ಕಳೆದ ಹೋದ 40 ಮೊಬೈಲ್ ಪತ್ತೆ: ವಾರಸುದಾರರಿಗೆ ಹಸ್ತಾಂತರ
ಬೀಳಗಿ 23: ಕಳೆದು ಹೋದ ಮೊಬೈಲ್ ಪತ್ತೆ ಹಚ್ಚುವಲ್ಲಿ ಬೀಳಗಿ ಪೊಲೀಸರು ಸಕ್ರಿಯವಾಗಿದ್ದು, ಕಳೆದ ಕೆಲವು ತಿಂಗಳ ಅವಧಿಯಲ್ಲಿ 40 ಕ್ಕಿಂತ ಅಧಿಕ ಮೊಬೈಲ್‌ಗಳನ್ನು ಪತ್ತೆ ಹಚ್ಚಿ ವಾರಸ್ದಾರರಿಗೆ ಮರಳಿಸಿದ್ದಾರೆ.
ವಿವಿಧ ಕಂಪನಿಯ ಮೊಬೈಲ್ ಕಳೆದುಕೊಂಡಿದ್ದರು. ಅವರಲ್ಲಿ ಬಹುತೇಕರು ಸಿಇಐಆರ್ (ಸೆಂಟ್ರಲ್ ಇಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್) ಪೋರ್ಟಲ್‌ನಲ್ಲಿ ಮೊಬೈಲ್‌ನ ಐಎಂಇಐ ನಂಬರ್ ಸಮೇತ ದೂರು ದಾಖಲಿಸಿದ್ದರು. ಕೆಲವರು ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೋರ್ಟಲ್ ಸಹಾಯದಿಂದ ಮೊಬೈಲ್‌ಗಳನ್ನು ಪತ್ತೆ ಹಚ್ಚಿದ್ದಾರೆ,
ಬೀಳಗಿ ಪೊಲೀಸ್ ಠಾಣೆಯ ಆವರಣದಲ್ಲಿ ಪೊಲೀಸ್ ಉಪ ಅಧೀಕ್ಷಕ ಗಜಾನನ ಸುತಾರ, ಕೆಎಸ್‌ಪಿಎಸ್ ರವರು ವಾರಸುದ್ದಾರರಿಗೆ ಮರಳಿಸಿದರು. ಈ ವೇಳೆ ಸಿಪಿಐ ಬಸವರಾಜ ಹಳಬನ್ನವರ, ಪಿಎಸ್‌ಐ ಎನ್ ಟಿ ದೊಡ್ಡಿಮನಿ, ಎಎಸ್‌ಐ ಗಾಳಿ, ಆರ್ ಟಿ ಲಮಾಣಿ, ಸಿಬ್ಬಂದಿಗಳಾದ ಲಕ್ಷ್ಮಣ ಬಾಳಗೊಳ, ಸಂಗಪ್ಪ ಬಾರಡ್ಡಿ, ಬಾಬು ಹುಡೇದ, ಚನ್ನಪ್ಪ ತಳವಾರ, ಬಸವರಾಜ್ ಮುರನಾಳ, ವಿಶಾಲ ಕತ್ತಿ, ಬಸವರಾಜ್ ಧರ್ಮಣ್ಣವರ, ಮೌಲಾ ನದಾಫ್, ಟಿಪ್ಪು ವಾಲಿಕಾರ್, ನೀಲಮ್ಮ ಮಜ್ಜಗಿ, ಇತರರು ಇದ್ದರು.