ಧಾರವಾಡ 26; ಬರುವ ಜನವರಿ 4,5 ಹಾಗೂ 6 ರಂದು ಜರುಗುವ ಅಖಿಲ ಭಾರತ 84 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಾಡಿನ ಮೂಲೆ ಮೂಲೆಗಳಿಂದ ಸಾವಿರಾರು ಜನ ಆಗಮಿಸುವ ನಿರೀಕ್ಷೆ ಇದೆ. ಪ್ರತಿಯೊಬ್ಬರಿಗೂ ಶುಚಿ-ರುಚಿಯಾದ ಊಟ, ಉಪಹಾರದ ವ್ಯವಸ್ಥೆ ಮಾಡಲಾಗುತ್ತಿದೆ. ಆಹಾರ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ. ಇದಕ್ಕಾಗಿ 6 ಜನ ಆಹಾರ ಸುರಕ್ಷತಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಸಮ್ಮೇಳನದ ಆಹಾರ ಸಮಿತಿ ಅಧ್ಯಕ್ಷರಾಗಿರುವ,ಶಾಸಕ ಅರವಿಂದ ಬೆಲ್ಲದ ಹೇಳಿದರು.
ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿಂದು ಭೋಜನಾಂಗಣದ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಆಹಾರ ಸಮಿತಿಯ ಕಾರ್ಯಚಟುವಟಿಕೆಗಳ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಉತ್ತರ ಕನರ್ಾಟಕದ ಹೆಮ್ಮೆಯ ಸಾಂಸ್ಕೃತಿಕ ನಗರಿ ಧಾರವಾಡದಲ್ಲಿ ಸಮ್ಮೇಳನ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಪ್ರತಿಯೊಂದು ಸಮಿತಿಗಳ ಕಾರ್ಯಗಳೂ ಸಮ್ಮೇಳನದ ಯಶಸ್ಸಿಗೆ ಮುಖ್ಯವಾಗುತ್ತವೆ. ಆಹಾರ ವ್ಯವಸ್ಥೆ ಅದರಲ್ಲಿ ಪ್ರಾಮುಖ್ಯವಾಗಿದೆ. ಆಗಮಿಸುವ ಜನರು, ಸಾಹಿತ್ಯಾಸಕ್ತರು, ಸಾರ್ವಜನಿಕರ ಸಂಖ್ಯೆ ಗಮನದಲ್ಲಿಟ್ಟುಕೊಂಡು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಒಟ್ಟು ನಾಲ್ಕು ಸ್ಥಳಗಳಲ್ಲಿ ಅಡಿಗೆ ಮನೆಗಳು ಮತ್ತು ಭೋಜನಾಂಗಣಗಳನ್ನು ನಿಮರ್ಿಸಲಾಗುತ್ತಿದೆ. ಉತ್ತರ ಕನರ್ಾಟಕದ ದಾಸೋಹ ಪರಂಪರೆ ಬಿಂಬಿಸುವ ಮುರುಘಾಮಠ, ಸಿದ್ಧಾರೂಢರು ಹಾಗೂ ತಪೋವನದ ಪೂಜ್ಯರ ಹೆಸರಿನಲ್ಲಿ ಇವುಗಳು ಕಾರ್ಯನಿರ್ವಹಿಸಲಿವೆ. ಸಮ್ಮೇಳನದ ಮುನ್ನಾದಿನವಾದ ಜನವರಿ 3 ರ ರಾತ್ರಿಯಿಂದ ಊಟೋಪಚಾರದ ವ್ಯವಸ್ಥೆ ಆರಂಭವಾಗಲಿದೆ.
