ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ 69 ಪ್ರಕರಣಗಳು ಇತ್ಯರ್ಥ: ಒಂದಾದ ಜೋಡಿ

69 cases settled in National Lok Adalat: A couple united

ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ 69 ಪ್ರಕರಣಗಳು ಇತ್ಯರ್ಥ: ಒಂದಾದ ಜೋಡಿ

ಹೂವಿನಹಡಗಲಿ 09:  ಪಟ್ಟಣದ ಜೆ.ಎಂ.ಎಫ್‌.ಸಿ.ನ್ಯಾಯಾಲಯದಲ್ಲಿ ಜೀವನಾಂಶ ಪರಿಹಾರ ಕೋರಿ ಅರ್ಜಿ ಸಲ್ಲಿಸಿ, ಪರಸ್ಪರ ದೂರವಾಗಿದ್ದ ಎರಡು ಜೋಡಿ ದಂಪತಿಯನ್ನು ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಮತ್ತೆ ಒಗ್ಗೂಡಿಸಲಾಯಿತು. 

ತಾಲ್ಲೂಕಿನ ಬಸರಕೋಡು ತಾಂಡಾದ ಸುಜಾತ ತನ್ನ ಪತಿ ಹರಪನಹಳ್ಳಿ ತಾಲ್ಲೂಕಿನ ನಾಗರಾಜ ನಾಯ್ಕ ವಿರುದ್ಧ ಹಾಗೂ ಹೂವಿನ ಹಡಗಲಿಯ ಶೈನಾಜ್ ಬೇಗಂ ತನ್ನ ಪತಿ ಮುಬಾರಜ್ ವಿರುದ್ಧ ಜೀವನಾಂಶಪರಿಹಾರ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.ಲೋಕ ಅದಾಲತ್ ನ್ಯಾಯಪೀಠದಲ್ಲಿದ್ದ ನ್ಯಾಯಾಧೀಶೆ ಟಿ.ಅಕ್ಷತಾ ಅವರು ಎರಡೂ ದಂಪತಿಗೆ ತಿಳಿವಳಿಕೆ ಮೂಡಿಸಿ, ಒಟ್ಟಿಗೆ ಬಾಳುವಂತೆ ಬುದ್ದಿವಾದ ಹೇಳಿದರು.  

ಇದಕ್ಕೆ ದಂಪತಿ ಸಮ್ಮತಿಸಿದಾಗ ನ್ಯಾಯಾಧೀಶರು, ವಕೀಲರು ಶುಭ ಹಾರೈಸಿದರು.ಈ ವೇಳೆ ವಕೀಲರಾದ ಶಿವಲಿಂಗಪ್ಪ ಸೂರಣಗಿ, ಶಿವಕುಮಾರ ಪತ್ರಿಮಠದ, ರಾಜಭಕ್ಷಿ, ಕಲಾರಿ ಸೈಫುಲ್ಲಾ, ಎಂ.ಎನ್‌. ಮಂಜುನಾಥ, ಎಚ್‌.ರುದ್ರ​‍್ಪ, ವರ್ಷಾ ಇದ್ದರು. ರಾಜಿ ಸಂಧಾನಕ್ಕೆ ಗುರುತಿಸಿದ್ದ 707 ವ್ಯಾಜ್ಯಗಳ ಪೈಕಿ 697 ಪ್ರಕರಣಗಳು ಇತ್ಯರ್ಥಗೊಂಡವು. 1.15 ಕೋಟ ಪರಿಹಾರ ಮೊತ್ತದ ಪ್ರಕರಣಗಳು ರಾಜಿಯಲ್ಲಿ ಮುಕ್ತಾಯಗೊಂಡವು