ಧಾರವಾಡ ಜಿಲ್ಲಾ ಕಛೇರಿಯಲ್ಲಿ 70ನೇ ಸಂಸ್ಥಾಪನಾ ದಿನದ ಕಾರ್ಯಕ್ರಮ

70th Foundation Day Program at Dharwad District Office

ಧಾರವಾಡ ಜಿಲ್ಲಾ ಕಛೇರಿಯಲ್ಲಿ  70ನೇ ಸಂಸ್ಥಾಪನಾ ದಿನದ ಕಾರ್ಯಕ್ರಮ  

ಧಾರವಾಡ 28: ಜಿಲ್ಲೆಯ ಸಂಘಟನೆ ಕಛೇರಿಯಲ್ಲಿ ಂಋಖಓ 70ನೇ ಸಂಸ್ಥಾಪನಾ ದಿನದ ಅಂಗವಾಗಿ ಧ್ಯೇಯೋದ್ದೇಶ  ಕುರಿತು ಚರ್ಚೆಯನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಭಾಷಣಕಾರರಾಗಿ  ರಾಜ್ಯ ಕಾರ್ಯದರ್ಶಿಗಳಾದ ಅಜಯ್ ಕಾಮತ್  ರವರು ಮಾತನಾಡುತ್ತಾ, "ಶಿಕ್ಷಣ-ಮಾನವತೆ-ಸಂಸ್ಕೃತಿ" ಉಳಿಸಲು ಹಾಗೂ ಸಾರ್ವಜನಿಕ ಶಿಕ್ಷಣ ಬಲಪಡಿಸಲು ಮಹಾನ್ ವಿಚಾರಧಾರೆಯ ಆಧಾರದ ಮೇಲೆ ತಳಮಟ್ಟದ ಹೋರಾಟ ಬೆಳೆಸಲು 70ನೇ ಂಋಖಓ ಸಂಸ್ಥಾಪನಾ ದಿನವನ್ನು ಯೋಗ್ಯ ರೀತಿಯಲ್ಲಿ ಆಚರಿಸಿ!" ಎಂದು ಕರೆ ನೀಡಿದರು. 

ಮುಂದುವರೆದು ಮಾತನಾಡುತ್ತ, ದೇಶದ ನವೋದಯ ಚಿಂತಕರು, ಮಹಾನ್ ಕ್ರಾಂತಿಕಾರಿಗಳ ಕನಸಿನ ಭಾರತ ನಿರ್ಮಿಸಲು, ಸ್ವಾತಂತ್ರ ಸಂಗ್ರಾಮದ ರಾಜಿರಹಿತ ಕ್ರಾಂತಿಕಾರಿ ಹೋರಾಟಗಾರರು ಮತ್ತು ನಮ್ಮ ನಾಯಕರು ಹಾಗೂ ಶಿಕ್ಷಕರಾದ ಕಾಮ್ರೇಡ್ ಶಿವದಾಸ್ ಘೋಷ್ ರವರ ಚಿಂತನೆಗಳ ಆಧಾರದ ಮೇಲೆ ಬಂಗಾಳದಾಲ್ಲಿ ಬಹುಪಾಲು ಪ್ರೌಢ ಶಾಲಾ ವಿದ್ಯಾರ್ಥಿಗಳು ಡಿಸೆಂಬರ್ 28, 1954 ನಮ್ಮ ಂಋಖಓ ಆರಂಭಿಸಿದರು. 

ಇಂದು, ದೇಶದಾದ್ಯಂತ 25ಕ್ಕೂ ಹೆಚ್ಚು ರಾಜ್ಯಗಳಲ್ಲಿ ಂಋಖಓ ಕಾರ್ಯನಿರ್ವಹಿಸುತ್ತಾ ದೇಶದ ಬಹು ದೊಡ್ಡ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆಯಾಗಿ ಹೊರಹೊಮ್ಮಿದೆ. ಇಂದು ವಿದ್ಯಾರ್ಥಿಗಳು ಎದುರಿಸುತ್ತಿರುವ ಎಲ್ಲಾ ಮೂಲಭೂತ ಸಮಸ್ಯೆಗಳ ವಿರುದ್ಧ ಹೋರಾಡಲು, ಮಹಾನ್ ವಿಚಾರಧಾರೆಯ ಆಧಾರದ ಮೇಲೆ ಶಿಕ್ಷಣ-ಮಾನವತೆ-ಸಂಸ್ಕೃತಿಯನ್ನು ಉಳಿಸುವ ಚಳುವಳಿಯನ್ನು ನಾವು ತಳ ಮಟ್ಟದಿಂದ ಆರಂಭಿಸಬೇಕಿದೆ. ದೇಶಾದ್ಯಂತ ಓಇಕ-2020 ಪ್ರತಿರೋಧಿಸಲು, ಸಾರ್ವಜನಿಕ ಶಿಕ್ಷಣ ಉಳಿಸಲು ನಾವೆಲ್ಲರೂ ಸಜ್ಜಾಗಬೇಕಿದೆ. ಈ ದೇಶದ ಪ್ರತಿಯೊಬ್ಬ ಮಗುವಿಗೂ, ಉನ್ನತ ಶಿಕ್ಷಣದವರೆಗೆ ಉಚಿತ ಶಿಕ್ಷಣ ದೊರಕಬೇಕೆಂದು ಹೋರಾಡಿದ ಭಗತ್ ಸಿಂಗ್, ಸುಭಾಸ್ ಚಂದ್ರ ಬೋಸ್ ರವರ ಕನಸು ಕನಸಾಗಿಯೇ ಉಳಿದಿದೆ.  

ಅವರು ತಮ್ಮ ಕನಸನ್ನು ನನಸು ಮಾಡುತ್ತಾರೆ ಎಂಬ ಭರವಸೆ ಇರಿಸಿದ್ದು ನಮ್ಮ ಮೇಲೆ! ಈ ನೆಲದ ವಿದ್ಯಾರ್ಥಿ ಸಮುದಾಯದ ಮೇಲೆ! ಆ ಭರವಸೆ ಈಡೇರಿಸುವ ಐತಿಹಾಸಿಕ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಈ ಜವಾಬ್ದಾರಿಯನ್ನು ಮತ್ತಷ್ಟು ತೀಕ್ಷ್ಣಗೊಳಿಸಲು ಈ ಸಂಸ್ಥಾಪನಾ ದಿನದಂದು ನಾವೆಲ್ಲರೂ ಪ್ರತಿಜ್ಞೆ ತೆಗೆದುಕೊಳ್ಳೋಣ! ಈ ಹಿನ್ನಲೆಯಲ್ಲಿ ಸಂಸ್ಥಾಪನಾ ದಿನದ ಸಂದೇಶವನ್ನು ನಿಮ್ಮ ಎಲ್ಲಾ ಸ್ನೇಹಿತರಿಗೆ, ಂಋಖಓ ಸಮಿತಿಗಳ ಎಲ್ಲಾ ಸದಸ್ಯರಿಗೆ ತಲುಪಿಸುವ ಜವಾಬ್ದಾರಿಯನ್ನು ನಿರ್ವಹಿಸೋಣ! ಬಲಿಷ್ಠ ಸಂಘಟನೆಯನ್ನು ಕಟ್ಟುವ ಕಾರ್ಯಕ್ಕೆ ಎಲ್ಲರೂ ಮುಂದಾಗೋಣ!"ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಂಋಖಓ ರಾಜ್ಯ ಸೆಕ್ರೆಟರಿಯಟ್ ಸದಸ್ಯರಾದ ವಿನಯ ಚಂದ್ರ ಜಿಲ್ಲಾ ಅಧ್ಯಕ್ಷರಾದ ಸಿಂಧು ಕೌದಿ,ಜಿಲ್ಲಾ ಕಾರ್ಯದರ್ಶಿಗಳಾದ ಶಶಿಕಲಾ ಮೇಟಿ, ಜಿಲ್ಲಾ ಕಾರ್ಯಕರ್ತರಾದ ಶಾಂತೇಶ್, ಸಿದ್ದು ಪ್ರೀತಮ್ ಹಾಗೂ ವಿದ್ಯಾರ್ಥಿಗಳು  ಈ ಸಂದರ್ಭದಲ್ಲಿ ಭಾಗವಹಿಸಿದ್ದರು.