ಬಸನಕಟ್ಟೆ ಕೆರೆ ಅಭಿವೃದ್ಧಿಗೆ 5 ಕೋಟಿ ಅನುದಾನ ಬಿಡುಗಡೆ : ಶಾಸಕ ಶಿವಣ್ಣನವರ
ಬ್ಯಾಡಗಿ: ಪಟ್ಟಣದಲ್ಲಿಯ ಬಸವನಕಟ್ಟಿ ಕೆರೆಯ ಅಭಿವೃದ್ಧಿಗೆ ಸರ್ಕಾರ 5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ಮಂಗಳವಾರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದವರು. ಪಟ್ಟಣದ ಕನಕದಾಸರ ಕಲಾಭವನದ ದುರಸ್ಥಿಗೂ ಹಣ ಬಿಡುಗಡೆಯಾಗಿದೆ. ಸ್ಮಶಾನ ದುರಸ್ಥಿಗು ಕೂಡಾ ಅನುದಾನ ತರಲಾಗಿದ್ದು, ಇವೆಲ್ಲ ಕಾಮಗಾರಿಯನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದರು.ವಾಣಿಜ್ಯ ಕಟ್ಟಡಗಳ ಮಾಲೀಕರು ತಮ್ಮ ಕಟ್ಟಡ ಬಾಡಿಗೆ ನೀಡುವ ಮುನ್ನ ತಮ್ಮ ಕಟ್ಟಡದ ಮುಂದೆ ಸಾರ್ವಜನಿಕ ವಾಹನ ನಿಲುಗಡೆಗೆ ಸ್ಥಳ ನೀಡಬೇಕು. ಪುರಸಭೆಯ ಜಾಗೆಯಲ್ಲೋ ಅಥವಾ ಸರ್ಕಾರಿ ರಸ್ತೆಯ ಮೇಲೆ ವಾಹನ ನಿಲುಗಡೆ ಮಾಡಿ ಸಾರ್ವಜನಿಕರಿಗೆ ತೊಂದರೆಯಾಗುವಂತ ವಾಣಿಜ್ಯ ಕಟ್ಟಡಗಳ ಹಾಗೂ ಬಾಡಿಗೆ ಮನೆಯ ಮಾಲೀಕರಿಗೆ ನೋಟಿಸ್ ನೀಡುವಂತೆ ಸಭೆಯು ಒಕ್ಕೊರಲಿನಿಂದ ಹೇಳಿ ತು.ಪಟ್ಟಣದಲ್ಲಿ ಅನೇಕರು ರಸ್ತೆ, ಚರಂಡಿ ಆಕ್ರಮಿಸಿಕೊಂಡು ಮನೆಗಳನ್ನು ಕಟ್ಟಿದ್ದಾರೆ. ಮುಖ್ಯಾಧಿಕಾರಿಗಳು ಹೊಸ ಮನೆ ನಿರ್ಮಾಣ ಮಾಡುವಾಗ ಮನೆ ಮಾಲೀಕರಿಗೆ ಅನುಮತಿ ನೀಡುವಾಗ ರಸ್ತೆ, ಚರಂಡಿಗೆ ಜಾಗೆ ಬಿಟ್ಟು ಮನೆ ನಿರ್ಮಾಣ ಮಾಡಲು ಕರಾರು ಹಾಕಿ ಕೊಡುವಂತೆ ಸರ್ವ ಸದಸ್ಯರು ಮುಖ್ಯಾಧಿಕಾರಿಗಳಿಗೆ ಹೇಳಿದರು.ಪುರಸಭೆಯ ಸಾಮಾನ್ಯ ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ಮಾಡಲಾಯಿತು. ಅನೇಕ ವಿಷಯಗಳ ಬಗ್ಗೆ ಸರ್ವೆ ಸದಸ್ಯರ ಅನುಮತಿ ಪಡೆಯಲಾಯಿತು.ಪುರಸಭಾ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಉಪಾಧ್ಯಕ್ಷ ಸುಭಾಸ ಮಾಳಗಿ, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಣ್ಣ ಶೆಟ್ಟರ, ಸದಸ್ಯರಾದ ಬಸಣ್ಣ ಛತ್ರ, ರಾಮಣ್ಣ ಕೋಡಿಹಳ್ಳಿ. ಶಿವರಾಜ ಅಂಗಡಿ. ಈರಣ್ಣ ಬಣಕಾರ. ಹನುಮಂತಪ್ಪ ಮ್ಯಾಗೇರಿ. ರಫೀಕಮ್ಮದ್ ಮುದಗಲ್. ಮೆಹಬೂಬ್ ಸಾಬ್ ಅಗಸನಹಳ್ಳಿ. ಸೋಮಣ್ಣ ಸಂಕಣ್ಣನವರ್ .ರಾಜ ಸಾಬ್ ಕಳ್ಯಾಳ. ಫಕ್ಕೀರಮ್ಮ. ಚಲವಾದಿ.ಗಾಯತ್ರಿ ರಾಯ್ಕರ್ .ಸರೋಜಾ ಉಳ್ಳಾಗಡ್ಡಿ. ಕಲಾವತಿ ಬಡಿಗೇರ, ಮಂಜವ್ವ ಕೊಡಿಹಳ್ಳಿ. ಸುಮಂಗಲ ರಾರಾವಿ ಇದ್ದರು.