ಜಿಲ್ಲಾ ಕ್ರೀಡಾಂಗಣದಲ್ಲಿ 73ನೇ ಸ್ವಾತಂತ್ರ್ಯೋತ್ಸವ: 23ತಂಡಗಳಿಂದ ಪಥಸಂಚಲನ

ಕೊಪ್ಪಳ 16: ಕೊಪ್ಪಳ ಜಿಲ್ಲಾಡಳಿತ ವತಿಯಿಂದ 73ನೇ ಸ್ವಾತಂತ್ರೋತ್ಸವದ ದಿನಾಚರಣೆ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಿಲ್ಲಾ ಸಶಸ್ತ್ರ ಮೀಸಲುಪಡೆ, ಸಿವಿಲ್ ಪೊಲೀಸ್, ಅರಣ್ಯ ಇಲಾಖೆ, ಗೃಹರಕ್ಷಕ ದಳ  ಹಾಗೂ ವಿವಿಧ ಶಾಲೆಗಳ ಎನ್.ಸಿ.ಸಿ, ಭಾರತ ಸೇವಾ ದಳ, ಸ್ಕೌಟ್ಸ್ & ಗೈಡ್ಸ್ ಸೇರಿ 23 ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.

ಸ್ವಾತಂತ್ರ್ಯ ದಿನಾಚರಣೆ ನಿಮಿತ್ಯ ಪಥಸಂಚಲನದಲ್ಲಿ ಭಾಗವಹಿಸಿದ ತಂಡಗಳು:

   ಕೊಪ್ಪಳ ಎ.ಆರ್.ಎಸ್.ಐ ಓಂಕಾರಪ್ಪ ನಾಯಕತ್ವದ ಜಿಲ್ಲಾ ಸಶಸ್ತ್ರ ಮೀಸಲುಪಡೆ ತಂಡ, ಎ.ಆರ್.ಎಸ್.ಐ ವೀರಣ್ಣ ಶಟ್ಟರ ನಾಯಕತ್ವದ ಸಿವಿಲ್ ಪೊಲೀಸ್, ನಾಗಪ್ಪ ಸಿದ್ದರ ನಾಯಕತ್ವದ ಅರಣ್ಯ ಇಲಾಖೆಯ ತಂಡ, ರುದ್ರಪ್ಪ ಪತ್ತಾರ ನಾಯಕತ್ವದ ಪುರುಷ ಗೃಹರಕ್ಷಕ ದಳ, ವಿಜಯಲಕ್ಷ್ಮೀ ರೇವಡಿ ನಾಯಕತ್ವದ ಮಹಿಳಾ ಗೃಹರಕ್ಷಕ ದಳ, ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನ (ಪ್ರೌಡಶಾಲೆ ವಿಭಾಗ) ಸೈಫ್ ನಾಯಕತ್ವದ ಎನ್.ಸಿ.ಸಿ, ಗವಿಸಿದ್ದೇಶ್ವರ ಪ್ರೌಢ ಶಾಲೆಯ ಅನುಪ್ ನಾಯಕತ್ವದ ಎನ್.ಸಿ.ಸಿ, ಬಾಲಕಿಯರ ಸಕರ್ಾರಿ ಪದವಿ ಪೂರ್ವ ಕಾಲೇಜಿನ (ಪ್ರೌಡಶಾಲೆ ವಿಭಾಗ) ಭೂಮೀಕಾ ನಾಯಕತ್ವದ ಭಾರತ ಸೇವಾ ದಳ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಂತೋಷ ನಾಯಕತ್ವದ ತಂಡ, ಎಸ್.ಎಫ್.ಎಸ್ ಶಾಲೆಯ ಶಿವಶರಣ ಕಂಬಳೆ ನಾಯಕತ್ವದ ಸ್ಕೌಟ್ಸ್ ಹಾಗೂ ಎ.ಎಂ. ಸುಪ್ರೀತ ನಾಯಕತ್ವದ ಗೈಡ್ಸ್, ಶಿವಶಾಂತವೀರ ಪಬ್ಲಿಕ್ ಶಾಲೆಯ ಎಸ್. ರಾಯ್ಕರ್ ನಾಯಕತ್ವದ ಸ್ಕೌಟ್ಸ್, ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲೆ ವಿಭಾಗ) ವಿಶ್ವನಾಥ ನಾಯಕತ್ವದ ಭಾರತ ಸೇವಾ ದಳ, ಮಾಸ್ತಿ ಪಬ್ಲಿಕ್ ಶಾಲೆಯ ಸಂಜನಾ ನಾಯಕತ್ವದ ಗೈಡ್ಸ್ ಹಾಗೂ ಸೋಮಶೇಖರ ನಾಯಕತ್ವದ ಸ್ಕೌಟ್ಸ್, ಸರಸ್ವತಿ ವಿದ್ಯಾಮಂದಿರ ಪ್ರೌಢ ಶಾಲೆಯ ಕಿರಣ ನಾಯಕತ್ವದ ಸ್ಕೌಟ್ಸ್, ಮಹಾವೀರ ಹಿರಿಯ ಪ್ರಾಥಮ ಶಾಲೆಯ ನಾಗರಾಜ ನಾಯಕತ್ವದ ಸ್ಕೌಟ್ಸ್, ಕಾಳಿದಾಸ ಪ್ರೌಢ ಶಾಲೆಯ ಜೆಡಿಸ್ವಾಮಿ ನಾಯಕತ್ವದ ಭಾರತ ಸೇವಾ ದಳ, ಟ್ರೀನಿಟಿ ಪ್ರೌಢ ಶಾಲೆಯ ಮಣಿಕಂಠ ನಾಯಕತ್ವದ ಸ್ಕೌಟ್ಸ್ ಹಾಗೂ ರಿಚ್ಚಲ ನಾಯಕತ್ವದ ಗೈಡ್ಸ್, ಸ. ಕೇಂದ್ರೀಯ ಹಿ.ಪ್ರಾ ಶಾಲೆಯ ಮೃತ್ಯಂಜಯ ನಾಯಕತ್ವದ ಭಾರತ ಸೇವಾ ದಳ, ಗವಿಸಿದ್ದೇಶ್ವರ ಪ್ರೌಢ ಶಾಲೆಯ ಕಿರಣ ನಾಯಕತ್ವದ ಭಾರತ ಸೇವಾ ದಳ ಹಾಗೂ ರಾಮನಗೌಡ ನಾಯಕತ್ವದ ಸ್ಕೌಟ್ಸ್ ಸೇರಿ ಒಟ್ಟು 23 ತಂಡಗಳು ಪಥಸಂಚಲನದಲ್ಲಿ ಭಾಗವಹಿಸಿ ಆಕರ್ಷಕ ಪರೆಡ್ ನಡೆಸಿಕೊಟ್ಟರು.