ತಾಂಬಾ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡ 76ನೇ ಗಣರಾಜೋತ್ಸವದ ದಿನಾಚರಣೆ

76th Republic Day celebration held in Tamba Gram Panchayat

ತಾಂಬಾ ಗ್ರಾಮ ಪಂಚಾಯಿತಿಯಲ್ಲಿ  ಹಮ್ಮಿಕೊಂಡ 76ನೇ ಗಣರಾಜೋತ್ಸವದ ದಿನಾಚರಣೆ

ತಾಂಬಾ 26 : ಜಗತ್ತಿನಲ್ಲಿ ಭಾರತ ಅತೀ ದೊಡ್ಡ ಪ್ರಜಾಪ್ರಭುತ್ವರಾಷ್ಟ್ರವಾಗಿದೆ ಪ್ರಜೆಗಳು ಮತದಾನ ಮೂಲಕ ಆಡಳಿತದಲ್ಲಿ ಬದಲಾವಣೆ ತರುತ್ತಾರೆ ಈ ಸಂವಿದಾನದ ಅಡಿಯಲ್ಲಿ ಶಾಸಕಾಂಗ ಕಾರ್ಯಾಂಗ ಮತ್ತು ನ್ಯಾಯಾಂಗಗಳು ಕೆಲಸ ಮಡುತ್ತವೆ ಎಂದು  ಎಸ್‌.ಆರ್‌.ಮಾಳಗೆ ಪದವಿ ಕಾಲೇಜಿನ ಪ್ರಾಚಾರ್ಯ ಆರ್‌.ಎನ್‌.ಬೂಳೆಗಾವ ಹೇಳಿದರು. 

     ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ  ಹಮ್ಮಿಕೊಂಡ 76ನೇ ಗಣರಾಜ್ಯೋತ್ಸವದ ದಿನಾಚರಣೆಯಂದು ಮಾತನಾಡಿದ ಅವರು ಪ್ರಜೆಗಳು ದೇಶದ ಸಂವಿದಾನದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ದೇಶದ ಜನರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಕೆಲಸ ನಡೆಯುತ್ತಿದ್ದು ಮಕ್ಕಳಲ್ಲಿ ದೇಶ ಭಕ್ತಿಯನ್ನು ಬೆಳೆಸುವ ವಿಶೇಷ ಕಾರ್ಯಕ್ರಮಗಳನ್ನು ಸಂಘಟಿಸಬೇಕು ಎಂದರು. 

     ಗ್ರಾಪಂ ಅಧ್ಯಕ್ಷ ಆಸ್ಮಾ ರಜಾಕಸಾಬ ಚಿಕ್ಕಗಸಿ ಧ್ವಜಾರೋಹಣ ನೆರವೆರಿಸಿದರು. ಗ್ರಾಪಂ ಉಪಾಧ್ಯಕ್ಷ ರೇಖಾ ನಡಗಡ್ಡಿ, ಜಿ.ವೈ.ಗೋರನಾಳ, ಅಪ್ಪಣ್ಣ ಕಲ್ಲೂರ, ರಾಚಪ್ಪ ಗಳೇದ, ಮಾಸಿಮ್ ವಾಲಿಕಾರ, ಪರಸು ಬೀಸನಾಳ,ರಜಾಕ ಚಿಕ್ಕಗಸಿ, ಹೋನ್ನಪ್ಪ ಕಳ್ಳಿ, ನಾಗು ಜೋರಾಪೂರ, ಸಿದ್ದು ಹತ್ತಳಿ, ಎಮ್‌.ಎಮ್‌.ವಾಲಿಕಾರ ಮತ್ತಿತರರು ಉಪಸ್ಥಿತರಿಂದರು. 