ಜನವರಿ 4ರಂದು ಬೆಳಿಗ್ಗೆ ಉಪಹಾರಕ್ಕಾಗಿ ಸಮ್ಮೇಳನದ ಆವರಣದಲ್ಲಿ 10 ಸಾವಿರ ಜನರಿಗೆ ಹಾಗೂ ಮೆರವಣಿಗೆ ಆರಂಭದ ಸ್ಥಳದಲ್ಲಿ 10 ಸಾವಿರ ಜನರಿಗೆ ಶಿರಾ ಅಥವಾ ರವಾ ಉಂಡಿ, ಉಪ್ಪಿಟ್ಟು, ಚಹಾದ ವ್ಯವಸ್ಥೆ ಏರ್ಪಡಿಸಲಾಗಿದೆ. ಅಂದು ಮಧ್ಯಾಹ್ನ ಸುಮಾರು 50 ಸಾವಿರಕ್ಕೂ ಅಧಿಕ ಜನರಿಗೆ ಗೋಧಿ ಹುಗ್ಗಿ, ಚಪಾತಿ, ಕಟಕ ರೊಟ್ಟಿ, ಬದನೆ ಕಾಯಿ, ಮಡಕಿ ಕಾಳಿನ ಪಲ್ಯ, ಅನ್ನ, ಸಾಂಬಾರು ಸಿದ್ಧಪಡಿಸಲಾಗುವದು. ರಾತ್ರಿ ಊಟಕ್ಕೆ 20 ಸಾವಿರ ಜನರಿಗೆ ಶ್ಯಾವಿಗೆ ಪಾಯಸ, ಬಿಸಿಬೇಳೆ ಬಾತ್, ಅನ್ನ ಮತ್ತು ರಸಂ ತಯಾರಿಸಲಾಗುವದು.
ಜನವರಿ 5 ರಂದು ಬೆಳಿಗ್ಗೆ ಮೈಸೂರು ಪಾಕ್ ಅಥವಾ ಧಾರವಾಡ ಪೇಡಾ, ಚುರಮುರಿ ಸೂಸಲ, ಮಿಚರ್ಿ ಮತ್ತು ಚಹ, ಮಧ್ಯಾಹ್ನ ಊಟಕ್ಕೆ ಶೇಂಗಾ ಹೋಳಿಗೆ, ಚಪಾತಿ ಅಥವಾ ಪೂರಿ, ವಟಾಣಿ ಪಲ್ಯ, ರೊಟ್ಟಿ, ಅನ್ನ, ನುಗ್ಗೆಕಾಯಿ ಸಾರು, ರಾತ್ರಿ ಊಟಕ್ಕೆ ಕಚರ್ಿ ಹಲ್ವಾ, ಪುಳಿಯೋಗರೆ ಅಥವಾ ವೆಜಿಟೇಬಲ್ ದಮ್ ಬಿರ್ಯಾನಿ, ಅನ್ನ, ಸಾಂಬಾರ ಮಾಡಲು ಉದ್ದೇಶಿಸಲಾಗಿದೆ.
ಸಮ್ಮೇಳನದ ಕೊನೆಯ ದಿನವಾದ ಜನವರಿ 6 ರಂದು ಬೆಳಿಗ್ಗೆ ಉಪಹಾರಕ್ಕೆ ಜಿಲೇಬಿ ಅಥವಾ ಹೆಸರುಬೇಳೆ ಹಲ್ವಾ, ಅವಲಕ್ಕಿ ಅಥವಾ ವಾಂಗೀಬಾತ್, ಚಹಾ , ಮಧ್ಯಾಹ್ನ ಊಟಕ್ಕೆ ಮಾದಲಿ, ಡೊಣ್ಣಗಾಯಿ ಪಲ್ಯ, ಚಪಾತಿ, ಪಾಲಕ ಪೂರಿ, ರೊಟ್ಟಿ, ಚಿತ್ರಾನ್ನ, ತಿಳಿಸಾರು, ರಾತ್ರಿ ಊಟಕ್ಕೆ ಹೆಸರು ಬೇಳೆ ಪಾಯಸ, ಪಲಾವ್, ಅನ್ನ, ರಸಂ ಮತ್ತಿತರ ಭಕ್ಷ್ಯಗಳನ್ನು ಸಿದ್ಧಪಡಿಸಲು ನಿರ್ಧರಿಸಲಾಗಿದೆ.
ಹಳೆಯ ಮೈಸೂರು ಭಾಗದ ಜನರ ಸಾಂಪ್ರದಾಯಿಕ ಆಹಾರವಾಗಿರುವ ಮುದ್ದೆ, ಸೊಪ್ಪಿನ ಸಾರನ್ನೂ ಕೂಡ ಒಂದು ಬಾರಿ ಕೊಡಲು ಉದ್ದೇಶ ಹೊಂದಲಾಗಿದೆ ಎಂದು ಶಾಸಕ ಅರವಿಮದ ಬೆಲ್ಲದ ಹೇಳಿದರು.
