ಲೋಕದರ್ಶನವರದಿ
ರಾಣೇಬೆನ್ನೂರ 26: ತಾಲೂಕಿನ ಮುದೇನೂರು ಗ್ರಾಮದ ಹಜರತ್ ಸೈಯದ್ ಚಮನ್ಶಾವಲಿ ಚಿಸ್ತಿ ಅವರ 363ನೇ ಉರುಸ್ ಅಂಗವಾಗಿ ಹಿಂದೂ-ಮುಸ್ಲಿಂ ಬಾಂಧವರು ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಗುರುವಾರ ರಾತ್ರಿ ಪವಿತ್ರ ಗಂಧ ಸಂದಲ್ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.
ಗಂಧ ಸಂದಲ್ ಮೆರವಣಿಗೆ ಚಾಲನೆ ನೀಡಿದ ಮಹಬೂಬಸಾಬ್ ಶೇಖಸನದಿ ಅವರು, ನಮ್ಮ ಪೂರ್ವಜರ ಕಾಲದಿಂದಲೂ ಹಿಂದೂ-ಮುಸ್ಲಿಂ ಬಾಂಧವರು ಒಟ್ಟಿಗೆ ಸೇರಿ ಯಾವುದೇ ಬೇಧವಿಲ್ಲದೆ ಸಾಮರಸ್ಯದಿಂದ ಆಚರಿಸುತ್ತಾ ಬಂದಿದ್ದೇವೆ, ಈ ಸಂಪ್ರದಾಯ ಹೀಗೆ ಮುಂದುವರೆಯಲಿದೆ ಎಂದರು.
ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೂಲ ದಗರ್ಾವನ್ನು ತಲುಪಿದ ಬಳಿಕ ಗಂಧ ಸಮಪರ್ಿಸಲಾಯಿತು. ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿ, ಅಶೋಕಗೌಡ ಗಂಗನಗೌಡ್ರ, ಷಣ್ಮುಖನಗೌಡ ಗಂಗನಗೌಡ್ರ, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಅನ್ವರಸಾಬ್ ಶೇಖಸನದಿ, ನಬೀಸಾಬ್ ನಂದಿಹಳ್ಳಿ, ಖಾಸಿಂಸಾಬ್ ಬಿಲ್ಲಹಳ್ಳಿ, ನಿವೃತ್ತ ಶಿಕ್ಷಕ ಎಸ್.ಕೆ.ಜೋಗಿ, ಮಂಜುನಾಥ ಪುಟ್ಟಕ್ಕನವರ, ನಬೀಸಾಬ್ ನಂದಿಹಳ್ಳಿ, ಗುಳ್ಳೆಮ್ಮ ಹರಿಜನ, ಶೀಲಾ ಗಂಗನಗೌಡ್ರ, ರುದ್ರಮುನಿ ರಾಮಕ್ಕನವರ, ಕಲ್ಲಪ್ಪ ಜುಂಜೇರ, ರೇವಣಸಿದ್ದಪ್ಪ ಇಂಗಳಗೊಂದಿ ಸೇರಿದಂತೆ ಗ್ರಾಮದ ಅನೇಕ ಮುಖಂಡರು ಮೆರವಣಿಗೆಯ ಮುಂಚೂಣಿಯಲ್ಲಿ ಪಾಲ್ಗೊಂಡಿದ್ದರು.