ರಾಣೆಬೆನ್ನೂರಲ್ಲಿ 76ನೇ ಅದ್ದೂರಿ ಗಣರಾಜ್ಯೋತ್ಸವ ಭಾರತ ದೇಶ ವಿವಿಧತೆಯಲ್ಲಿ ಏಕತೆ ಸಾಧಿಸಿ ವಿಶ್ವಕ್ಕೆ ಮಾದರಿಯಾಗಿದೆ - ಭಾಗವಾನ್

76th grand Republic Day in Ranebennu India has achieved unity in diversity and set an example for t

ರಾಣೆಬೆನ್ನೂರಲ್ಲಿ 76ನೇ ಅದ್ದೂರಿ ಗಣರಾಜ್ಯೋತ್ಸವ ಭಾರತ ದೇಶ ವಿವಿಧತೆಯಲ್ಲಿ ಏಕತೆ ಸಾಧಿಸಿ ವಿಶ್ವಕ್ಕೆ ಮಾದರಿಯಾಗಿದೆ - ಭಾಗವಾನ್

ರಾಣೇಬೆನ್ನೂರು   28 : ಭಾರತ ದೇಶ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವ ಮಹಾನ್ ದೇಶವಾಗಿದೆ. ಯಾವುದೇ ಜಾತಿ, ಮತ, ಬೇಧ-ಭಾವ ಇಲ್ಲದೆ ಸಮಾನತೆಗಾಗಿ ಸದಾ ಕಾಲವೂ ತನ್ನ ಕರ್ತವ್ಯದ ಮೂಲಕ ಭಾವೈಕ್ಯತೆಯ ಪರಂಪರೆ ಬೆಳೆಯುತ್ತಾ ಬಂದಿರುವುದು ಸಮಗ್ರ ಭಾರತೀಯರ ಹೆಮ್ಮೆಯ ಸಂಗತಿ ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರು ಹಾಗೂ ತಹಶೀಲ್ದಾರ ಆರ್‌.ಹೆಚ್‌.ಭಾಗವಾನ್ ಹೇಳಿದರು.ಅವರು ಇಲ್ಲಿನ ನಗರಸಭಾ ಕ್ರೀಡಾಂಗಣದಲ್ಲಿ ಆಚರಣಾ ಸಮಿತಿ ಆಯೋಜಿಸಿದ್ದ 76ನೇ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ನಾಡು-ನುಡಿ, ನೆಲ-ಜಲ, ಭಾಷೆ ಮತ್ತು ಸಂಸ್ಕತಿಯ ತವರೂರು, ಹೋರಾಟಗಾರರ ಹೆಮ್ಮೆಯ ನಾಡು. ಕರ್ನಾಟಕದಲ್ಲಿ ಅನೇಕ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ನಂ.1 ರಾಜ್ಯ ಎನ್ನುವ ಸಾಲಿನಲ್ಲಿ ಇರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದರು.  

