ಬಳ್ಳಾರಿ 26: ಕೇಂದ್ರ ಸರಕಾರ ದೇಶದಲ್ಲಿ 42 ಕಡೆ ಮೇಘಾ ಫುಡ್ಪಾಕರ್್ ಸ್ಥಾಪಿಸಲು ಯೋಜನೆ ಹಾಕಿಕೊಂಡಿದ್ದು, ಅದರಲ್ಲಿ 15 ಕಡೆ ಈಗಾಗಲೇ ಆರಂಭವಾಗಿವೆ. ಇನ್ನೂ 6 ಮೇಘಾಫುಡ್ ಪಾಕರ್್ಗಳು ಶೀಘ್ರದಲ್ಲಿಯೇ ಆರಂಭವಾಗಲಿವೆ ಎಂದು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ರಾಜ್ಯ ಖಾತೆ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಹೇಳಿದರು.
ನಗರದಲ್ಲಿ ಗಂಗಾಮತ ಉತ್ಸವದಲ್ಲಿ ಪಾಲ್ಗೊಳ್ಳಲು ಬುಧವಾರ ಆಗಮಿಸಿದ್ದ ಅವರು ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಇನ್ನುಳಿದ 21 ಮೇಘಾಫುಡ್ ಪಾಕರ್್ಗಳು ಆರಂಭಿಸುವಿಕೆ ಕಾರ್ಯ ಪ್ರಗತಿಯಲ್ಲಿವೆ ಎಂದು ಹೇಳಿದ ಸಚಿವೆ ನಿರಂಜನ್ ಜ್ಯೋತಿ ಅವರು, ಫುಡ್ಪಾಕರ್್ಗಳು ಸ್ಥಾಪಿಸಲು ಕೇಂದ್ರ ಆಹಾರ ಸಂಸ್ಕರಣಾ ಸಚಿವಾಲಯವು ಸಹಾಯಧನ ನೀಡುತ್ತಿದ್ದು, ಬಳ್ಳಾರಿಯಲ್ಲಿ ಯಾರಾದರೂ ಸ್ಥಾಪಿಸಲು ಮುಂದೆ ಬಂದರೇ ಅವಶ್ಯ ಸಹಕಾರ ನೀಡಲಾಗುವುದು ಎಂದು ಅವರು ತಿಳಿಸಿದರು.
ಕೇಂದ್ರ ಸರಕಾರ ಇತ್ತೀಚೆಗೆ ಜಾರಿಗೆ ತಂದ ಆಯುಷ್ಮಾನ್ ಭಾರತ ಅತ್ಯಂತ ಕ್ರಾಂತಿಕಾರಿ ಯೋಜನೆ ಎಂದು ಬಣ್ಣಿಸಿದ ಸಚಿವೆ ನಿರಂಜನ್ ಜ್ಯೋತಿ ಅವರು, ಇದರಿಂದ ಬಡಕುಟುಂಬಗಳಿಗೆ 5ಲಕ್ಷ ರೂ. ಆರೋಗ್ಯ ವಿಮೆ ಸಿಗಲಿದೆ ಎಂದರು.
ಕೃಷಿಕೂಲಿ ಕಾಮರ್ಿಕರು, ಬಡವರು, ರೈತರು, ಮಹಿಳೆಯರು ಸೇರಿದಂತೆ ಸರ್ವರ ಸಬಲೀಕರಣಕ್ಕೆ ನಮ್ಮ ಸರಕಾರ ಒತ್ತು ನೀಡಿದ್ದು,ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ತಮ್ಮ ಮಾತುಗಳಲ್ಲಿ ಹೇಳಿದ ಸಚಿವೆ ನಿರಂಜನ್ ಜ್ಯೋತಿ ಅವರು, ಮಹಾತ್ಮಾ ಗಾಂಧೀಜಿ ಮತ್ತು ಪಂ.ದೀನ್ದಯಾಳ್ ಅವರು ಕಂಡಿದ್ದ ಭಾರತದ ಕನಸು ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರಕಾರದಿಂದ ಸಾಕಾರವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಹಾಗೂ ಕೋಲಿ ಸಮಾಜದ ಮುಖಂಡರು ಇದ್ದರು.