2025-26 ನೇ ಸಾಲಿನ ಸದಸ್ಯತ್ವ ನವೀಕರಣ ಹಾಗೂ ಹೊಸ ಸದಸ್ಯತ್ವ ಪ್ರಕ್ರಿಯೆ- ಮಾರ್ಚ 6 ರವರೆಗೆ ದಿನಾಂಕ ವಿಸ್ತರಣೆ

2025-26 membership renewal and new membership process- date extension upto 6th March

2025-26 ನೇ ಸಾಲಿನ ಸದಸ್ಯತ್ವ ನವೀಕರಣ ಹಾಗೂ ಹೊಸ ಸದಸ್ಯತ್ವ ಪ್ರಕ್ರಿಯೆ- ಮಾರ್ಚ 6 ರವರೆಗೆ ದಿನಾಂಕ ವಿಸ್ತರಣೆ

ಗದಗ 03 : ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕಕ್ಕೆ 2025-26 ನೇ ಸಾಲಿಗೆ ಸದಸ್ಯತ್ವ ನವೀಕರಣ ಹಾಗೂ ನೂತನವಾಗಿ ಸದಸ್ಯತ್ವ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ. ಮುಳಗುಂದ ರಸ್ತೆಯ ‘ಪತ್ರಿಕಾ ಭವನ’ದಲ್ಲಿ (ಅಂಬಾಭವಾನಿ ದೇವಸ್ಥಾನ ಎದುರು) ಸದಸ್ಯತ್ಯ ಹಾಗೂ ನವೀಕರಣಕ್ಕೆ ಅಗತ್ಯ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿ, ನಿಗದಿಪಡಿಸಿದ ಅರ್ಜಿ ಶುಲ್ಕ 10 ರೂ. ಹಾಗೂ ಸದಸ್ಯತ್ವ/ನವೀಕರಣ ಶುಲ್ಕ 500 ರೂ. ಸೇರಿ ಒಟ್ಟು 510 ರೂ. ಪಾವತಿಸಿ ಅಗತ್ಯ ದಾಖಲೆಗಳೊಂದಿಗೆ ನೀಡಬೇಕು.ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸುವ ಮತ್ತು ಆರ್‌ಎನ್‌ಐ ಸಂಖ್ಯೆ ಹೊಂದಿರುವ ದಿನಪತ್ರಿಕೆಗಳು ಕಡ್ಡಾಯವಾಗಿ ಕನಿಷ್ಟ ಎರಡು ವರ್ಷ ಪೂರೈಸಿ, ನಿಯಮಿತವಾಗಿ ಎರಡು ವರ್ಷ ಕಡ್ಡಾಯವಾಗಿ ಪ್ರಕಟಗೊಂಡಿದ್ದಲ್ಲಿ ಮಾತ್ರ ಅಂತಹ ಸಂಸ್ಥೆಗಳ ಪತ್ರಕರ್ತರು ಸದಸ್ಯತ್ವ ಪಡೆಯಲು ಅರ್ಹರು.ಅರ್ಜಿ ಪಡೆದು, ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಕಡ್ಡಾಯವಾಗಿ ಮಾರ್ಚ್‌ 6 ರೊಳಗೆ ಸಲ್ಲಿಸಬೇಕು. ಸದಸ್ಯತ್ವ/ನವೀಕರಣ ಅರ್ಜಿ ಹಾಗೂ ಸದಸ್ಯತ್ವ ಪಡೆಯಲು ಇರುವ ನಿಯಮಗಳ ಬಗ್ಗೆ ಪತ್ರಿಕಾ ಭವನದ ಫಲಕದಲ್ಲಿ ಅಳವಡಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅರ್ಜಿ ಪಡೆಯಲು ಮತ್ತು ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಬಹುದು.ಸದಸ್ಯತ್ವ ಅರ್ಜಿಗೆ ಮಾರ್ಗಸೂಚಿಗಳು: ಜಿಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಅಧ್ಯಕ್ಷರುರಕರ್ತರನ್ನು ಹೊರತುಪಡಿಸಿ ಲಕ್ಷ್ಮೇಶ್ವರ, ಮುಂಡರಗಿ, ಶಿರಹಟ್ಟಿ, ನರಗುಂದ, ಗಜೇಂದ್ರಗಡ ಹಾಗೂ ರೋಣ ತಾಲ್ಲೂಕಿನ ಸದಸ್ಯರು ಆಯಾ ತಾಲ್ಲೂಕಿನ ಅಧ್ಯಕ್ಷ / ಪ್ರಧಾನ ಕಾರ್ಯದರ್ಶಿ  ಬಳಿಯೇ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ಉಳಿದಂತೆ ನರೇಗಲ್ಲ ಹಾಗೂ ಮುಳಗುಂದ ಹೋಬಳಿಯ ಸದಸ್ಯರು ಸ್ಥಳೀಯ ಹೋಬಳಿ ಘಟಕದ ಅಧ್ಯಕ್ಷರ ಮೂಲಕ ಸಲ್ಲಿಸಬೇಕು. ಆಯಾ ತಾಲ್ಲೂಕು ಘಟಕದವರೇ ‘ಪಟ್ಟಿ ಸಿದ್ಧಪಡಿಸಿ’, ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾ ಸಂಘಕ್ಕೆ ಕಳುಹಿಸಿ ಕೊಡಬೇಕು.ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9845181281 ಸಂಪರ್ಕಿಸಲು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾಧ್ಯಕ್ಷ ರಾಜು ಎಂ. ಹೆಬ್ಬಳ್ಳಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.