6ನೇ ರಾಜ್ಯ ಮಟ್ಟದ ಸಿಟ್ಟಿಂಗ್ ವಾಲಿಬಾಲ್ ಪಂದ್ಯಾವಳಿ
ವಿಜಯಪುರ 01: ಜಿಲ್ಲೆಯ ಡಾ. ಬಿ.ಆರ್. ಅಂಬೇಡ್ಕರ್ ಒಳಾಂಗಣ ಕ್ರೀಡಾಂಗಣದಲ್ಲಿ ದಿ.29ರಂದು 6ನೇ ರಾಜ್ಯ ಮಟ್ಟದ ಸಿಟ್ಟಿಂಗ್ ವಾಲಿಬಾಲ್ ಪಂದ್ಯಾವಳಿಗಳು 2024 ಕರ್ನಾಟಕ ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಯೋಗದಲ್ಲಿ ನಡೆಸಲಾಗಿತ್ತು ಈ ಪಂದ್ಯಾವಳಿಗಳಿಗೆ ಕರ್ನಾಟಕ ರಾಜ್ಯದಿಂದ ಹಲವಾರು ಜಿಲ್ಲೆಗಳು ಭಾಗವಹಿಸಿದ್ದವು.
ಉದ್ಘಾಟನೆಯನ್ನು ಪ್ರಕಾಶ ರಜಪೂತ ವಿಶೇಷ ಜಿಲ್ಲಾಧಿಕಾರಿಗಳು ಕೆಬಿಜೆಎನ್‌ಎಲ್, ಮುಖ್ಯ ಅತಿಥಿಗಳಾಗಿ ಪ್ರೇಮಾನಂದ ಬಿರಾದಾರ ಮಹಾನಗರ ಪಾಲಿಕೆ ಸದಸ್ಯರು, ಅಧ್ಯಕ್ಷತೆಯನ್ನು ರಾಜಶೇಖರ ದೈವಾಡಿ, ಸಹಾಯಕ ನಿರ್ದೇಶಕರು ಕ್ರೀಡಾ ಇಲಾಖೆ ಇವರು ವಹಿಸಿದರು. ಮತ್ತು ವಿಶೇಷ ಅತಿಥಿಘಳಾಗಿ ರಾಘವೇಂದ್ರ ಎಸ್.ಜಿ ಪ್ರಧಾನ ಕಾರ್ಯದರ್ಶಿಗಳು (ಇನ್‌ಚಾರ್ಜ್), ಕರ್ನಾಟಕ ರಾಜ್ಯ ಕ್ರೀಡಾ ಸಂಸ್ಥೆಯ ವಿಜಯರಾವ ಸಿಂಧೆ, ಅಂತಾರಾಷ್ಟ್ರೀಯ ಸಿಟ್ಟಿಂಗ್ ವಾಲಿಬಾಲ್ ಕ್ರೀಡಾಪಟುಗಳು ಆಗಮಿಸಿದ್ದರು.
ಈ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಈ ಪಂದ್ಯಾವಳಿಗಳಲ್ಲಿ ಪುರುಷ ವಿಭಾಗದಲ್ಲಿ ಚಿನ್ನ ವಿಜಯಪುರ ಜಿಲ್ಲೆಗೆ ಬೆಳ್ಳಿ ಬಾಗಲಕೋಟೆ ಜಿಲ್ಲೆಗೆ ಹಾಗೂ ಕಂಚಿನ ಪದಕವು ಕಲಬುರ್ಗಿ ಜಿಲ್ಲೆಗೆ ಸಿಕ್ಕಿತು ಮತ್ತು ಮಹಿಳೆಯರ ವಿಭಾಗದಲ್ಲಿ ಚಿನ್ನ ಬಾಗಲಕೋಟೆ, ಬೆಳ್ಳಿ ವಿಜಯಪುರ ಜಿಲ್ಲೆಗೆ ಹಾಗೂ ಕಂಚಿನ ಪದಕ ಕಲಬುರ್ಗಿ ಜಿಲ್ಲೆಗೆ ದೊರಕಿತು.
ಕಾರ್ಯಕ್ರಮವನ್ನು ಮಹೇಶ ರಾಮನಾಥ ತೋಟದ, ರಾಜ್ಯ ಪ್ರಶಸ್ತಿ ಪುರಸ್ಕೃತರು ಮತ್ತು ರಾಷ್ಟ್ರೀಯ ವಿಶೇಷ ಚೇತನ ಕ್ರೀಡಾಪಟು, ರಾಜೇಶ ಪವಾರ, ರಾಷ್ಟ್ರೀಯ ವಿಶೇಷ ಚೇತನ ಕ್ರೀಡಾಪಟು ಹಾಗೂ ಸುನೀಲ್ ರಾಠೋಡ, ಅಂತಾರಾಷ್ಟ್ರೀಯ ಕ್ರೀಡಾಪಟುರವರು ಆಯೋಜನೆ ಮಾಡಿದರು ಹಾಗೂ ಮಲ್ಲಿಕಾರ್ಜುನ ಬಿರಾದಾರ ನಿರೂಪಿಸಿದರು.
ವಿಠ್ಠಲ ಕರಜಗಿ, ಬಂದೇನವಾಜ ಕಲ್ಲೂರ, ಪ್ರಕಾಶ ಬಿರಾದಾರ, ರವಿ ಚವ್ಹಾಣ, ಅರುಣ, ಪುಂಡಲೀಕ, ಜಾನಕಿ ಮತ್ತು ಎಲ್ಲಾ ಜಿಲ್ಲೆಯ ವಿಶೇಷ ಚೇತನ ಕ್ರೀಡಾಪಟು ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದರು.