50ಲಕ್ಷ ರೂ. ವೆಚ್ಚದ ಖಾತ್ರಿ ಕಾಮಗಾರಿ ಸಿಇಒ ಪೆದ್ದಪ್ಪಯ್ಯ ವೀಕ್ಷಣೆ

ಲೋಕದರ್ಶನ ವರದಿ

ಗಂಗಾವತಿ 03: ಐವತ್ತು ಲಕ್ಷ ರೂ. ವೆಚ್ಚದಲ್ಲಿ ನಡೆಯುತ್ತಿರುವ ಉದ್ಯೋಗ ಖಾತ್ರಿ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ಸಿಇಒ ಪೆದ್ದಪ್ಪಯ್ಯ ಬುಧವಾರ ವೀಕ್ಷಣೆ ಮಾಡಿದರು.

ಹಣವಾಳ ಗ್ರಾಮ ಪಂಚಾಯಿತಿಯಿಂದ ಕಳೆದ ಹದಿನೈದು ದಿನಗಳಿಂದ ನಡೆಯುತ್ತಿರುವ ಕಾಮಗಾರಿಗೆ ನಾನಾ ಗ್ರಾಮದ ಸುಮಾರು 1,600 ಜನ ಕಾಮರ್ಿಕರು ಕೆಲಸ ಮಾಡುತ್ತಿದ್ದಾರೆ. ಚೆಕ್ ಡ್ಯಾಂ ವ್ಯಾಪ್ತಿಯ ಸುಮಾರು 12 ಎಕರೆ ವಿಸ್ತಿರ್ಣದಲ್ಲಿ ಹಳ್ಳದ ಹೂಳು ತೆಗೆಯುವ ಕಾಮಗಾರಿ ನಡೆಯುತ್ತಿದೆ. 9 ಬ್ಲಾಕ್ಗಳಲ್ಲಿ ಸುಮಾರು 5 ಅಡಿ ಆಳದಲ್ಲಿ ಹೂಳು ತೆಗೆಯಲಾಗುತ್ತಿದೆ. ಈ ಕಾಮಗಾರಿಯಿಂದ ಚೆಕ್ ಡ್ಯಾಂನಲ್ಲಿ ಹೆಚ್ಚುವರಿ ನೀರು ಸಂಗ್ರಹವಾಗುವ ಮೂಲಕ ಜಲ ಸಂರಕ್ಷಣೆಗೆ ಅನುಕೂಲವಾಗಲಿದೆ. 

ಮಾದರಿ ಗ್ರಾ.ಪಂ ಸ್ಥಳೀಯ ಗ್ರಾಮಸ್ಥರು ಹಾಗೂ ಗ್ರಾ.ಪಂ. ನೇತೃತ್ವದಲ್ಲಿ ಖಾತ್ರಿ ಕಾಮಗಾರಿ ನಡೆಯುತ್ತಿದೆ. ಇದೊಂದು ಮಾದರಿ ಗ್ರಾಮ ಪಂಚಾಯಿತಿ ಆಗಿದ್ದು, ಇದೇ ಮಾದರಿಯಲ್ಲಿ ಎಲ್ಲ ಪಂಚಾಯಿತಿಗಳಲ್ಲಿ ಕಾಮರ್ಿಕರಿಗೆ ಕೆಲಸ ನೀಡಲಾಗುವುದು. ಬರ ಕಾಮಗಾರಿ ಕೈಗೊಳ್ಳಲು ಹಣದ ಕೊರತೆ ಇಲ್ಲ ಎಂದು ಜಿ.ಪಂ.ಸಿಇಒ ಪೆದ್ದಪ್ಪಯ್ಯ ಹೇಳಿದರು. ಈ ಸಂದರ್ಭದಲ್ಲಿ ಕಾರ್ಮಿಕರಿಗೆ ಜಾಬ್ ಕಾಡರ್್ ವಿತರಣೆ ಮಾಡಿದರು. ಜಿ.ಪಂ.ಸದಸ್ಯ ಅಮರೇಶ ಗೋನಾಳ, ತಾ.ಪಂ.ಇಒ ಲಕ್ಷ್ಮೀಪತಿ, ಪಿಡಿಒ ಎನ್.ಎಸ್.ಕುಮಾರಿ ನೇತೃತ್ವದಲ್ಲಿ ಸಸಿ ನೆಡೆಸುವ ಮೂಲಕ ಕಾಮರ್ಿಕರಿಗೆ ಸಸಿ ವಿತರಣೆ ಮಾಡಲಾಯಿತು. 

ಜಿ.ಪಂ.ಸದಸ್ಯ ಅಮರೇಶ ಗೋನಾಳ ಮಾತನಾಡಿ, ಬರಗಾಲದಲ್ಲಿ ಹಣವಾಳ ಗ್ರಾ.ಪಂ.ವ್ಯಾಪ್ತಿಯ ಎಲ್ಲ ಗ್ರಾಮಗಳ ಕೂಲಿ ಕಾರ್ಮಿಕರಿಗೆ ಖಾತ್ರಿ ಕೆಲಸ ನೀಡಲಾಗಿದೆ. ಹಳ್ಳ ಒತ್ತುವರಿ ಸೇರಿದಂತೆ ಅಪಾರ ಪ್ರಮಾಣದಲ್ಲಿ ತುಂಬಿಕೊಂಡಿರುವ ಹೂಳನ್ನು ತೆಗೆಯಲಾಗುತ್ತಿದೆ. ಈ ಕೆಲಸದ ಅವಧಿಯನ್ನು ಇನ್ನಷ್ಟು ದಿನ ವಿಸ್ತರಣೆ ಮಾಡಬೇಕೆಂದು ಜಿ.ಪಂ.ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದರು. 

ತಾ.ಪಂ.ಸದಸ್ಯರಾದ ಸಿದ್ದನಗೌಡ, ರಫಿ, ತಾ.ಪಂ.ಸಹಾಯಕ ನಿದರ್ೇಶಕ ತಿಮ್ಮಾ ನಾಯ್ಕ, ಪಿಡಿಒ ಎನ್.ಎಸ್.ಸೂರ್ಯಕುಮಾರಿ, ಗ್ರಾ.ಪಂ.ಅಧ್ಯಕ್ಷರು, ಸದಸ್ಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಇದ್ದರು.