ಫೋಟೋಗ್ರಾಫರ್ ಅಪಹರಿಸಿ ಹಲ್ಲೆ ಮಾಡಿದ್ದ 8 ಜನರ ಬಂಧನ
ಈ ವೇಳೆ ಆರೋಪಿಗಳು ಜೀವಬೆದರಿಕೆ ಹಾಕಿ ಉಮೇಶನನ್ನು ಕಳುಹಿಸಿದ್ದಾರೆ
ಫೋಟೋಗ್ರಾಫರ್ ಅಪಹರಿಸಿ ಹಲ್ಲೆ ಮಾಡಿದ್ದ 8 ಜನರ ಬಂಧನ
ಬೆಳಗಾವಿ 26: ಮಹಿಳೆಯ ಒಬ್ಬರ ಫೋಟೊ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡಿದ್ದಾನೆ ಎಂದು ಆರೋಪಿಸಿ ಫೋಟೋಗ್ರಾಫರ್‌ನನ್ನು ಅಪಹರಿಸಿ ಹಲ್ಲೆಗೈದು ಜೀವ ಬೆದರಿಕೆ ಹಾಕಿದ್ದ ಎಂಟು ಜನ ಆರೋಪಿಗಳು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಜಿಲ್ಲೆಯ ಬೈಲಹೊಂಗಲ ಪಟ್ಟಣದ ಶಿವಾನಂದ ಭಾರತಿ ನಗರದ ಮುರಕಿಬಾವಿ 3ನೇ ಕ್ರಾಸ್ ನಿವಾಸಿ ಉಮೇಶ ಹೊಸೂರು ಅಪಹರಕ್ಕೆ ಒಳಗಾದ ಫೋಟೋ ಗ್ರಾಪರ್‌ನಾಗಿದ್ದಾನೆ. ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಬಸವರಾಜ್ ನರಟ್ಟಿಗೆ ಸೇರಿದ ಸ್ಟುಡಿಯೋದಲ್ಲಿ ಉಮೇಶ್ 12 ವರ್ಷಗಳ ಕಾಲ ಕೆಲಸ ಮಾಡಿದ್ದನು. ಬಳಿಕ ಸರಿಯಾಗಿ ಹಣ ಕೊಡುತ್ತಿಲ್ಲವೆಂದು ಕಳೆದ ವರ್ಷ ಕೆಲಸ ಬಿಟ್ಟು ಸ್ವಂತ ಸ್ಟುಡಿಯೋ ತೆರೆದಿದ್ದನು.
ಉಮೇಶ ಈತ ಕಳೆದ ಎರಡು ದಿನಗಳ ಹಿಂದೆ ಬೆಳಗಾವಿಯ ಕೆಪಿಟಿಸಿಎಲ್ ಹಾಲ್‌ನಲ್ಲಿ ನಡೆಯುತ್ತಿದ್ದ ಮದುವೆ ಆರ್ಡರ್ ಹಿಡಿದಿದ್ದನು. ಈ ವೇಳೆ ಕೆಪಿಟಿಸಿಎಲ್ ಹಾಲ್‌ಗೆ ಬಂದ ವಿಕ್ಕಿ ಎಂಬಾತ ಉಮೇಶನನ್ನು ತನ್ನ ಕಾರಿನ ಕಡೆಗೆ ಕರೆದೊಯ್ದು ಅಪಹರಣ ಮಾಡಿದ್ದಾನೆ. ಬಳಿಕ ಬೈಲಹೊಂಗಲ ತಾಲೂಕಿನ ಚಿವಟಗುಂಡಿ ಕ್ರಾಸ್ ಬಳಿ ವಾಹನ ನಿಲ್ಲಿಸಿ ಕಬ್ಬಿನ ರಾಡ್‌ನಿಂದ ವಿಕ್ಕಿ ಹಾಗೂ ಆತನ ಇಬ್ಬರು ಸ್ನೇಹಿತರು ಉಮೇಶ ಮೇಲೆ ಹಲ್ಲೆ ಮಾಡಿದ್ದಾರೆ.
ಬಳಿಕ ಬೈಲಹೊಂಗಲದ ಬಸವರಾಜ್ ನರಟ್ಟಿ ಸಂಬಂಧಿಕರ ಮನೆಗೆ ಉಮೇಶನನ್ನು ಕರೆದೊಯ್ದ ಆರೋಪಿಗಳು, ನಮ್ಮ ಮನೆಯ ಹೆಣ್ಣಮಗಳ ಫೋಟೊವನ್ನು ನಿನ್ನ ಬಳಿ ಏಕೆ ಇಟ್ಟುಕೊಂಡಿರುವೆ ಎಂದು ಉಮೇಶ ಮೇಲೆ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ. ಈ ವೇಳೆ ಆರೋಪಿಗಳು ಜೀವಬೆದರಿಕೆ ಹಾಕಿ ಉಮೇಶನನ್ನು ಕಳುಹಿಸಿದ್ದಾರೆ. ಹಲ್ಲೆಗೊಳಗಾದ ಉಮೇಶ್ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮಾಳಮಾರುತಿ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಹಳೆ ದ್ವೇಷಕ್ಕೆ ಹಲ್ಲೆ ಮಾಡಿ, ಈಗ ಮಹಿಳೆಯ ಫೋಟೊ ಇದೆ ಎಂದು ಸುಳ್ಳು ಕಥೆ ಕಟ್ಟುತ್ತಿದ್ದಾರೆಂದು ಉಮೇಶ ಆರೋಪಿಸಿದ್ದಾನೆ. ಈ ಪ್ರಕರಣ ಸಂಬಂಧ ಬಸವರಾಜ್ ನರಟ್ಟಿ, ಪ್ರವೀಣ ಉಮರಾಣಿ, ವಿಕ್ಕಿ, ತಾರಾ ನರಟ್ಟಿ, ಲಕ್ಷ್ಮಿ ನರಟ್ಟಿ ಸೇರಿ ಎಂಟು ಜನರನ್ನು ಬಂಧಿಸಿದ ಬೆಳಗಾವಿಯ ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ 