ಕಲ್ಮೇಶ್ವರ ದೇವಾಲಯಗಳ 70 ನೇ ವರ್ಷದ ಜಾತ್ರಾ ಮಹೋತ್ಸವ
ಬ್ಯಾಡಗಿ 07 : ಸಾಮೂಹಿಕ ವಿವಾಹ ಮಾಡಿಕೊಳ್ಳುವದರಿಂದ ಅನಗತ್ಯ ಸಾಲ ಮಾಡುವದು ತಪ್ಪುತ್ತದೆ ಎಂದು ಪಟ್ಟಣದ ಪಾಠಶಾಲೆಯ ಚನ್ನಬಸಯ್ಯ ಶಾಸ್ತ್ರೀಗಳು ಹೇಳಿದರು. ವೀರಭದ್ರೇಶ್ವರ ಹಾಗೂ ಕಲ್ಮೇಶ್ವರ ದೇವಾಲಯಗಳ 70 ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ 7 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಳೆದ 45 ವರ್ಷಗಳಿಂದ ಜಾತ್ರಾ ಸಮಿತಿಯವರು ಉಚಿತ ಸಾಮೂಹಿಕ ವಿವಾಹ ಏರಿ್ಡಸುತ್ತ ಬಂದಿದ್ದಾರೆ ಎಂದರು. ವೀರಯ್ಯ್ ಶಾಸ್ತ್ರೀಗಳು ಮಾತನಾಡಿ ದಂಪತಿಗಳಲ್ಲಿ ನಂಬಿಕೆ ವಿಶ್ವಾಸ ಹಾಗೂ ಪ್ರೀತಿ ಇದ್ದರೆ ಜೀವನ ಸುಖಮಯ ಆಗುತ್ತದೆ ಎಂದರು. ವರರು ವರದಕ್ಷಿಣೆ ಅಸೆ ಮಾಡದೇ ದುಡಿದು ಹಣ ಗಳಿಸಿ ಕುಟುಂಬದಲ್ಲಿ ಸಂತೋಷ ತರಬೇಕೆ ಹೊರತು ದುಷ್ಟ ಚಟಗಳಿಗೆ ಬಲಿಯಾಗಬಾರದು ಎಂದರು. ಜಾತ್ರಾ ಸಮಿತಿಯ ಅಧ್ಯಕ್ಷ ಮಲ್ಲಣ್ಣ ಹುಚಗೊಂಡರ. ಉಪಾಧ್ಯಕ್ಷ ಗಂಗಣ್ಣ ತಿಳವಳ್ಳಿ. ಗೌರವ ಕಾರ್ಯದರ್ಶಿ ಮಾಲತೇಶ ಅರಳಿಮಟ್ಟಿ. ಖಜಾಂಚಿ ಶೆಂಬಣ್ಣ ಅಂಗಡಿ. ಸದಸ್ಯರಾದ ಶಿವಣ್ಣ ಶೆಟ್ಟರ. ಶಿವಣ್ಣ ಬಣಕಾರ ಹಾಗೂ ಇತರರು ಉಪಸ್ಥಿತರಿದ್ದರು.