ಈ ಭೋಜನಾಂಗಣಗಳಲ್ಲದೇ ರೈತರ ಜ್ಞಾನಾಭಿವೃದ್ಧಿ ಕೇಂದ್ರದ ಸಭಾಂಗಣದಲ್ಲಿನಲ್ಲಿ ಆಮಂತ್ರಿತ ಸಾಹಿತಿಗಳು ಹಾಗೂ ಕಸಾಪ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರಿಗೆ ಸೇರಿ ಪ್ರತಿದಿನ 2 ಸಾವಿರ ಜನರಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. 500 ಜನ ಮಾಧ್ಯಮ ಪ್ರತಿನಿಧಿಗಳಿಗೆ ಮುಖ್ಯ ವೇದಿಕೆ ಬಳಿಯ ಮಾಧ್ಯಮ ಕೇಂದ್ರದಲ್ಲಿ ಊಟೋಪಚಾರ ಹಾಗೂ 300 ಜನ ಗಣ್ಯಾತಿಗಣ್ಯರಿಗೆ ಕೃಷಿ ವಿವಿಯ ಅತಿಥಿಗೃಹದಲ್ಲಿ ಭೋಜನ, ಉಪಹಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಒಟ್ಟು 120 ಕೌಂಟರುಗಳಲ್ಲಿ ಊಟದ ವಿತರಣೆ ನಡೆಯುತ್ತದೆ. ಪ್ರತಿ ಕೌಂಟರಿನಲ್ಲಿ 500 ಜನ ಊಟ ಪಡೆಯಬಹುದು. ಮಲಪ್ರಭಾ ನದಿಯ ಶುದ್ಧೀಕರಿಸಿದ ನೀರನ್ನು ಕುಡಿಯಲು ಪೂರಯಸಲಾಗುವುದು. ಇದಕ್ಕಾಗಿ 600 ನಳಗಳನ್ನು ನಿಮರ್ಿಸಲಾಗುತ್ತಿದೆ. ಈ ಸೌಕರ್ಯಗಳು ಶಾಶ್ವತವಾಗಿ ಉಳಿಯಲಿವೆ. ಪ್ರತಿ ವರ್ಷ ಕೃಷಿ ಮೇಳದ ಸಂದರ್ಭದಲ್ಲಿ ಉಪಯೋಗಿಸಲು ಬರುತ್ತವೆ. ಸಾಧ್ಯವಾದಷ್ಟು ಕಡಿಮೆ ಪ್ಲಾಸ್ಟಿಕ್ ಬಳಸಿ ಮಾದರಿಯಾಗುವಂತೆ ಸಮ್ಮೇಳನ ಆಯೋಜಿಸಲಾಗುವುದು.
ಪೆಂಡಾಲ್ ಹೊರತುಪಡಿಸಿ ಊಟ, ಉಪಹಾರ ಮತ್ತು ನೀರು ಪೂರೈಕೆಗಾಗಿ 2.5 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಡೆದ ಸಮ್ಮೇಳನಗಳಲ್ಲಿಯೇ ಅತಿ ಕಡಿಮೆ ಖಚರ್ಿನ ಸಮ್ಮೇಳನ ಇದಾಗಲಿದೆ .ಸ್ವಚ್ಛತೆ, ಭದ್ರತೆ, ಎಲ್ಲಾ ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆ ಮಾಡಲಾಗುತ್ತಿದೆ ಎಂದು ಶಾಸಕ ಅರವಿಂದ ಬೆಲ್ಲದ ವಿವರಿಸಿದರು.
ಆಹಾರ ಸಮಿತಿಯ ಕಾಯರ್ಾಧ್ಯಕ್ಷ, ಮಹಾನಗರ ಪಾಲಿಕೆ ಆಯುಕ್ತ ಶಕೀಲ್ ಅಹ್ಮದ್, ಕಾರ್ಯದಶರ್ಿ, ಆಹಾರ ಇಲಾಖೆ ಜಂಟಿನಿದರ್ೇಶಕ ಸದಾಶಿವ ಮಜರ್ಿ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಜಿಪಂ ಸದಸ್ಯೆ ವಿಜಯಲಕ್ಷ್ಮಿ ಕೆಂಪೇಗೌಡ ಪಾಟೀಲ, ಶಂಕರ ಹಲಗತ್ತಿ, ಪಿ.ಹೆಚ್.ನೀರಲಕೇರಿ ಮತ್ತಿತರರು ಇದ್ದರು.