ಸಿಎಂಗಾಗಿ 7 ಗಂಟೆ ಕಾದ ಜನ 10 ನಿಮಿಷದಲ್ಲಿ ಜನತಾ ದರ್ಶನ ಮುಕ್ತಾಯ


ರಾಮನಗರ 16: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮನ್ನು ಆಯ್ಕೆ ಮಾಡಿದ ತವರು ಜಿಲ್ಲೆಯ ಜನತೆಯನ್ನು ಸುಮಾರು ಏಳು ಗಂಟೆಗಳ ಕಾಲ ಕಾಯಿಸಿ, ಕೇವಲ 10 ನಿಮಿಷದಲ್ಲಿ ಅವರ ಅಹವಾಲು ಆಲಿಸಿ ಹೊರಟು ಹೋದರು. 

ಸೋಮವಾರ ರಾಮನಗರ ಜಿಲ್ಲೆಗೆ ಭೇಟಿ ನೀಡಿದ ಕುಮಾರಸ್ವಾಮಿ ಅವರು, ಇಂದು ಬೆಳಗ್ಗೆ 9ಕ್ಕೆ ಜನತಾ ದರ್ಶನಕ್ಕೆ ನಿಗದಿಯಾಗಿತ್ತು. ಇದಕ್ಕಾಗಿ ಜಿಲ್ಲೆಯ ವಿವಿಧ ಮೂಲೆಗಳಿಂದ ಜನರು ಆಗಮಿಸಿದ್ದರು. ಆದರೆ, ತಡವಾಗಿ ಕ್ಷೇತ್ರಕ್ಕೆ ಆಗಮಿಸಿದ ಸಿಎಂ ಮೊದಲೇ ನಿಗದಿಯಾಗಿದ್ದ ಅಧಿಕಾರಿಗಳ ಸಭೆಗೆ ತೆರಳಿದರು. ಸಭೆ ಬಳಿಕ ಊಟಕ್ಕೆ ತೆರಳಿದ ಸಿಎಂ ಜನತಾ ದರ್ಧನ ನಡೆಸಿದ್ದು ಮಧ್ಯಾಹ್ನ 4.40ಕ್ಕೆ. 

ಸಿಎಂಗಾಗಿ ಕಾಯುತ್ತಿದ್ದ ದಿವ್ಯಾಂಗರು, ವೃದ್ಧರಿಗೆ ಊಟ, ಕುಳಿತುಕೊಳ್ಳುವ ಆಸನವಿಲ್ಲದೆ ಪರದಾಟ ನಡೆಸಿದರು. ಅಹವಾಲು ನೀಡಲು ಜಿ.ಪಂ. ಕಚೇರಿ ಆವರಣದಲ್ಲಿ ಪರದಾಡುತ್ತಿದ್ದರು.  ಕೊನೆಗೆ 4.40ಕ್ಕೆ ಆಗಮಿಸಿದ ಸಿಎಂ 10 ನಿಮಿಷದಲ್ಲಿ ಜನತಾ ದರ್ಶನ ಮುಗಿಸಿ ಮತ್ತೊಂದು ಸಭೆಗೆ ತೆರಳಿದರು.