6 ದಿನಗಳ ಕಾಲ ನಡೆದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನಕ್ಕೆ ತೆರೆ
6-day Plantation and Horticulture Campaign kicks off
6 ದಿನಗಳ ಕಾಲ ನಡೆದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನಕ್ಕೆ ತೆರೆ
ಕೊಪ್ಪಳ 21: ತೋಟಗಾರಿಕೆ ಇಲಾಖೆಯಿಂದ ಆ.15 ರಿಂದ 20ರ ವರೆಗೆ ಹಮ್ಮಿಕೊಂಡಿದ್ದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ-2025 ಕ್ಕೆ ಬುಧವಾರದಂದು ತೆರೆ ದೊರೆತಿದ್ದು, 45 ಲಕ್ಷಕ್ಕೂ ಹೆಚ್ಚಿನ ಸಸಿಗಳ ಹಾಗೂ ವಿವಿಧ ಪರಿಕರಗಳ ಬೇಡಿಕೆಯ ವಹಿವಾಟು ಆಗಿದೆ.
ಕೊಪ್ಪಳ ನಗರದ ಕೊಪ್ಪಳ ತೋಟಗಾರಿಕೆ ಉಪ ನಿರ್ದೇಶಕರ ಕಛೇರಿ ಆವರಣದಲ್ಲಿ 6 ದಿನಗಳ ಕಾಲ ನಡೆದ 9ನೇ ವರ್ಷದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನದಲ್ಲಿ 25 ಲಕ್ಷಕ್ಕೂ ಹೆಚ್ಚಿನ ಮೊತ್ತದ ಸ್ವದೇಶಿ ಮತ್ತು ವಿದೇಶ ಸಸಿಗಳ ಖರೀದಿಗೆ ರೈತರು ಮುಂಗಡವಾಗಿ ನೊಂದಾಯಿಸಿರುತ್ತಾರೆ ಹಾಗೂ 2000 ಎಕರೆಗೂ ಹೆಚ್ಚಿನ ತೋಟಗಾರಿಕೆ ಪ್ರದೇಶ ವಿಸ್ತರಣೆಗೆ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ರೈತರು ಮಾವು, ಮೋಸಂಬಿ, ನೇರಳೆ, ಸೇಬು, ನಿಂಬೆ, ಹಲಸು ಹಾಗೂ ವಿದೇಶಿ ಸಸಿಗಳ ಹಾಗೂ ಸಾಂಬಾರ ಪದಾರ್ಥ ಬೆಳೆಯಲು ಮುಂಗಡವಾಗಿ ಸಸಿಗಳನ್ನು ಖರೀದಿಸಲು ನೊಂದಾಯಿಸಿರುತ್ತಾರೆ. ಇದರಿಂದ ತೋಟಗಾರಿಕೆ ಪ್ರದೇಶ ವಿಸ್ತರಣೆಗೆ ಅನುಕೂಲವಾಗಲಿದೆ. ಮಾವು, ಪೇರಲ, ತೆಂಗು, ನುಗ್ಗೆ ಹಾಗೂ ತೋಟಗಾರಿಕೆ ಕ್ಷೇತ್ರದಲ್ಲಿ ಉತ್ಪಾದಿಸಿದ ತರಕಾರಿ ಸಸಿಗಳು, ಹೂವಿನ ಅಲಂಕಾರಿಕ ಸಸಿಗಳು, ಎರೆಹುಳು ಗೊಬ್ಬರ, ಬೇವಿನ ಹಿಂಡಿ, ಎರೆಜಲ ಹಾಗೂ ವಿವಿಧ ಪರಿಕರಗಳನ್ನು ಖರೀದಿಸಲು ರೈತರು ಹಾಗೂ ಸಾರ್ವಜನಿಕರು ಬೇಡಿಕೆಯನ್ನು ಸಲ್ಲಿಸಿದಗದು, 45 ಲಕ್ಷಕ್ಕೂ ಹೆಚ್ಚಿನ ಸಸಿಗಳ ಹಾಗೂ ವಿವಿಧ ಪರಿಕರಗಳ ಬೇಡಿಕೆಯ ವಹಿವಾಟು ಮಾಡುವ ಮೂಲಕ ಸಸ್ಯಸಂತೆಯು ಯಶಸ್ವಿಯಾಗಿ ತೆರೆಕಂಡಿತು.
