ಲೋಕದರ್ಶನ ವರದಿ
ರಾಮದುರ್ಗ 11: ಕೊರೊನಾ ಸಾಂಕ್ರಾಮಿಕ ರೋಗದಿಂದ ಇಡೀ ದೇಶವೆ ತಲ್ಲಣಗೊಂಡಿದೆ. ಲಾಕ್ಡೌನ್ದಿಂದ ದುಡಿಯುವ ಜನ ಕೆಲಸವನ್ನು ಕಳೆದುಕೊಂಡು ತುಂಬಾ ಕಷ್ಟದಲ್ಲಿದ್ದಾರೆ. ಕಳೆದ ಎರಡು ತಿಂಗಳಿಂದ ಕೆಲಸ ಬಂದಾಗಿರುವ ಬೀಡಿ ಕಾಮರ್ಿಕರಿಗೆ ಅವರ ಜೀವನ ಸಾಗಿಸಲು ಅವರ ಕ್ಷೇಮಾಭಿವೃದ್ದಿ ನಿಧಿಯಿಂದ ಮಾಸಿಕ ರೂ. 6 ಸಾವಿರದಂತೆ ಪರಿಹಾರ ನೀಡಬೇಕೆಂದು ಬೆಳಗಾವಿ ಜಿಲ್ಲಾ ಬೀಡಿ ಕಾಮರ್ಿಕರ ಸಂಘ(ಸಿಐಟಿಯು) ರಾಮದುರ್ಗ ತಾಲೂಕ ಸಮಿತಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡುವದರ ಮೂಲಕ ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.
ರಾಜ್ಯದಲ್ಲಿ ಬೀಡಿ ಕೈಗಾರಿಕೆಗಳಲ್ಲಿ ಸುಮಾರು 8 ರಿಂದ 9 ಲಕ್ಷ ಬೀಡಿ ಕಾಮರ್ಿಕರು ಬೀಡಿ ಸುತ್ತುವ ಕಾಯಕದಲ್ಲಿದ್ದಾರೆ. ಈ ಕೆಲಸವೆ ಅವರ ಜೀವನದ ಆಧಾರ. ಜಿಲ್ಲೆಯಲ್ಲಿ (ಬೆಳಗಾವಿ) ಸಾವಿರಾರು ಜನ ಬೀಡಿ ಕಾಮರ್ಿಕರು ಇದ್ದಾರೆ. ರಾಜ್ಯದ 23 ಜಿಲ್ಲೆಗಳಲ್ಲಿ ಹಂಚಿಕೊಂಡಿರುವ ಬೀಡಿ ಉದ್ಯಮದಲ್ಲಿ ಒಂಟಿ ಮಹಿಳೆಯರು, ವಿಧವೆಯರು ಸಂಸಾರದ ನಿರ್ವಹಣೆಯ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತ ಲಕ್ಷಗಟ್ಟಲೇ ಮಹಿಳೆಯರು ಇದ್ದಾರೆ. ಇವರೆಲ್ಲರೂ ಬೀಡಿ ಕಂಪನಿ ಗುತ್ತಿಗೆದಾರರ, ಏಜೆಂಟರಿಂದ ಬೀಡಿ ತಯಾರಿಸುವ ಕಚ್ಚಾ(ಎಲೆ, ತಂಬಾಕು) ಸಾಮಾಗ್ರಿ ತೆಗೆದುಕೊಂಡು ತಮ್ಮ ತಮ್ಮ ಮನೆಗಳಲ್ಲಿ ಬೀಡಿಗಳನ್ನು ಸುತ್ತಿಕೊಟ್ಟು ಕೂಲಿ ಪಡೆದು ತಮ್ಮ ಜೀವನದ ಗಾಡಿ ಸಾಗಿಸುತ್ತಾರೆ. ಕಳೆದ ಎರಡು ತಿಂಗಳಿಂದ ಬೀಡಿ ಉದ್ಯಮ ಬಂದ ಆಗಿರುವದರಿಂದ ಕೂಲಿವೂ ಸಿಗದೆ ಸುತ್ತಿದ ಬೀಡಿಯನ್ನು ಪಡೆಯದ ಏಜೆಂಟರು ಕೂಲಿಯನ್ನು ನೀಡದ ಕಾರಣ ಬೀಡಿ ಕಾಮರ್ಿಕರು ತುಂಬಾ ಕಷ್ಟದಲ್ಲಿದ್ದಾರೆ. ರಾಜ್ಯ ಸರಕಾರದ ನೇತೃತ್ವ ವಹಿಸಿರುವ ತಾವು ಇತ್ತಿಚೆಗೆ ಘೋಷಿಸಿದ ಅಸಂಘಟಿತ ಕಾಮರ್ಿಕರ ಪರಿಹಾರ ಪ್ಯಾಕೇಜ್ನಲ್ಲಿ ಬೀಡಿ ಕಾಮರ್ಿಕರನ್ನು ಸೇರಿಸದಿರುವದು ಖಂಡನೀಯ. ಬೀಡಿ ಸುತ್ತುವ ಕೆಲಸ ಬಂದ ಆಗಿ, ಬೇರೆ ಕೆಲಸ ಮಾಡಬೇಕೆಂದರೆ ಎಲ್ಲ ಕೆಲಸಗಳು ಸ್ತಬ್ಧವಾಗಿರುವದರಿಂದ ಬೀಡಿ ಕಾಮರ್ಿಕರಿಗೆ ಬೇರೆ ಕೆಲಸ ಸಿಗದೆ ಬೀದಿಗೆ ಬಂದಿದ್ದಾರೆ. ಕಳೆದ 40 ವರ್ಷಗಳಿಂದ ಅಸ್ತಿತ್ವದಲ್ಲಿರುವ ಬೀಡಿ ವರ್ಕರ್ಸ್ ವೆಲ್ಫೇರ್ ಫಂಡಿನಿಂದ ಕೇಂದ್ರ ಸರಕಾರ ಸಾವಿರಾರು ಕೋಟಿ ಆಧಾಯವನ್ನು ನಿರಂತರವಾಗಿ ಪಡೆದಿದೆ. ಈ ನಿಧಿಯಿಂದಲೇ ಬೀಡಿ ಕಾಮರ್ಿಕರಿಗೆ ಪರಿಹಾರ ಕೊಡಬಹುದಾಗಿದೆ. ಕಾಮರ್ಿಕ ಇಲಾಖೆಯ ಪ್ರಧಾನ ಕಾರ್ಯದಶರ್ಿಯವರ ಜೊತೆ ಮಾತನಾಡಿ, ಕೇಂದ್ರ ಸರಕಾರದ ಬೀಡಿ ಕಾಮರ್ಿಕರ ಕ್ಷೇಮಾಭಿವೃದ್ದಿ ನಿಧಿಯಿಂದ ಪರಿಹಾರ ಕೇಳಿ ಅದಕ್ಕೆ ರಾಜ್ಯ ಸರಕಾರದ ಪರಿಹಾರವು ಸೇರಿಸಿ ಬೀಡಿ ಕಾಮರ್ಿಕರಿಗೆ ಮಾಸಿಕ ರೂ. 6 ಸಾವಿರ ನೆರವು ನೀಡಬೇಕೆಂದು ಬೆಳಗಾವಿ ಜಿಲ್ಲಾ ಬೀಡಿ ಕಾಮರ್ಿಕರ ಸಂಘ (ಸಿಐಟಿಯು) ಕಾರ್ಯದಶರ್ಿ ಜಿ.ಎಂ. ಜೈನೆಖಾನ್ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ನ ತಾಲೂಕಾಧ್ಯಕ್ಷ ನಾಗಪ್ಪ ಸಂಗೊಳ್ಳಿ, ಗೋರಿಮಾ ಜಮಾದಾರ, ಮರೆಂಬಿ ಮುದಕವಿ, ನೂರಜಾನ್ ಮದರಖಂಡಿ ಮತ್ತಿರರು ಇದ್ದರು.