ಶಾಂತೇಶ್ವರ ಬ್ಯಾಂಕ್‌: ಗ್ರಾಮದ ಶಾಂತೇಶ್ವರ ವಿವಿದೊದ್ದೇಶಗಳ ಸಹಕಾರಿ ಸಂಘದ ಆವರಣದಲ್ಲಿ ಹಮ್ಮಿಕೊಂಡ 76ನೇ ಗಣರಾಜೋತ್ಸವದ ಧ್ವಜಾರೋಹಣವನ್ನು ಸಂಘದ ನಿದೇರ್ಶಕರಾದ ಮಲಕಪ್ಪ ರೋಟ್ಟಿ ನೇರವೆರಿಸಿದರು. ಅಣ್ಣಪ್ಪ ಕಟ್ಟಿಮನಿ, ವ್ಯವಸ್ಥಾಪಕರಾದ ಬಿ.ಡಿ.ರೊಟ್ಟಿ, ರಾಜು ಹಿರೇಕುರಬರ, ಪೀರ​‍್ಪ ಬಸನಾಳ, ಸುರೇಶ ರೊಟ್ಟಿ, ಚಂದು ತಳವಾರ, ಡಿ.ಎಚ್‌.ಶಿವಣಗಿ, ಗವಿಸಿದ್ದ ಹಿರೇಕುರಬರ, ವಿರುಪಾಕ್ಷ ನಿಂಬಾಳ, ಬಸು ದಿವಟಗಿ, ಗಜಾನಂದ ಬರಮಣ್ಣ, ಸಿದ್ದಪ್ಪ ಸುಲೇಗಾಂವಿ, ಶಿಲ್ಪಾ ಪೂಜಾರಿ ಇದ್ದರು.ಶ್ರೀ ಶಿವಶರಣೆ ನಿಂಬೆಕ್ಕ ಪ್ರೌಢ ಶಾಲೆ: ಹೊನ್ನಳ್ಳಿ ಗ್ರಾಮದ ಶಿವಶರಣೆ ನಿಂಬೆಕ್ಕ ಪ್ರೌಢ ಶಾಲೆಯ ಆವರಣದಲ್ಲಿ ಹಮ್ಮಿಕೊಂಡ 76ನೇ ಗಣರಾಜೋತ್ಸವದ ಧ್ವಜಾರೋಹಣವನ್ನು ಭೀಮರಾಯ ತಳವಾರ ನೇರವೆರಿಸಿದರು. ಸಂಸ್ಥೆಯ ಅಧ್ಯಕ್ಷ ಎಸ್‌.ಡಿ.ಕುಮಾನಿ ಅಧ್ಯಕ್ಷತೆ ವಹಿಸಿದ್ದರು. ಅಶೋಕ ಹೊನ್ನಳ್ಳಿ, ಮಲ್ಲಿಕಾರ್ಜುನ ಮಾಲಗಾರ, ಗುರಣ್ಣ ವಾಢೆದ, ಮುಖ್ಯಗುರುಗಳಾದ ಎಸ್‌.ಎಮ್‌.ಮಣಿಯಾರ, ಎಚ್‌.ಪಿ.ದೇಶಪಾಂಡೆ, ಜಿ.ಕೆ.ಜಾಂಗಿರದಾರ, ಜೆ.ಎಮ್‌.ಹೊನ್ನಳ್ಳಿ, ಪಿ.ಎಸ್‌.ಕುಮಾನಿ, ವಿನೋದ ಕುಮಾನಿ ಮತ್ತಿತರರು ಇದ್ದರು. ನಂತರ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಡಿ.ದೇವರಾಜ ಅರಸು ಬಾಲಕರ ವಸತಿ ನಿಲಯ: ಗ್ರಾಮದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಾಟ್ರಿಕ ಪೂರ್ವ ಬಾಲಕರ ವಸತಿ ನಿಲಯದ ಆವರ್ಣದಲ್ಲಿ ಹಮ್ಮಿಕೊಂಡ 76ನೇ ಗಣರಾಜೋತ್ಸವದ ಧ್ವಜಾರೋಹಣವನ್ನು ನಿಲಯ ಪಾಲಕರಾದ ಉಸ್ಮಾನ ನಾಟಿಕಾರ ನೇರವೆರಿಸಿದರು. ಶರಣು ವಠಾರ, ಯಾಸೀನ ಅತ್ತಾರ, ಸಿದ್ದರಾಮ ಕೆಂಬಾವಿ, ಈಶ್ವರ​‍್ಪ ಕಂಬಾರ ಇದ್ದರು, ನಂತರ ಮಕ್ಕಳಿಗೆ ಸಿಹಿ ವಿತರಿಸಿದರು.