ಮಾಧ್ಯಮ ಪ್ರಕಟಣೆರಾಣಿ ಚೆನ್ನಮ್ಮ ಸರ್ಕಲ್ ಅಭಿವೃದ್ಧಿಗೆ 50 ಲಕ್ಷ ರೂಪಾಯಿ : ಸಚಿವ ಎಂ ಬಿ ಪಾಟೀಲ

50 lakh rupees for the development of Rani Chennamma Circle: Minister MB Patil

ಮಾಧ್ಯಮ ಪ್ರಕಟಣೆರಾಣಿ ಚೆನ್ನಮ್ಮ ಸರ್ಕಲ್ ಅಭಿವೃದ್ಧಿಗೆ 50 ಲಕ್ಷ ರೂಪಾಯಿ : ಸಚಿವ ಎಂ ಬಿ ಪಾಟೀಲ

ವಿಜಯಪುರ 19 :  ವಿಜಯಪುರ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ನಿರ್ಮಾಣಗೊಂಡಿರುವ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಚೆನ್ನಮ್ಮನವರ ಮೂರ್ತಿ ನಿಮ್ಮಿಂದಲೇ ಅನಾವರಣಗೊಳ್ಳಬೇಕು ಎಂದು ವಿ. ಎನ್‌. ಬಿರಾದಾರ, ಆರ್‌. ಜಿ. ಯಾರನಾಳ ಹಾಗೂ ಸಮಾಜದ ಮುಖಂಡರು ಎಂ. ಬಿ. ಪಾಟೀಲರಲ್ಲಿ ವಿನಂತಿಸಿದರು.ಹಲವು ದಶಕಗಳ ಕಾಲ ನಿವೇಶನವಿಲ್ಲದೆ ರಾಣಿ ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ಸ್ಥಗಿತಗೊಂಡಿದ್ದ ಸಂದರ್ಭದಲ್ಲಿ ಸಮಾಜದ ಮುಖಂಡರೆಲ್ಲರೂ ಸೇರಿ ಎಂ.ಬಿ.ಪಾಟೀಲರಲ್ಲಿ ವಿನಂತಿಸಿದಾಗ, ತಾವೇ ಖುದ್ದಾಗಿ ಮುತುವರ್ಜಿವಹಿಸಿ ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ, ಬಸ್ ನಿಲ್ದಾಣದ ಆವರಣದಲ್ಲಿಯ ನಿವೇಶನವನ್ನು ಮೂರ್ತಿ ಪ್ರತಿಷ್ಠಾಪನೆಗೆ ಮೀಸಲಿರಿಸಿ, ಮುಖ್ಯಮಂತ್ರಿಗಳಿಂದ ಭೂಮಿ ಪೂಜೆ ನೆರವೇರಿಸಿ ರಾಣಿ ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆಗೆ ಕಾರಣರಾಗಿದ್ದೀರಿ. ಅಲ್ಲದೇ, ಹಣಕಾಸಿನ ಅಭಾವದಿಂದ ಅರ್ಧಕ್ಕೆ ನಿಂತಿದ್ದ ರಾಣಿ ಚೆನ್ನಮ್ಮ ಸಮುದಾಯ ಭವನದ ನಿರ್ಮಾಣ ಕಾರ್ಯವನ್ನೂ ತಾವೇ ಮುತುವರ್ಜಿ ವಹಿಸಿ 3 ಕೋಟಿ ರೂಪಾಯಿ ಅನುದಾನ ಒದಗಿಸಿ, ರಾಣಿ ಚೆನ್ನಮ್ಮ ಸಮುದಾಯ ಭವನ ನಿರ್ಮಾಣ ಪೂರ್ಣಗೊಳ್ಳಲು ನೀವೇ ಕಾರಣರಾಗಿದ್ದೀರಿ. ಇಂದು ರಾಣಿ ಚೆನ್ನಮ್ಮ ಮೂರ್ತಿ ಕೂಡ ನಿಮ್ಮಿಂದಲೇ  ಪೂರ್ಣಗೊಳ್ಳಬೇಕು ಎಂದು ವಿನಂತಿ ಮಾಡಿದರು.