ಲೋಕದರ್ಶನ ವರದಿ
ಕಾಗವಾಡ 12: ಧರ್ಮಸ್ಥಳದ ಡಾ. ವಿರೇಂದ್ರಜಿ ಹೆಗ್ಡೆ ಇವರ ನೇತೃತ್ವದಲ್ಲಿ ಸ್ಥಾಪಿಸಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖಾಂತರ ಉಗಾರ ಬುದ್ರುಕ ಗ್ರಾಮದ 1008 ಭಗವಾನ್ ಮಹಾವೀರ ಜೈನ್ ಮಂದಿರದಲ್ಲಿ ಮುನಿನಿವಾಸ್ ಕಟ್ಟಿಸಲು 2 ಲಕ್ಷ ರೂ. ದಾನವಾಗಿ ನೀಡಿದರು.
ಮಂಗಳವಾರ ರಂದು ಉಗಾರ ಬುದ್ರುಕ ಗ್ರಾಮದ ಭಗವಾನ್ ಮಹಾವೀರ ದಿಗಂಬರ ಜೈನ್ ಮಂದಿರದಲ್ಲಿ ಚೇಕ್ ವಿತರಣೆ ಕಾರ್ಯಕ್ರಮ ನೆರವೇರಿತು.
ಸಮಾರಂಭದ ಆಧ್ಯಕ್ಷತೆ ವಹಿಸಿದ ಉಗಾರ ಪಿಕೆಪಿಎಸ್ ಸಂಘದ ಆಧ್ಯಕ್ಷ ಶೀತಲ ಪಾಟೀಲ ಮಾತನಾಡಿ, ನಡೆದಾಡುವ ದೇವರಾದ ವಿರೇಂದ್ರಜಿ ಹೆಗ್ಡೆ ಇವರು ಇಡಿ ರಾಜ್ಯದಲ್ಲಿ ಸರ್ವಧರ್ಮದ ಅಭಿವೃದ್ಧಿಗಾಗಿ ಮಾಡಿದ ಕಾರ್ಯ ಇಡಿ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡದ ಪ್ರಾದೇಶಿಕ ನಿದರ್ೇಶಕರಾದ ದುಗ್ಗೆಗೌಡರ ಇವರು ಮಂದಿರದ ಆಧ್ಯಕ್ಷ ದೇವಗೌಡಾ ಪಾಟೀಲ ಇವರಿಗೆ 2 ಲಕ್ಷ ರೂ. ಗಳ ಚೇಕ್ ನೀಡಿದರು.
ಸಮಾರಂಭದಲ್ಲಿ ಧರ್ಮಸ್ಥಳದ ಜಿಲ್ಲಾ ನಿದರ್ೇಶಕ ಎಂ.ಶೇನಪ್ಪಾ, ಅಥಣಿ ತಾಲೂಕಾ ಯೋಜನಾಧಿಕಾರಿ ರಾಜು ನಾಯಿಕ, ಸತೀಶ ಸುವಣರ್ಾ, ಪಕರೇಶ ಇಂಗಳೆ, ಉಗಾರದ ಪುಷ್ಪಾ ಅಲತಗೆ, ಸೇರಿದಂತೆ ಸಮಾಜದ ಅನೇಕ ಮುಖಂಡರು ಪಾಲ್ಗೊಂಡಿದ್ದರು.