ಶಾಸಕ ಪ್ರಕಾಶ್ ಕೋಳಿವಾಡ ಮಾತನಾಡಿ, ನಮ್ಮ ಹಿರಿಯರ ತ್ಯಾಗ ಮತ್ತು ಬಲಿದಾನಗಳ ಮೂಲಕ 1947ರಲ್ಲಿ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶವು ಹಲವಾರು ಪ್ರಾದೇಶಿಕ ಭಾಷಾ ಪ್ರಾಂತ್ಯಗಳಲ್ಲಿ ರಾಜರ, ಸುಲ್ತಾನರ ಆಳ್ವಿಕೆಯಲ್ಲಿತ್ತು. ಈ ಆಡಳಿತ ವ್ಯವಸ್ಥೆಯಲ್ಲಿ ಜನರಿಂದ ಚುನಾಯಿತರಾದ ಸದಸ್ಯರ ಆಳ್ವಿಕೆ ಇರಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಇರಲಿಲ್ಲ. ಇದನ್ನೆಲ್ಲ ಮನಗಂಡ ಸ್ವತಂತ್ರ್ಯ ಭಾರತದ ನಾಯಕರು ದೇಶವನ್ನು ಸಮರ್ಥವಾಗಿ ಮುನ್ನಡೆಸಲು ಆಡಳಿತ ವ್ಯವಸ್ಥೆ ಬೇಕಿತ್ತು. ಇದರ ಪೂರಕವಾಗಿ ಡಾ.ಬಿ.ಆರ್‌.ಅಂಬೇಡ್ಕರ್ ರವರ ನೇತೃತ್ವದಲ್ಲಿ ಸಂವಿಧಾನ ರಚಿಸಿದರು ಎಂದರು. ನಮ್ಮ ಸರಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಸಮಗ್ರ ಸ್ತ್ರೀ ಸಮುದಾಯಕ್ಕೆ ಶಕ್ತಿ ತುಂಬಿದೆ. ಇದರಿಂದ ಮಹಿಳೆಯರ ಆರ್ಥಿಕ ಪ್ರಗತಿ ಅಭಿವೃದ್ಧಿ ಕಂಡಿದೆ ಎಂದರು. ಸಮಾಜದಲ್ಲಿ ಶಾಂತಿ ನೆಮ್ಮದಿ, ಪ್ರೀತಿ, ವಿಶ್ವಾಸ ಮತ್ತು ಭ್ರಾತೃತ್ವ ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ಸರಕಾರ ತನ್ನ ಪ್ರಭುತ್ವ ಸಾಧಿಸಿದೆ ಎಂದು ವಿವರಿಸಿ ಮಾತನಾಡಿದ ಕೋಳಿವಾಡರು, ತಾಲೂಕಿನ ಅಭಿವೃದ್ಧಿಗಾಗಿ ಈಗಾಗಲೇ ಅನೇಕ ಕ್ರಿಯಾ ಯೋಜನೆಗಳನ್ನು ರೂಪಿಸಿದ್ದೇವೆ. ನಮ್ಮ ದೇಶದ ಸಂವಿಧಾನ ಸಮಗ್ರ ಭಾರತೀಯರ ಭಗವದ್ಗೀತೆ ಇದ್ದಂತೆ. ಸಮಾನತೆ ಭಾವೈಕ್ಯತೆ ನಮ್ಮೆಲ್ಲರ ಅವಿಭಾಜ್ಯ ಅಂಗವಾಗಿದೆ ಎಂದರು. ನಗರ ಮತ್ತು ತಾಲೂಕಿನ ಅಭಿವೃದ್ಧಿಗಾಗಿ 35 ಕೋಟಿ ರೂ. ಅನುದಾನದಲ್ಲಿ ರಸ್ತೆ, ಚರಂಡಿ, ಉದ್ಯಾನವನ, ಬೀದಿ ದೀಪ, ಅಂಗನವಾಡಿ ಅಭಿವೃದ್ಧಿ, ಪೌರ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮದ ಇನ್ನಿತರೆ ಸಮುದಾಯ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಗತಿಯಲ್ಲಿರುತ್ತದೆ. ನಗರಸಭೆ ವ್ಯಾಪ್ತಿಯ ಅಭಿವೃದ್ಧಿ ಕಾರ್ಯ ಕೈಗೊಳ್ಳಲು 1.57 ಕೋಟಿ ವಿಶೇಷ ಅನುದಾನ ಎಂದರು. ಮಂಜೂರಾಗಿದೆ ಎಂದರು.ಉಪ ತಹಸೀಲ್ದಾರ ಅರುಣ ಕಾರಗಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಮಂಜನಗೌಡ ಪಾಟೀಲ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಸವಣ್ಣೆಪ್ಪ ಪಾರ್ವತೇರ, ಟಿಎಪಿಸಿಎಂಎಸ್ ಅಧ್ಯಕ್ಷ ಯಲ್ಲರಡ್ಡಿ ರಡ್ಡೇರ, ಕಸಾಪ ತಾಲೂಕಾಧ್ಯಕ್ಷ ಪ್ರಭಾಕರ್ ಶಿಗ್ಲಿ, ಸ್ವಾಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ, ಬಿಸಿಎಂ ಹಾಸ್ಟೆಲ್ ಸಹಾಯಕ ನಿರ್ದೇಶಕ ವಿ.ಎಸ್‌. ಹಿರೇಮಠ, ಪಶು ವೈದ್ಯ ಡಾ.ನೀಲಕಂಠ ಅಂಗಡಿ, ಆರೋಗ್ಯಾಧಿಕಾರಿ ಡಾ.ರಾಜು ಶಿರೂರು, ಗಣ್ಯರಾದ ಫಕ್ಕೀರಗೌಡ ಪಾಟೀಲ, ಯಲ್ಲರಡ್ಡಿ ಮಧುಗುಣಿ, ಇಲಾಖೆಯ ಮಲ್ಲಿಕಾರ್ಜುನ ಕೆಂಚರಡ್ಡಿ, ಅಶೋಕ ಕೆಂಚರಡ್ಡಿ, ಇಕ್ಬಾಲಸಾಬ ರಾಣೇಬೆನ್ನೂರು, ಪೊಲೀಸ್ ಉಪ ಅಧೀಕ್ಷಕ ಡಾ.ಗೀರೀಶ್ ಬೋಜಣ್ಣನವರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್, ನಗರಸಭೆ ಪೌರಾಯುಕ್ತ ಫಕ್ಕೀರ​‍್ಪ ಇಂಗಳಗಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಗಣ್ಯರು, ಮುಖಂಡರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪಾರಿತೋಷಕ ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು.  

ಖನ್ನೂರು ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಗೀತೆ, ನಾಡಗೀತೆ ಹಾಗೂ ರೈತ ಗೀತೆ ಹಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಎಸ್ ಅಡಿಗ ಸ್ವಾಗತಿಸಿದರು. ಶಿಕ್ಷಕ ಎಂ.ಕೆ.ಸಾಲಿಮಠ ನಿರೂಪಿಸಿ, ಬಿ. ಆರ್‌. ಸಿ ಮಂಜು ನಾಯಕ ವಂದಿಸಿದರು.ಈ ನಿಮಿತ್ತ ಆಯೋಜಿಸಿದ್ದ ಹೆಚ್‌.ಎನ್ ದೊಡ್ಡಮನಿ ವಿಜಯಕುಮಾರ ಬಳಿಗಾರ ಸಾರಥ್ಯದ ಪಥಸಂಚಲನವು ಸಾರ್ವಜನಿಕರ ಗಮನ ಸೆಳೆಯಿತು. ನಂತರ ನಡೆದ ವಿವಿಧ ಶಾಲಾ ಕಾಲೇಜುಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳ ವೈವಿಧ್ಯಮಯ ಸಂಸ್ಕತಿ ಪ್ರತಿಬಿಂಬಿತ, ಭಾವೈಕ್ಯತೆಯ ಸಾಂಸ್ಕತಿಕ ನೃತ್ಯ ಕಲಾ ಪ್ರದರ್ಶನವು ಸರ್ವರ ಮೆಚ್ಚುಗೆಗೆ ಪಾತ್ರವಾಗಿತ್ತು.