ಕೊಪ್ಪಳ 17: ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನೆಡೆದ ವಿ.ಎಸ್.ಕೆ.ಯು.ಬಿ 7ನೇ ವಾರ್ಷಿಕ್ ಘಟಿಕೋತ್ಸವದಲ್ಲಿ ಕೊಪ್ಪಳ ಪಿಜಿ ಸೆಂಟರ್ಗೆ ಐದು ರ್ಯಾಂಕ್ಗಳು ಸಂದಿವೆ.
ಬಳ್ಳಾರಿ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಎಂಎ ಪತ್ರಿಕೋದ್ಯಮ ವಿಭಾಗಕ್ಕೆ ಐದು ರ್ಯಾಕ್ಗಳು ಬಂದಿದ್ದು, ಅದರಲ್ಲಿ ಕೊಪ್ಪಳ ಪಿಜಿ ಸೆಂಟರ್ ಎಂಎ ಪತ್ರಿಕೋದ್ಯಮ ವಿಭಾಗದ ಮಂಜುನಾಥ ಚಕ್ರಸಾಲಿ ಪ್ರಥಮ ರ್ಯಾಂಕ್ನೊಂದಿಗೆ ಚಿನ್ನದ ಪದಕ ವಿಜೇತರಾಗಿದ್ದಾರೆ. ರಾಘವೇಂದ್ರ ದೇವರಮನಿ 2ನೇರ್ಯಾಂಕ್, ಸಂತೋಷ ಬಣಕಾರ 4ನೇ ರ್ಯಾಂಕ್ ಸೇರಿ ಎಂಎ ಪತ್ರಿಕೋದ್ಯಮ ವಿಭಾಗದಲ್ಲಿ ಕೊಪ್ಪಳ ಪಿ.ಜಿ ಸೆಂಟರ್ಗೆ 3 ರ್ಯಾಂಕ್ ಬಂದಿರುವುದು ವಿಶೇಷವಾಗಿದೆ. ಅಲ್ಲದೆ ಇತಿಹಾಸ ವಿಭಾಗದ ಅಯ್ಯಪ್ಪ 2ನೇ ರ್ಯಾಕ್ ಮತ್ತು ಇಂಗ್ಲೀಷ್ ವಿಭಾಗದ ಮುಭಿನಾ 5ನೇ ರ್ಯಾಂಕ್ ಪಡೆದುಕೊಂಡು ಕೊಪ್ಪಳ ಪಿಜಿ ಸೆಂಟರ್ಗೆ ಕೀತರ್ಿ ತಂದ್ದಿದಾರೆ. ಅಲ್ಲದೇ ಒಟ್ಟು ಐದು ರ್ಯಾಂಕ್ಗಳು ಲಭಿಸಿದ್ದು ಮೆಚ್ಚುಗೆಯ ವಿಷಯವಾಗಿದೆ. ಕೊಪ್ಪಳ ಸ್ನಾತಕೋತ್ತರ ಕೇಂದ್ರ ವಿಶೇಷಾಧಿಕಾರಿ ಮನೋಜ ಡೊಳ್ಳಿ ಹಾಗೂ ಸಿಬ್ಬಂದಿವರ್ಗದವರು ಎಲ್ಲಾ ವಿದ್ಯಾಥರ್ಿಗಳಿಗೆ ಅಭಿನಂಧಿಸಿದ್ದಾರೆ