ಅಂಬೇಡ್ಕರ ವೃತ್ತದಲ್ಲಿ 68 ನೇಯ ಮಹಾಪರಿನಿರ್ವಾಣ ದಿನದ ಕಾರ್ಯಕ್ರಮ
ಜಮಖಂಡಿ 07:ಸಂವಿಧಾನ ಶಿಲ್ಪಿ ಡಾ,ಬಿ,ಆರ್,ಅಂಬೇಡ್ಕರ ಆಶಯದಂತೆ ನಡೆದುಕೊಳ್ಳಬೇಕು, ಜೀವನ ಸುಗಮವಾಗಲು, ವಿದ್ಯೆ ಅವಶ್ಯವಾಗಿಬೇಕು, ವಿದ್ಯಾವಂತರಾಗಿ ಸಮಾಜದಲ್ಲಿ ಉತ್ತಮ ಪ್ರಜೆಗಳೆನಿಸಬೇಕು ಎಂದುತಹಸೀಲ್ದಾರ ಹೇಳಿದರು.
ನಗರದ ಅಂಬೇಡ್ಕರ ವೃತ್ತದಲ್ಲಿ ನಡೆದ ತಾಲೂಕಾಡಳಿತ ಸಹಯೋಗದಲ್ಲಿ 68 ನೇಯ ಮಹಾಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಪುತ್ಥಳಿಗೆ ಮಾಲಾರೆ್ಣ ನೇರವೆರಿಸಿ ಮಾತನಾಡಿದರು. ಮಹಾ ಮಾನವತಾವಾದಿ ಡಾ,ಅಂಬೇಡ್ಕರವರು ನೀಡಿದ ಸಂವಿಧಾನ ಅದರ ಆಶಯಕ್ಕೆ ತಕ್ಕಂತೆ ನಡೆದುಕೊಳ್ಳಬೇಕು, ಸಂವಿಧಾನದಲ್ಲಿ ನೀಡಿದ ಹಕ್ಕು ಮತ್ತು ಕರ್ತವ್ಯಗಳನ್ನುತಿಳಿದುಕೊಂಡು ಸಮಾಜದ ಹಿತಕ್ಕಾಗಿ ಶ್ರಮಿಸಬೇಕು, ಸಾಧ್ಯವಾದಷ್ಟು ಸಮಾಜಕ್ಕೆ ಒಳಿತು ಮಾಡಬೇಕು ಎಂದರು.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ರುದ್ರಾವಧೂತ ಮಠದ ಕೃಷ್ಣಾನಂದಅವಧೂತ ಸ್ವಾಮಿಗಳು ಮಾತನಾಡಿ, ಕೇವಲ ಪೂಜೆ ಮಾಡಿ ದಿನಾಚರಣೆ ಆಚರಿಸಿ ಹೋಗುವ ಸಂಪ್ರದಾಯವಾಗಬಾರದು ಡಾ,ಅಂಬೇಡ್ಕರ ಅವರು ತಮ್ಮ ಜೀವನದಲ್ಲಿ ಮಾಡಿದ ತ್ಯಾಗ, ಬಲಿದಾನ, ಅವರು ವಹಿಸಿದ ಶ್ರಮ, ಪಟ್ಟಕಷ್ಟದ ಬಗ್ಗೆ ತಿಳಿದುಕೊಂಡು ಜೀವನ ನಡೆಸಬೇಕು.ಡಾ,ಅಂಬೇಡ್ಕರರು ಕಷ್ಟದ ಜೀವನ ನಡೆಸಿದ್ದಾರೆ ಅವರ ಜೀವನ ನಮಗೆ ಮಾರ್ಗದರ್ಶಕ ಅವರ ಸಾಧನೆ, ಅವರು ತೋರಿಸಿದ ಮಾರ್ಗದಲ್ಲಿ ನಡೆಯುವ ಪ್ರಯತ್ನವಾಗಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ ಮಾತನಾಡಿ, ದೇಶದ 140 ಕೋಟಿ ಜನರು ಸಂವಿಧಾನದ ಅಡಿಯಲ್ಲಿ ಜೀವನ ನಡೆಸುತ್ತಿದ್ದೇವೆ ಪ್ರತಿಯೊಬ್ಬರು ಸಂವಿಧಾನದ ಬಗ್ಗೆ ಜ್ಞಾನ ಪಡೆಯಬೇಕು ಡಾ,ಅಂಬೇಡ್ಕರ ಅವರ ಜೀವನದ ಬಗ್ಗೆ ತಿಳಿದುಕೋಳ್ಳಬೇಕು ಎಂದರು.
ಮಾಜಿ ಶಾಸಕ ಆನಂದ ನ್ಯಾಮಗೌಡ, ನಗರಸಭೆ ಅಧ್ಯಕ್ಷ ಪರಮಾನಂದ ಗೌರೋಜಿ, ಮಾಜಿ ನಗರಸಭೆ ಅಧ್ಯಕ್ಷ ಸಿದ್ದು ಮೀಶಿ, ಪೌರಾಯುಕ್ತ ಜೋತಿ ಗೀರೀಶ, ದಲಿತ ಮುಖಂಡ ಶಾಮರಾವ ಘಾಟಗೆ, ಮಾಜಿ ನಗರಸಭೆ ಅಧ್ಯಕ್ಷ ದಾನೇಶ ಘಾಟಗೆ, ಅಬಕಾರಿ ಇಲಾಖೆಯ ಅಧಿಕಾರಿ ಆದಿನಾಥ ನರಸಗೊಂಡ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅರ್ಚನಾ, ಎಪಿಎಂಸಿ ಅಧಿಕಾರಿ ಅಬೀದಾಬೇಗಂ ಮುಲ್ಲಾ, ಪೋಲಿಸ ಅಧಿಕಾರಿಗಳು ಸೇರಿದಂತೆ ತಾಲ್ಲೂಕ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಡಾ, ಅಂಬೇಡ್ಕರ ಅವರ ಪುತ್ಥಳಿಗೆ ಮಾರೆ್ಣ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.