ಮಂಗಳೂರು, ಡಿಸೆಂಬರ್ 4 - ಈರುಳ್ಳಿ ಈಗ ಗ್ರಾಹಕ ಮತ್ತು ಬೆಳೆಗಾರ ಇಬ್ಬರಲ್ಲೂ ಕಣ್ಣೀರು ಹರಿಸುತ್ತಿದೆ ಬೆಲೆ ಕೇಳಿದರೆ ತಲೆ ಚಕ್ಕರ್ ಹೊಡೆದಂತಾಗುತ್ತಿದೆ ಏನೂ ಮಾಡಿದರೂ ಬೆಲೆ ಮಾತ್ರ ಕಡಿಮೆಯಾಗುತ್ತಿಲ್ಲ, ಮಧ್ಯವರ್ತಿಗಳ ದುರಾಸೆಯೂ ಕೊನೆಯಾಗುತ್ತಿಲ್ಲ .!
ಬೆಳೆ ಕಳೆದುಕೊಂಡ ರೈತರು ಮಾಡಿದ ಸಾಲ ತೀರಿಸುವುದು ಹೇಗಪ್ಪ ಎಂದು ತಲಮೇಲೆ ಕೈಹೊತ್ತು ಕುಳಿತರೆ ದುಬಾರಿ ಬೆಲೆಯಲ್ಲಿ ಈರುಳ್ಳಿ ಕೊಳ್ಳುವುದು ಹೇಗೆ ಎಂಬ ಚಿಂತೆ ಗ್ರಾಹಕರನ್ನೂ ಕಾಡುತ್ತಿದೆ.
ಈಜಿಪ್ಟ್ ನಂತರ ಟರ್ಕಿ ಮಂಗಳೂರಿಗೆ 50 ಟನ್ ಈರುಳ್ಳಿ ಹಡಗಿನ ಮೂಲಕ ಪೂರೈಕೆಯಾಗಿ ಹಳೆಯ ಬಂದರಿಗೆ ಆಗಮಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ದಾರೂ ಸಹ , ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕಡಿಮೆಯಾಗಿಲ್ಲ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಲೇ ಇದೆ ಎಂದು ಮಂಗಳೂರು ಸೆಂಟ್ರಲ್ ಮಾರುಕಟ್ಟೆಯಲ್ಲಿನ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಮಾರುಕಟ್ಟೆಯಲ್ಲಿ ಈರುಳ್ಳಿಯನ್ನು ಕೆಜಿಗೆ 120 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ ಇತರೆ ನಗರಗಳಲ್ಲಿ ಇದು 150 ಗಡಿದಾಟುವ ಅಪಾಯವೂ ಎದುರಾಗಿದೆ.
ವ್ಯಾಪಾರಿಗಳ ಪ್ರಕಾರ, ಮಧ್ಯವರ್ತಿಗಳು ಈರುಳ್ಳಿಯ ಬೆಲೆಯನ್ನು ನಿಗದಿಪಡಿಸಿದ್ದು ಇವರ ಚಟುವಟಿಕೆ ಹುನ್ನಾರ, ತಂತ್ರ ಕೊನೆಗಾಣಿಸಲು ಮೊದಲು ಕ್ರಮಜರುಗಿಸಬೇಕು ಎಂಬ ಮಾತು ಕೇಳಿ ಬರುತ್ತಿದೆ .
ಹಿಂದೆ, ಪುಣೆ ಮತ್ತು ಹುಬ್ಬಳ್ಳಿಯಿಂದ ತಂದ ಈರುಳ್ಳಿಯ ಬೆಲೆಯನ್ನು ಸಾರಿಗೆ ವೆಚ್ಚದ ಆಧಾರದ ಮೇಲೆ ನಿಗದಿಪಡಿಸಲಾಗುತ್ತಿತ್ತು ಆದರ ಈಗ ಬೆಲೆ ನಿರಂತರವಾಗಿ ಏರುತ್ತಿದೆ ಎಂದು ಪ್ರಧಾನ ಕಾರ್ಯದರ್ಶಿ, ಬಂದರ್ ಶ್ರಮಿಕರ ಸಂಘದ ಬಿ ಕೆ ಇಮ್ತಿಯಾಜ್ ಆತಂಕ ತೋಡಿಕೊಂಡರು.
ಈರುಳ್ಳಿಯ ಬೆಲೆಯನ್ನು ಪರಿಶೀಲಿಸುವಂತೆ ಒತ್ತಾಯಿಸಿ ಸಂಘದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸುವುದಾಗಿಯೂ ಅವರು ಹೇಳಿದರು.