ವಿಜಯಪುರ 26:ಜೋರಾಪೂರ ಪೀಠ ಶ್ರೀ ಶಂಕರಲಿಂಗ ದೇವಸ್ಥಾನದ ಆವರಣದಲ್ಲಿರುವ ಶ್ರೀ ದಾನಮ್ಮ ದೇವಿಯ 23ನೇ ವರ್ಷದ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಜಗುಗಿದವು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜಯಪುರ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ ಕಳೆದ 23 ವರ್ಷಗಳಿಂದ ಪ್ರತಿ ವರ್ಷವೂ ವಿವಿಧ ಧಾಮರ್ಿಕ, ಸಾಂಸ್ಕೃತಿಕ, ಸಮಾಜ ಜಾಗೃತಿ ಸಂಘಟನೆಯನ್ನು ಮಾಡುತ್ತಿರುವ ಶ್ರೀ ಶಂಕರಲಿಂಗ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯವನ್ನು ಶ್ಲಾಘಿಸಿ, ಶ್ರೀ ಅಡವಿ ಶಂಕರಲಿಂಗ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಶಾಸಕರ ನಿಧಿಯಲ್ಲಿ 10 ಲಕ್ಷ ರೂಪಾಯಿಗಳನ್ನು ಸಮುದಾಯ ಭವನ ನಿಮರ್ಿಸಲು ಹಾಗೂ ದೇವಸ್ಥಾದ ಅಭಿವೃದ್ಧಿಗೆ ಸದಾ ನಿಮ್ಮ ಜೊತೆಯಲ್ಲಿ ಇರುವುದಾಗಿ ಭರವಸೆ ನೀಡಿದರು. ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ ನಾನು ಶ್ರೀ ದಾನಮ್ಮ ದೇವಿ ಭಕ್ತನಾಗಿದ್ದು, ಪ್ರತಿ ಗುರುವಾರ ಯಾವುದೇ ಕೆಲಸ ಕಾರ್ಯಗಳಿದ್ದರೂ ಕೂಡ ದೇವಿಯ ದರ್ಶನ ಮಾಡಲು ತಪ್ಪಿಸುವುದಿಲ್ಲ, ದೇವಸ್ಥಾನದ ಅಭಿವೃದ್ಧಿಗೆ ನಾನೂ ಕೂಡ ಬದ್ಧನಾಗಿ ನಿಮಗೆ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಶ್ರೀ ಹುಚ್ಚೇಶ್ವರ ಸ್ವಾಮಿಗಳು (ಕಮತಗಿ) ಪ್ರವಚನಗಳನ್ನು ಆಲಿಸುವುದರಿಂದ ಪ್ರಯೋಜನವೇನು ಬಸವಣ್ಣನವರು ಹೇಳುತ್ತಾರೆ, ಮನುಷ್ಯ ಬಹಳ ಉತ್ತಮವಾಗಬೇಕಾದರೆ ಕಷ್ಟಪಡುವುದು ಅಗತ್ಯವಿಲ್ಲ, ಜೀವನ ಬಹಳ ಸರಳವಾಗಿದ್ದು, ಅವನ ಸಪ್ತ ಸೂತ್ರಗಳಾದ ಕಳಬೇಡ ಕೊಲಬೇಡ, ಹುಸಿಯ ನುಡಿಬೇಡ, ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ ಈ ವಚನ ಎಲ್ಲರಿಗೂ ಗೊತ್ತಿರುವುದೇ ಆದರೂ ಕೂಡ ಮನುಷ್ಯ ಯಾವುದೇ ಜವಬ್ದಾರಿಯಿಂದ ಕೆಲಸ ಕಾರ್ಯಗಳನ್ನು ಮಾಡುತ್ತಿಲ್ಲ. ಭಾರತ ಕೇವಲ ಮೂರಕ್ಷರದ ಹೆಸರಿನಿಂದ ಕರೆಯಲ್ಪಡುವ ದೇಶವಲ್ಲ, ನಾವೆಲ್ಲಾ ಅಲೆಕ್ಸಾಂಡರ್ನ ಹೆಸರು ಕೇಳಿರಬಹುದು ಅವನು ಈ ದೇಶದ ಮೇಲೆ ದಂಡೆತ್ತಿ ಬರಬೇಕೆಂದು ಯೋಚನೆ ಮಾಡಿ ಆ ಸಂದರ್ಭದಲ್ಲಿ ಅವರ ಗುರುಗಳಾದ ಅರಿಸ್ಟಾಟಲನ ಹತ್ತಿರ ಹೋಗಿ ಆಶರ್ಿವಾದ ಪಡೆಯಲು ಕಾಲಿಗೆ ನಮಸ್ಕರಿಸಿ ಭಾರತದ ಮೇಲೆ ದಂಡೆತ್ತಿ ಹೋಗುತ್ತಿದ್ದೇನೆ ಆಶೀರ್ವದಿಸಿ ಎಂದು ಕೇಳುತ್ತಾರೆ. ಆಗ ಅವರ ಹೇಳುತ್ತಾರೆ ಇಷ್ಟು ದಿನ ನಿನಗೆ ನಾನು ವಿಜಯಿಭವ ಅಂತಾ ಹೇಳುತ್ತಾ ಇದ್ದೆ, ಆದರೆ ನೀನು ಈಗ ಹೋಗುತ್ತಿರುವುದು ಭಾರತಕ್ಕೆ ಅದು ಬಹಳ ಪವಿತ್ರವಾದ ಭೂಮಿ ಅಲ್ಲ, ಮಾತೃಭೋಮಿ, ಅಲ್ಲಿ ಹೋಗಬೇಕಾರೆ ಬಹಳ ಎಚ್ಚರಿಕೆಯಿಂದ ಹೋಗು. ನೀನು ಕೈಯಲ್ಲಿ ಕತ್ತಿ ಹಿಡಿದು ಹೋದರೆ ಕತ್ತು ಕತ್ತರಿುಸುತ್ತಾರೆ ತಲೆತಗ್ಗಿಸಿ ಕೊಂಡು ಹೋದರೆ ನಿನ್ನ ತಲೆ ಕಾಯುತ್ತಾರೆ. ಅಮೆರಿಕ ಹಾಳಾದರೆ ಸಂಪತ್ತು ಹಾಳಾದಂತೆ, ರಷ್ಯಾ ಹಾಳಾದರೆ ವಿಜ್ಞಾನ ಹಾಳಾದಂತೆ, ಫ್ರಾನ್ಸ್ ಹಾಳಾದರೆ ಫ್ಯಾಷನ್ ಹಾಳಾದಂತೆ, ಪಾಕಿಸ್ತಾನ ಹಾಳಾದರೆ ಭಯೋತ್ಪಾನೆ ಹಾಳಾದಂತೆ, ಭಾರತ ಹಾಳಾದರೆ ನ್ಯಾಯ, ನೀತಿ, ಧರ್ಮ, ಸಂಸ್ಕೃತಿ ಹಾಳಾದಂತೆ. ದೇವಸ್ಥಾನ, ಗುಡಿ ಗುಂಡಾರಗಳು, ಮಠಗಳು ಇವೆಲ್ಲವೂ ನಮ್ಮ ಪರಂಪರೆಗಳು, ನಮ್ಮ ಮನಸ್ಸು ಪರಿವರ್ತನೆ ಆಗುವುದು ದೇವಸ್ಥಾನಗಳಲ್ಲಿ ಮಾತ್ರ, ಶಾಂತಿ, ಸಮಾಧಾನ, ನೆಮ್ಮದಿ ಸಿಗುವ ಸ್ಥಾಳ ದೇವಸ್ಥಾನಗಳು ಮಾತ್ರ ಕಾರಣ ದೇವಸ್ಥಾನಕ್ಕೆ ಬರುವಾಗ ನಾವು ನಮ್ಮದು, ನನ್ನದು ಎಂಬ ಅಹಂಕಾರ ಬಿಟ್ಟು ನಾವು ದೇವಸ್ಥಾನಕ್ಕೆ ಬರುತ್ತೇವೆ. ಕಾರಣ ನಮಗೆ ಸಮಾಧಾನ ಸಿಗುತ್ತದೆ. ಕಾರಣ ಇಂಥ ಪುರಾಣ ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳು ಮನುಷ್ಯನಿಗೆ ಅವಶ್ಯಕವಾಗಿವೆ ಎಂದು ಹೇಳಿದರು.
ಪುರಾಣಿಕರಾದ ಶ್ರೀ ಶಿವಾನಂದಯ್ಯಾ ಶಾಸ್ತ್ರೀಗಳು ಪುರಾಣ ಮಂಗಲ ನೇರವೇರಿಸಿದರು. ಸಾಮೂಹಿಕ ವಿವಾಹದ ಅಕ್ಷತಾ ರೋಪಣ ಕಾರ್ಯವನ್ನು ಶ್ರೀ ವೇದಮೂತರ್ಿ ಚಿದಾನಂದ ಸ್ವಾಮೀಜಿಗಳು ನೆರವೇರಿಸಿದರು. ಈ ಕಾರ್ಯಕ್ರಮಕ್ಕೆ ಸಹಾಯ ಸಹಕಾರ ನೀಡಿದ ದಾನಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಉಮಾಕಾಂತ ಲೋಣಿ, ರೇವಣಸಿದ್ದಪ್ಪ ಗಿಡವೀರ, ಶಿವರುದ್ರ ಬಾಗಲಕೋಟ, ಕಾಡಪ್ಪ ಲೋಣಿ, ಸಿದ್ಲಿಂಗಪ್ಪ ತೆಲಸಂಗ, ಶಂಕರ ಹೇರಲಗಿ, ವಿರುಪಾಕ್ಷಿ ಶಾಬಾದಿ, ಸಿದ್ದಪ್ಪ ಉಪ್ಪಿಣಗಿ, ಶಂಕರ ಲೋಣಿ, ಈರಣ್ಣ ಹೆರಲಗಿ, ಪವಾಡೆಪ್ಪ ಗಿಡವೀರ, ಸೂರಪ್ಪ ಮಿಜರ್ಿ, ರವಿ ಪಟ್ಟಣ, ಪ್ರವೀಣ ಹೆರಲಗಿ, ಚಂದ್ರಶೇಖರ ಶಹಾಪೂರ, ಶಂಕರ ಕುಲರ್ೆ, ಸುವರ್ಣ ಕುಲರ್ೆ, ಮೋಹನ್ ಹೆರಲಗಿ, ಸೋಮಶೇಖರ ಶಾಬಾದಿ, ರಾಚಪ್ಪ ಮೇದಿ, ಅರುಣ ಹೇಲಗಿ, ಹುಚ್ಚಪ್ಪ ಶೆಟ್ಟಿ ಉಪಸ್ಥಿತರಿದ್ದರು. ಮಲ್ಲಪ್ಪ ಹೇರಲಗಿ ನಿರೂಪಿಸಿದರು. ಉಮೇಶ ವಂದಾಲ ಸ್ವಾಗತಿಸಿದರು