ಕೆ ಹೆಚ್ಚು ಒತ್ತು ಕೊಡಬೇಕು. ನಿರಂತರವಾಗಿ ನೀರು ಸಿಂಪಡಿಸುತ್ತಿರಬೇಕು. ಮುಖ್ಯವೇದಿಕೆ ನಿಮರ್ಾಣ ವೀಕ್ಷಿಸಿದ ಅವರು ವಿದ್ಯುತ್ ಅವಘಡಗಳಿಗೆ ಆಸ್ಪದವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು. ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಬಿ. ಚೆಟ್ಟಿ, ಹುಬ್ಬಳ್ಳಿ-ಧಾರವಾಡ ಉಪ ಪೊಲೀಸ್ ಆಯುಕ್ತ ಬಿ.ಎಸ್. ನೇಮಗೌಡರ, ಉಪವಿಭಾಗಾಧಿಕಾರಿ ಮಹಮ್ಮದ್ ಜುಬೇರ್, ಹೆಸ್ಕಾಂ ಅಧೀಕ್ಷಕ ಇಂಜಿನೀಯರ್ ಶಾನಭಾಗ್, ಲೋಕೋಪಯೋಗಿ ಕಾರ್ಯನಿವರ್ಾಹಕ ಇಂಜಿನೀಯರ್ ವಿರೂಪಾಕ್ಷ ಯಮಕನಮರಡಿ, ಮಹಾನಗರ ಪಾಲಿಕೆ ಆಯುಕ್ತ ಶಕೀಲ್ ಅಹ್ಮದ್, ತೋಟಗಾರಿಕೆ ಉಪನಿದರ್ೆಶಕ ರಾಮಚಂದ್ರ ಮಡಿವಾಳ,  ಜಿಲ್ಲಾ ವಾತರ್ಾಧಿಕಾರಿ ಮಂಜುನಾಥ ಡೊಳ್ಳಿನ್, ಪ್ರವಾಸೋದ್ಯಮ ಸಹಾಯಕ ನಿದರ್ೆಶಕ ಮಲ್ಲಿಕಾಜರ್ುನ ಭಜಂತ್ರಿ, ಎಂಸಿ ಮತ್ತು ಎ ಶಾಖಾ ವ್ಯವಸ್ಥಾಪಕ ಸಿದ್ಧಲಿಂಗೇಶ್ ಹಸಬಿ, ಶ್ರೀನಿವಾಸ, ವಿಜಯ ದಂಡಗಿ ಹಾಗೂ ಮತ್ತಿತರರು ಇದ್ದರು.