ಮುಖಂಡರ ಮನವಿಗೆ ಸ್ಪಂದಿಸಿ ಮಾತನಾಡಿದ ಸಚಿವ ಎಂ.ಬಿ ಪಾಟೀಲ ಅವರು, "ಅಂದು ನಿಮ್ಮೆಲ್ಲರ ಮನವಿಗೆ ಸ್ಪಂದಿಸಿ, ನಿವೇಶನ ಒದಗಿಸಿ ಮುಖ್ಯಮಂತ್ರಿಗಳಿಂದ ಭೂಮಿ ಪೂಜೆ ನೆರವೇರಿಸಿದ್ದೇನೆ. ಸಮುದಾಯ ಭವನಕ್ಕೆ ಮುಖ್ಯಮಂತ್ರಿಗಳಿಂದ 3 ಕೋಟಿ ಅನುದಾನ ಒದಗಿಸಿದ್ದೇನೆ. ಇಂದು ಕೂಡ ಏನಾದರೂ ಮೂರ್ತಿ ಪ್ರತಿಷ್ಠಾಪನ ಕಾರ್ಯಕ್ಕೆ ಅನುದಾನ ಕೊರತೆ ಇದೆಯೇ? ಎಂದು ಮುಖಂಡರನ್ನು ಪ್ರಶ್ನಿಸಿದರು. ಆಗ ಮಾತನಾಡಿದ ಮುಖಂಡ ವಿ. ಎನ್‌. ಬಿರಾದಾರ 25 ಲಕ್ಷ ರೂಪಾಯಿಗಳ ಅಗತ್ಯವಿದೆ ಎಂದು ಹೇಳಿದರು. ಇದಕ್ಕೆ ಕೂಡಲೇ ಸ್ಪಂಧಿಸಿದ ಸಚಿವ ಎಂ ಬಿ ಪಾಟೀಲ ಅವರು, ರಾಣಿ ಚೆನ್ನಮ್ಮ ನಮ್ಮೆಲ್ಲರ ಆಸ್ಮಿತೆ ಆಗಿದ್ದಾರೆ. 25 ಲಕ್ಷ ರೂಪಾಯಿ ಯಾಕೆ? 50 ಲಕ್ಷ ರೂಪಾಯಿಗಳನ್ನು ಒದಗಿಸುತ್ತೇನೆ. ಮೂರ್ತಿ ಅನಾವರಣಕ್ಕೆ ಮುಖ್ಯಮಂತ್ರಿಗಳನ್ನೆ ಆಹ್ವಾನಿಸುತ್ತೇನೆ. ಅಲ್ಲದೇ, ಕೇಂದ್ರ ಬಸ್ ನಿಲ್ದಾಣಕ್ಕೆ ರಾಣಿ ಚೆನ್ನಮ್ಮನವರ ಹೆಸರು ಇಡಲು ನಾಳೆಯೇ ಮುಖ್ಯಮಂತ್ರಿಗಳಿಗೆ ಹಾಗೂ ಸಾರಿಗೆ ಸಚಿವರಿಗೆ ವಿನಂತಿ ಮಾಡುತ್ತೇನೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ  ಮಹಾನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ  ದೂರವಾಣಿ ಕರೆ ಮಾಡಿದ ಸಚಿವರು ಪಾಲಿಕೆ ಮತ್ತು ಪ್ರಾಧಿಕಾರದ ವತಿಯಿಂದ ತಲಾ 25 ಲಕ್ಷ ರೂಪಾಯಿಯಂತೆ ಒಟ್ಟು 50 ಲಕ್ಷ ರೂಪಾಯಿ ಅನುದಾನ ಒದಗಿಸಬೇಖು. ಅಲ್ಲದೇ, ಕಾಮಗಾರಿ ಪೂರ್ಣಗೊಳಿಸಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ  ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ವಿ.ಎನ್ ಬಿರಾದಾರ, ಆರ್‌. ಜಿ.  ಯರನಾಳ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ರಾಜುಗೌಡ ಕುದುರಿ ಸಾಲೋಡಗಿ, ಡಾ. ಗಜಾನನ ಮಹಿಶಾಳೆ, ಬಿ.ಜಿ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು. ಧನ್ಯವಾದಗಳು