ಕೊಪ್ಪಳ 19: ಕಲಬುರಗಿಯ ಗುಲಬುಗರ್ಾ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾದ 26ನೇ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿದ ಕೊಪ್ಪಳ ಜಿಲ್ಲೆಯ ವಿದ್ಯಾಥರ್ಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕನರ್ಾಟಕ ರಾಜ್ಯ ವಿಜ್ಞಾನ ಪರಿಷತ್ತು, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ನವದೆಹಲಿ, ಭಾರತ ಸಕರ್ಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕನರ್ಾಟಕ ಸಕರ್ಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಆಡಳಿತ, ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಡಿ. 15 ರಿಂದ 17 ರವರೆಗೆ ಕಲಬುರಗಿಯ ಗುಲಬುಗರ್ಾ ವಿಶ್ವವಿದ್ಯಾಲಯದ ಆವರಣದಲ್ಲಿ ಜರುಗಿದ "26ನೇ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ-2018" ದಲ್ಲಿ ಭಾಗವಹಿಸಿದ ಕೊಪ್ಪಳ ಜಿಲ್ಲೆಯ ಲೋಕೇಶ ಹಾಗೂ ರಾಧಿಕಾ ಮತ್ತು ತಂಡದ ಸದಸ್ಯರು "ಕೆಂಪು ಇಟ್ಟಿಗೆ ಹಸಿರು ಪಟ್ಟಿಗೆ" ಎಂಬ ಯೋಜನೆಯನ್ನು ಮಂಡಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಷ್ಟ್ರ ಮಟ್ಟಕ್ಕೆ ಕೊಪ್ಪಳ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ತಂಡವಾಗಿದೆ.
ತಂಡವು ಡಿ. 25 ರಿಂದ 29 ರವರೆಗೆ ಓರಿಸ್ಸಾ ರಾಜ್ಯದ ಭುವನೇಶ್ವರದಲ್ಲಿ ಜರುಗುವ ರಾಷ್ಟ್ರದ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಈ ತಂಡಕ್ಕೆ ಶುಭ ಹಾರೈಸಿ ಬಿಳ್ಕೋಟ್ಟರು. ತಂಡಕ್ಕೆ ಮಾರ್ಗದರ್ಶಕರಾಗಿ ಗಂಗಾವತಿ ತಾಲೂಕಿನ ಮುಸಲಾಪೂರ ಗ್ರಾಮದ ಸ.ಫ್ರೌ.ಶಾಲೆ ಶಿಕ್ಷಕ ಮಂಜುನಾಥ ಅವರು ಕಾರ್ಯನಿರ್ವಹಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕರಾದ ಉಮಾದೇವಿ ಸೊನ್ನದ, ಡಯಟ್ನ ಪ್ರಭಾರಿ ಪ್ರಾಂಶುಪಾಲರಾದ ಬಸವರಾಜಯ್ಯ, ಗಂಗಾವತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಂ. ಸಿದ್ದಲಿಂಗಮೂತರ್ಿ, ಬಿ.ಆರ್.ಸಿ ಸಮನ್ವಯಾಧಿಕಾರಿ ವಿ.ವಿ. ಗೊಂಡಬಾಳ, ಕ.ರಾ.ವಿ.ಪ.ದ 26ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಜಿಲ್ಲಾ ಸಂಯೋಜಕ ಸಿದ್ದಲಿಂಗೇಶ್ ಪೂಲ್ಬಾವಿ, ಶೈಕ್ಷಣಿಕ ಸಂಯೋಜಕ ಮುರಳಿದರ ಸಿಂಗರಿ, ಜಿಲ್ಲಾ ವಿಜ್ಞಾನ ಪರಿಷತ್ ಅಧ್ಯಕ್ಷ ರಾಜೇಶ್ ಅಂಗಡಿ, ಕಾರ್ಯದಶರ್ಿ ಎಸ್.ಎಸ್. ಸುಂಕದ ಹಾಗೂ ಮುಸಲಾಪೂರ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಅಬೀದಾ ಬೇಗಂ ಮತ್ತು ಶಿಕ್ಷಕ ವೃಂದ ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು, ಶುಭ ಹಾರೈಸಿದ್ದಾರೆ.