ಪೂಜ್ಯಶ್ರೀ ಕಲ್ಲಯ್ಯಜ್ಜನವರ 2611 ನೇ ತುಲಾಬಾರ

2611th Tulabara of Pujyashri Kallayyajjana

ಪೂಜ್ಯಶ್ರೀ ಕಲ್ಲಯ್ಯಜ್ಜನವರ 2611 ನೇ ತುಲಾಬಾರ  

ಗದಗ 30  : ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಚನ್ನಬಸಪ್ಪ ಲಕ್ಷ್ಮೇಶ್ವರ ಹಾಗೂ ಕುಟುಂಬದವರಿಂದ  ಕಲ್ಲಯ್ಯಜ್ಜನವರ 2611 ನೇ ತುಲಾಬಾರ ಸೇವೆ ಜರುಗಿತು.  

ಕಲ್ಲಯ್ಯಜ್ಜನವರು ಆಶೀರ್ವಚನ ನೀಡಿ ತುಲಾಬಾರದಿಂದ ಸಂಗ್ರಹವಾಗುವ ಹಣವನ್ನು  ಅಂಧ- ಅನಾಥರ ಕಲ್ಯಾಣಕ್ಕಾಗಿ  ಮೀಸಲಾಗಿರಸಲಾಗುವುದು.  ವೀರೇಶ್ವರ ಪುಣ್ಯಾಶ್ರಮ ಸೇವಾ ಕೈಂಕರ್ಯಕ್ಕೆ ತುಲಾಬಾರ ಸೇವೆ ಸಲ್ಲಿಸಿದ ಚನ್ನಬಸಪ್ಪ ಲಕ್ಷ್ಮೇಶ್ವರ ಹಾಗೂ ಅವರ ಕುಟುಂಬಕ್ಕೆ ಹಾನಗಲ್ ಕುಮಾರೇಶ್ವರ ಶ್ರೀಗಳು, ಶ್ರೀಗುರು ಪಂಚಾಕ್ಷರಿ ಗವಾಯಿಗಳು ಹಾಗೂ ಪಂ. ಪುಟ್ಟರಾಜ ಗವಾಯಿಗಳವರ ಆಶೀರ್ವಾದ ಸದಾ ಇರಲೆಂದು ಹಾರೈಸಿದರು.