ಈ ಸಸ್ಯ ಸಂತೆಯಲ್ಲಿ ವಿದೇಶಿ ಸಸಿಗಳಲ್ಲಿ ಮುಖ್ಯವಾಗಿ ಮಿಯಾಜಾಕಿ ಮಾವಿನ ಸಸಿಗೆ ಸಾಕಷ್ಟು ಬೇಡಿಕೆ ಬಂದು ಜನರು ತಮ್ಮ ತೋಟದಲ್ಲಿ ಹಾಗೂ ಮನೆಯ ಹತ್ತಿರ ಬೆಳೆಯಲು 4 ಸಾವಿರಕ್ಕೂ ಹೆಚ್ಚಿನ ಗಿಡಗಳನ್ನು ಖರೀದಿಸಲು ತಮ್ಮ ಹೆಸರು ನೊಂದಾಯಿಸಿದರು ಹಾಗೂ 2 ಸಾವಿರಕ್ಕೂ ಹೆಚ್ಚಿನ ಅವಕಾಡೋ ಹಣ್ಣಿನ ಗಿಡಗಳನ್ನು ಖರೀದಿಸಲು ಸಹ ಹೆಸರು ನೊಂದಾಯಿಸಿದರು. ಮೆಕಡೋಮಿಯಾ, ಮ್ಯಾಂಗೋಸ್ಟಿನ್, ಲಿಚ್ಚಿ, ವಿದೇಶಿ ಹಲಸು, ಚರ್ರಿ ಮುಂತಾದ ವಿದೇಶಿ ಹಣ್ಣಿನ ತಳಿಗಳ ಸಸಿಗಳು ಸೇರಿ 5 ಸಾವಿರಕ್ಕೂ ಹೆಚ್ಚಿನ ವಿದೇಶಿ ಹಣ್ಣಿನ ಸಸಿಗಳನ್ನು ತಮ್ಮತೋಟ ಮನೆಯ ಮುಂದೆ ನಾಟಿ ಮಾಡಲುರೈತರು ಹಾಗೂ ಸಾರ್ವಜನಿಕರು ಸಸಿಗಳನ್ನು ಖರೀದಿಸಲು ನೊಂದಾಯಿಸಿರುತ್ತಾರೆ.
ರೈತರಿಗಾಗಿಗಿಣಗೇರಾ ಮಣ್ಣು, ನೀರು ಮತ್ತು ಎಲೆ ವಿಶ್ಲೇಷಣಾ ಪ್ರಯೋಗಾಲಯದ ವತಿಯಿಂದರೈತರಿಗೆ ಮಣ್ಣು ಮತ್ತು ನೀರು ಪರೀಕ್ಷೆ ಕುರಿತು ಮಾಹಿತಿ ನೀಡಲಾಯಿತು. ಫ್ಲೋರೆಜನ್ ಆರ್ಗ್ಯಾನಿಕ್ಸ್‌ರವರಿಂದ ಹಲಸು ಬೆಳೆಯ ಬಗ್ಗೆ 2500 ರೈತರಿಗೆ ಸಾವಯವ ಕೃಷಿಯಲ್ಲಿ ಪದ್ಧತಿ ಮತ್ತು ದೃಢೀಕರಣ ಪಡೆಯುವ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಬನ್ ಕ್ರೆಡಿಟ್ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು. ಹನಿ ನೀರಾವರಿ ಕಂಪನಿಗಳಾದ ಬಿ.ಎನ್.ಎಸ್. ಇರಿಗೇಷನ್, ಬಿ.ಕೆ. ಇರಿಗೇಷನ್ ರವರು ಹನಿ ನೀರಾವರಿ ಅಳವಡಿಸಲು ಒಟ್ಟು ಒಂದು ಸಾವಿರ ರೈತರಿಗೆ ಮನವರಿಕೆ ಮಾಡಿ ರೈತರಿಂದ ಅರ್ಜಿಗಳನ್ನು ಪಡೆದರು. ಹೊಸದಾಗಿ ತೋಟಗಾರಿಕೆ ಮಾಡುವ 5 ಸಾವಿರಕ್ಕೂ ಹೆಚ್ಚಿನ ರೈತರಿಗೆ ಇಲಾಖೆಯ ಅಧಿಕಾರಿಗಳು ಯೋಜನೆಗಳ ಕುರಿತು ಹಾಗೂ ತಾಂತ್ರಿಕ ಮಾಹಿತಿಯನ್ನು ನೀಡಿದರು.
ಇಲಾಖೆಯ ಯೋಜನೆಗಳು ಹಾಗೂ ವಿವಿಧ ವಿದೇಶಿ ಹಣ್ಣಿನ ಬೆಳೆಗಳ ಬೇಸಾಯ ಕ್ರಮಗಳ ತಾಂತ್ರಿಕ ಮಾಹಿತಿ ಬಗ್ಗೆ ಅಲ್ಲದೇ ರೈತರು ನಿರಂತರವಾಗಿ ಕೃಷಿಯಲ್ಲಿ ಆದಾಯ ಪಡೆಯುವುದರ ಬಗ್ಗೆ ಮತ್ತು ಆದಾಯವನ್ನು ದ್ವಿಗುಣಗೊಳಿಸುವ ಬಗ್ಗೆ 100 ಕ್ಕೂ ಹೆಚ್ಚಿನ ಪ್ಲೇಕ್ಸ್ ಗಳನ್ನು ಅಳವಡಿಸಿ ರೈತರಿಗೆ ಮಾಹಿತಿ ನೀಡಲಾಯಿತು.
ಒಟ್ಟಾರೆ 6 ದಿನಗಳ ಕಾಲ ನಡೆದ ಸಸ್ಯ ಸಂತೆ ಮತ್ತು ತೋಟಗಾರಿಕೆ ಅಭಿಯಾನದಲ್ಲಿ ಅಂದಾಜು 10,000ಕ್ಕೂ ಹೆಚ್ಚಿನ ಸ್ಥಳೀಯ ಹಾಗೂ ಹೊರ ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿ ಮಾಹಿತಿಯನ್ನು ಪಡೆದುಕೊಂಡಿರುತ್ತಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 