ಅವಳಿ ನಗರದ 15 ನೇ ವಾರ್ಡಿನ ಬಸವೇಶ್ವರನಗರದಲ್ಲಿ 76 ನೇ ಗಣರಾಜ್ಯೋತ್ಸವ ಆಚರಣೆ
ಗದಗ 26 : ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ 15 ನೇ ವಾರ್ಡಿನಲ್ಲಿರುವ ಬಸವೇಶ್ವರ ನಗರ ಬಡಾವಣೆಯಲ್ಲಿ ನಾಗರಿಕರಿಂದ 76:ನೇ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ದ್ವಜಾರೋಹಣ ನೆರವೇರಿಸಿ ಮಾತನಾಡಿದ ಬಡಾವಣೆಯ ಮುಖಂಡರಾದ ಶ್ರೀ ಗುರುಲಿಂಗಪ್ಪ ಕಾಡಪನವರರವರು ದೇಶದ ಸಮಸ್ತ ನಾಗರಿಕರಿಗೆ ಸಂವಿಧಾನವನ್ನು ದೊರಕಿಸಿ ಕೊಟ್ಟ ಅವಿಸ್ಮರಣೀಯ ದಿನವಾದ ಇಂದಿನ ದಿನವನ್ನು ಪ್ರತಿಯೊಬ್ಬ ನಾಗರಿಕರಿಗೆ ಶುಭ ದಿನವಾಗಿರುತ್ತದೆ. ಈ ಸಂಧರ್ಭದಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರರವರ ವಿರಚಿತ ಸಂವಿಧಾನವು ಪ್ರತಿಯೊಬ್ಬ ನಾಗರಿಕರು ಅದರ ಮಹತ್ವವನ್ನು ತಿಳಿಯುವುದು ಅವಶ್ಯಕವಾಗಿದೆ ಎಂದು ನುಡಿದರು. ಈ ಸಂಧರ್ಭದಲ್ಲಿ ಕಾಂಗ್ರೇಸ್ ಯುವ ಮುಖಂಡರಾದ ಮೋಹನ ದೊಡಕುಂಡಿ , ಬಿ ಡಿ ಕಿಲಬಣವರ್ , ಪಿ ಟಿ ನಾರಾಯಣಪುರ,,ರಾಜು ಬಳ್ಳಾರಿ,.ಅನವೀರ್ಪ ದೊಡಕುಂಡಿ, ರಾಚೋಟಿ ಕಾಡಪ್ಪನವರ, ದರ್ಶನ ಬೆಳಗಲ , ಅಶೋಕ ಬಂಡೆಪ್ಪನವರ, ಸಿದ್ದಲಿಂಗಪ್ಪ ಬಂಡೆಪ್ಪನವರ, ಮಹಿಳಾಕಾರ್ಯಕರ್ತರೂ ಕಾವ್ಯ ಲಾಡ್, ವಿಜಯಲಕ್ಷ್ಮಿ ತಳವಾರ, ವಿದ್ಯಾ ಗುಂಡಗಟ್ಟಿ, ಶಾಂತಲಾ ಜಂಗಮಣಿ , ಮೀನಾಕ್ಷಿ ಬಡಿಗೇರ,ಗೀತಾ ಯೆಚ್ಚಲಗಾರ , ಶ್ವೇತಾ ಕುಬಸದ , ಲಕ್ಷ್ಮಿ ದೊಡಕುಂಡಿ, ರೇಖಾ ಜಂಗಮನಿ ಹಾಗೂ ಸಮಸ್ತ ಬಸವೇಶ್ವರ ನಗರದ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.