ಶಿವಶಾಂತವೀರ ಮಹಾಶಿವಯೋಗಿಗಳ 22ನೇ ಪುಣ್ಯರಾಧನೆ ನಿಮಿತ್ಯ ಪಾದಯಾತ್ರೆ
ಕೊಪ್ಪಳ 23: ಸಂಸ್ಥಾನ ಗವಿಮಠದ ಶಿವಶಾಂತವೀರ ಮಹಾಶಿವಯೋಗಿಗಳ ಪುಣ್ಯರಾಧನೆ ನಿಮಿತ್ಯ ದಿನಾಂಕ 23 ರಂದು ಬೆಳಿಗ್ಗೆ 6:00 ಗಂಟೆಗೆ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಮಳೆಮಲ್ಲೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಪ್ರಾರಂಭವಾಗಿ ಅಶೋಕ್ ಸರ್ಕಲ್ ಹಾಗೂ ಗಡಿಯಾರ ಕಂಬದ ಮುಖಾಂತರ ಗವಿಮಠಕ್ಕೆ 9:00ಗಂಟೆಗೆ ತಲುಪಿತು. ನಗರದ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು, ವಿದ್ಯಾರ್ಥಿಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪಾದಯಾತ್ರೆಯ ನಂತರ ಗವಿಸಿದ್ಧೇಶ್ವರ ಕತೃ ಗದ್ದುಗೆ ಹಾಗೂ ಶಿವಶಾಂತವೀರ ಮಹಾಸ್ವಾಮಿಗಳ ಗದ್ದುಗೆಯ ದರ್ಶನ ಪಡೆದು ಧನ್ಯರಾದರು. ಶ್ರೀಮಠದ ದಾಸೋಹದಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೆ ಭಕ್ತಾಧಿಗಳು ಪ್ರಸಾದವನ್ನು ಸ್ವೀಕರಿಸಿದರು ಎಂದು ಗವಿಮಠದ ಪ್ರಕಟಣೆಯಲ್ಲಿ ತಿಳಿಸಿದೆ.